Just In
Don't Miss
- News
ಇನ್ನೊಂದು ತಿಂಗಳಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಥಿತಿ ಹೇಗಿರುತ್ತೆ? ಇಲ್ಲಿದೆ ವಿಶ್ಲೇಷಕರ ಮಾತು...
- Sports
MI vs SRH : ಐಪಿಎಲ್ 2021: ಮುಂಬೈ vs ಹೈದರಾಬಾದ್: ಸಂಭಾವ್ಯ ತಂಡ, ಹವಾಮಾನ, ಪಿಚ್ ರಿಪೋರ್ಟ್
- Education
FSSAI Recruitment 2021: 38 ವ್ಯವಸ್ಥಾಪಕ ಮತ್ತು ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಹ್ಯಾರಿ ಪಾಟರ್ ನಟಿ ಹೆಲೆನ್ ಮೆಕ್ರೋರಿ ನಿಧನ
- Lifestyle
ನಿಮ್ಮ ಸೈನಸ್ ನೋವನ್ನು ತೊಡೆದುಹಾಕಲು ಇಲ್ಲಿದೆ ಸುಲಭ ಪರಿಹಾರಗಳು
- Automobiles
8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್ಯುವಿಗಳು
- Finance
LIC ಉದ್ಯೋಗಿಗಳಿಗೆ ಗುಡ್ನ್ಯೂಸ್: ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಒನ್ಪ್ಲಸ್ 8 ಪ್ರೊ' ಬಿಡುಗಡೆಗೆ ಅಧಿಕೃತ ದಿನಾಂಕ ಘೋಷಣೆಯೊಂದೇ ಬಾಕಿ!
ದೇಶಯ ಮಾರುಕಟ್ಟೆಯಲ್ಲಿ ಒನ್ಪ್ಲಸ್ ಮೊಬೈಲ್ ಸಂಸ್ಥೆಯು ಗ್ರಾಹಕರ ನೆಚ್ಚಿನ ಮೊಬೈಲ್ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ. ಒನ್ಪ್ಲಸ್ ಸಂಸ್ಥೆಯು ಇತ್ತೀಚಿಗೆ ಒನ್ಪ್ಲಸ್ 7' ಫೋನ್ ಸರಣಿ ಫೋನ್ಗಳ ಮೂಲಕ ಭಾರಿ ಯಶಸ್ಸನ್ನು ಕಂಡಿದೆ. ಸದ್ಯ ಒನ್ಪ್ಲಸ್ ಸಂಸ್ಥೆಯು ಒನ್ಪ್ಲಸ್ 8 ಸರಣಿ ಫೋನ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಅಧಿಕೃತವಾಗಿ ಬಿಡುಗಡೆಯ ದಿನಾಂಕ ಘೋಷಿಸುವುದೊಂದೆ ಬಾಕಿ ಉಳಿದಿದೆ.

ಹೌದು, ಒನ್ಪ್ಲಸ್ ಸಂಸ್ಥೆಯು ಇದೀಗ ಒನ್ಪ್ಲಸ್ 8 ಸರಣಿ ಲಾಂಚ್ಗೆ ತಯಾರಾಗುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಒನ್ಪ್ಲಸ್ 8 ಸರಣಿ ಈಗಾಗಲೆ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಅಂದಹಾಗೆ ಒನ್ಪ್ಲಸ್ 8 ಸರಣಿಯು ಅಮೆಜಾನ್ ಅಫಿಲಿಯೆಟ್ (Affiliate) ಪೇಜ್ನಲ್ಲಿ ಕಾಣಿಸಿಕೊಂಡಿದ್ದು, ಸದ್ಯದಲ್ಲಿಯೇ ಲಾಂಚ್ ಆಗುವ ಸೂಚನೆ ಹೊರಹಾಕಿದೆ. ಬರಲಿರುವ ಒನ್ಪ್ಲಸ್ 8 ಸರಣಿಯು ಒಟ್ಟು ಮೂರು ಫೋನ್ ಮಾದರಿಗಳನ್ನು ಒಳಗೊಂಡಿರಲಿದ್ದು, ಅವುಗಳು ಕ್ರಮವಾಗಿ ಒನ್ಪ್ಲಸ್ 8 ಲೈಟ್, ಒನ್ಪ್ಲಸ್ 8 ಮತ್ತು ಒನ್ಪ್ಲಸ್ 8 ಪ್ರೊ ಸ್ಮಾರ್ಟ್ಫೋನ್ ಆಗಿರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಒನ್ಪ್ಲಸ್ 8 ಲೈಟ್
ಒನ್ಪ್ಲಸ್ 8 ಸರಣಿಯಲ್ಲಿಲ್ಲಿ ಒನ್ಪ್ಲಸ್ 8 ಲೈಟ್ ಸಹ ಒಂದಾಗಿರಲಿದೆ. ಇನ್ನು ಈ ಫೋನ್ ಬಹುತೇಕ ಒನ್ಪ್ಲಸ್ 7T ಫೋನಿನಂತೆ ಇರಲಿದೆ ಎನ್ನಲಾಗಿದೆ. 5G ನೆಟವರ್ಕ್ ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಈ ಫೋನ್ 1000 Dimensity ಸಾಮರ್ಥ್ಯದ ಮೀಡಿಯಾ ಟೆಕ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. 6.4 ಇಂಚಿನ ಡಿಸ್ಪ್ಲೇ ಹೊಂದಿರಲಿದ್ದು, ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್ಅಪ್ ಪಡೆದಿರುತ್ತದೆ. ಮುಖ್ಯ ಕ್ಯಾಮೆರಾವು 48ಎಂಪಿ ಇರುವ ಸಾಧ್ಯತೆಗಳಿವೆ. ಇನ್ನು ಇದೊಂದು ಅತ್ಯುತ್ತಮ ಫ್ಲ್ಯಾಗ್ಶಿಫ್ ಫೋನ್ ಎಂಬ ಹೆಗ್ಗಳಿಕೆ ಗಳಿಸಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಒನ್ಪ್ಲಸ್ 8
ಒನ್ಪ್ಲಸ್ 8 ಫೋನ್ ಸಾಕಷ್ಟು ಹೊಸ ಅಪ್ಡೇಟ್ ವರ್ಷನ್ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 865 ಪ್ರೊಸೆಸರ್ ಒಳಗೊಂಡಿರಲಿದ್ದು, ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 60ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದ್ದು, ಹೆಚ್ಚಿನ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡುವ ಲಕ್ಷಣಗಳಿವೆ. AMOLED ಮಾದರಿಯ ಡಿಸ್ಪ್ಲೇ ಇರಲಿದ್ದು, ಡಿಸ್ಪ್ಲೇ ರೀಫ್ರೇಶ ರೇಟ್ 90Hz ಆಗಿರಲಿದೆ.

ಒನ್ಪ್ಲಸ್ 8 ಪ್ರೊ
ಇಲ್ಲಿಯ ವರೆಗಿನ ಎಲ್ಲ ಒನ್ಪ್ಲಸ್ ಫೋನ್ಗಳಿಗಿಂತ ಭಾರಿ ವಿಶೇಷತೆಗಳೊಂದಿಗೆ ಹೊಸ ಒನ್ಪ್ಲಸ್ 8 ಪ್ರೊ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ 6.7 ಇಂಚಿನ ಕ್ವಾಡ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿರಲಿದ್ದು, ಡಿಸ್ಪ್ಲೇ ರೀಫ್ರೇಸ್ ರೇಟ್ 120Hz ಆಗಿರಲಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3D ಫೇಶಿಯಲ್ ರಿಕಗ್ನೇಸ್ ಆಯ್ಕೆ, ToF, ಕರ್ವ್ ಎಡ್ಜ್ ರಚನೆ ಇರಲಿವೆ. ಇನ್ನು ಈ ಫೋನಿನ ಮೇನ್ ಕ್ಯಾಮೆರಾವು 64ಎಂಪಿ ಸೆನ್ಸಾರ್ನಲ್ಲಿರಲಿದ್ದು, 4500mAh ಸಾಮರ್ಥ್ಯ ಬ್ಯಾಟರಿ ನಿರೀಕ್ಷಿಸಲಾಗುತ್ತಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999