ಒನ್‌ಪ್ಲಸ್‌ 10 ಪ್ರೊ ಫೋನ್ ಬೆಲೆ ಲೀಕ್!..ಅಚ್ಚರಿಗೊಂಡ ಸ್ಮಾರ್ಟ್‌ಫೋನ್ ಪ್ರಿಯರು!

|

ಪ್ರಮುಖ ಮೊಬೈಲ್ ಕಂಪೆನಿಗಳ ಪೈಕಿ ಒಂದಾದ ಒನ್‌ಪ್ಲಸ್‌ (OnePlus) ಭಿನ್ನ ಶ್ರೇಣಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇತ್ತೀಚಿಗಷ್ಟೆ ತನ್ನ ಫೋನ್‌ಗಳ ಲಿಸ್ಟ್‌ಗೆ ನೂತನವಾಗಿ ಒನ್‌ಪ್ಲಸ್‌ 9 ಸರಣಿಯನ್ನು ಸೇರ್ಪಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಆದ್ರೆ ಕಂಪನಿಯ ಬಹುನಿರೀಕ್ಷಿತ ಒನ್‌ಪ್ಲಸ್‌ 10 ಪ್ರೊ ಫೋನ್ ಇದೀಗ ಸ್ಮಾರ್ಟ್‌ಫೋನ್‌ ಪ್ರಿಯರ ಕುತೂಹಲ ಹೆಚ್ಚಿಸಿದ್ದು, ಬಿಡುಗಡೆಯನ್ನು ಎದುರುನೋಡುವಂತಾಗಿದೆ. ಹಾಗೆಯೇ ಒನ್‌ಪ್ಲಸ್‌ 10 ಪ್ರೊ ಫೋನಿನ ಬೆಲೆಯು ಲೀಕ್ ಆಗಿದ್ದು, ಗ್ರಾಹಕರಲ್ಲಿ ಅಚ್ಚರಿ ತಂದಿದೆ.

ಒನ್‌ಪ್ಲಸ್‌ 10 ಪ್ರೊ ಫೋನ್ ಬೆಲೆ ಲೀಕ್!..ಅಚ್ಚರಿಗೊಂಡ ಸ್ಮಾರ್ಟ್‌ಫೋನ್ ಪ್ರಿಯರು!

ಹೌದು, ಒನ್‌ಪ್ಲಸ್‌ ಸಂಸ್ಥೆಯು ನೂತನವಾಗಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಜನವರಿ 11 ರಂದು ಚೀನಾದಲ್ಲಿ ಅನಾವರಣ ಮಾಡಲಿದೆ. ಈ ಫೋನಿನ ಕೆಲವು ಫೀಚರ್ಸ್‌ಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಹಾಗೆಯೇ ಒನ್‌ಪ್ಲಸ್‌ 10 ಪ್ರೊ ಫೋನಿನ ಬೆಲೆಯ ಬಗ್ಗೆ ಮಾಹಿತಿ ಲೀಕ್ ಆಗಿವೆ. ಈ ಫೋನ್ ಈ ಹಿಂದಿನ ಒನ್‌ಪ್ಲಸ್‌ 9 ಪ್ರೊ ಫೋನಿಗಿಂತ ಕಡಿಮೆ ಆಗಿರಲಿದೆ ಎಂದು ಹೇಳಲಾಗಿದೆ.

ಒನ್‌ಪ್ಲಸ್‌ 10 ಪ್ರೊ ಫೋನ್ 8GB RAM + 128GB , 8GB RAM + 256GB ಮತ್ತು 12GB RAM + 256GB ಮೂರು ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಹಾಗೆಯೇ ಈ ಫೋನ್ ಚೀನಾದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ಇನ್ನು ಈ ವೇರಿಯಂಟ್‌ಗಳ ಬೆಲೆಗಳು ಕ್ರಮವಾಗಿ 3,000 ಯುವಾನ್ (ಸುಮಾರು ರೂ. 35,000) ಮತ್ತು 3,999 ಯುವಾನ್ (ಸುಮಾರು ರೂ. 46,700) ಮತ್ತು 4,999 ಯುವಾನ್ (ಸುಮಾರು ರೂ. 58,392) ನಡುವೆ ಬರುತ್ತವೆ ಎಂದು ಹೇಳಲಾಗಿದೆ.

ಒನ್‌ಪ್ಲಸ್‌ 10 ಪ್ರೊ ಫೋನ್ ಬೆಲೆ ಲೀಕ್!..ಅಚ್ಚರಿಗೊಂಡ ಸ್ಮಾರ್ಟ್‌ಫೋನ್ ಪ್ರಿಯರು!

ಹಾಗೆಯೇ ಮುಂದೆ ಬರಲಿರುವ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಒಳಗೊಂಡಿರಲಿದೆ. ಇನ್ನು ಈ ಸಾಧನವು 2K ರೆಸಲ್ಯೂಶನ್ ಮತ್ತು 120Hz ನ ವೇರಿಯಬಲ್ ರಿಫ್ರೆಶ್ ದರ ಪಡೆದಿರಲಿದೆ. ಒನ್‌ಪ್ಲಸ್‌ 10 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತದೆ.

ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಉಳಿದಂತೆ 50 ಮೆಗಾ ಪಿಕ್ಸಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಇರಲಿದೆ. ಹಾಗೆಯೇ 8 ಮೆಗಾ ಪಿಕ್ಸಲ್ ಸೆನ್ಸಾರ್ ಟೆಲಿಫೋಟೋ ಲೆನ್ಸ್ ಸಹ ಒಳಗೊಂಡಿರಲಿದೆ ಎನ್ನಲಾಗಿದೆ. ಇದರೊಂದಿಗೆ ಸೆಲ್ಫಿಗಾಗಿ, ಮುಂಭಾಗದಲ್ಲಿ ಪಂಚ್ ಹೋಲ್ ಕಟೌಟ್‌ನಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಒನ್‌ಪ್ಲಸ್‌ 10 ಪ್ರೊ ಫೋನ್ ಆಂಡ್ರಾಯ್ಡ್‌ 12 ಆಧಾರಿತ OxygenOS 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಈ ಫೋನ್ LTPO 2.0 ತಂತ್ರಜ್ಞಾನವನ್ನು ಬಳಸುವುದನ್ನು ದೃಢೀಕರಿಸಿದೆ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಜೊತೆಗೆ ಈ ಫೋನ್ 12GB ವರೆಗೆ LPDDR5 RAM ಮತ್ತು 256 GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಬರಬಹುದು. ಒನ್‌ಪ್ಲಸ್‌ 10 ಪ್ರೊ Hasselblad ಬ್ರ್ಯಾಂಡಿಂಗ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಒನ್‌ಪ್ಲಸ್‌ ಬ್ರ್ಯಾಂಡಿಂಗ್ ಇದೆ. ಸ್ಲೈಡರ್ ಜೊತೆಗೆ ಬಲ ಭಾಗದಲ್ಲಿ ಪವರ್ ಬಟನ್ ಅನ್ನು ಸಹ ಹೊಂದಿದೆ.

Most Read Articles
Best Mobiles in India

English summary
OnePlus 10 Pro Price Tipped Ahead of Launch: Features, Camera And More. Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X