ಒನ್‌ಪ್ಲಸ್ ಮುಂದೆ ಸ್ಯಾಮ್‌ಸಂಗ್ ಮತ್ತು ಆಪಲ್ ಆಟಕ್ಕಿಲ್ಲ ಬೆಲೆ!

|

ಕಳೆದೆರಡು ವರ್ಷಗಳಿಂದ ದೇಶದ ಪ್ರೀಮಿಯಂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಒನ್‌ಪ್ಲಸ್ ಕಂಪೆನಿಯ ಆರ್ಭಟ ಈ ವರ್ಷವೂ ಮುಂದುವರೆದಿದೆ. ದೇಶದ ಪ್ರೀಮಿಯಂ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ 2019ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲೂ ಒನ್‌ಪ್ಲಸ್ ಮೊದಲ ಸ್ಥಾನ ಗಳಿಸಿಕೊಂಡಿದ್ದು, ಎರಡನೇ ತ್ರೈಮಾಸಿಕದಲ್ಲಿ ಶೇ 43 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ಪ್ರೀಮಿಯಂ ವಿಭಾಗದಲ್ಲಿ (ರೂ. 30,000 ಮತ್ತು ಅದಕ್ಕಿಂತ ಹೆಚ್ಚಿನ) ಮುಂಚೂಣಿಯಲ್ಲಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ತಿಳಿಸಿದೆ.

ಒನ್‌ಪ್ಲಸ್ ಮುಂದೆ ಸ್ಯಾಮ್‌ಸಂಗ್ ಮತ್ತು ಆಪಲ್ ಆಟಕ್ಕಿಲ್ಲ ಬೆಲೆ!

ಹೌದು, ತನ್ನ ಇತ್ತೀಚಿನ ಒನ್‌ಪ್ಲಸ್ 7 ಸರಣಿಯಲ್ಲಿ ಸವಾರಿ ಮಾಡುತ್ತಿರುವ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಪ್ರೀಮಿಯಂ ವಿಭಾಗದಲ್ಲಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಇನ್ನು ಇದೇ ಮೊದಲ ಬಾರಿಗೆ ಅಲ್ಟ್ರಾ-ಪ್ರೀಮಿಯಂ (ರೂ. 45,000 ಮತ್ತು ಅದಕ್ಕಿಂತ ಹೆಚ್ಚಿನದು) ವಿಭಾಗಕ್ಕೆ ಎಂಟ್ರಿ ನೀಡಿ ಅಲ್ಲಿಯೂ ಸೈ ಎನಿಸಿಕೊಂಡಿದೆ. ಅಲ್ಟ್ರಾ-ಪ್ರೀಮಿಯಂ ವಿಭಾಗಕ್ಕೆ ಪಾದಾರ್ಪಣೆ ಮಾಡಿರುವ ಕಂಪೆನಿ ತಕ್ಷಣವೇ 26 ಪ್ರತಿಶತದಷ್ಟು ಪಾಲನ್ನು ಪಡೆದುಕೊಂಡು ಸ್ಯಾಮ್‌ಸಂಗ್ ಮತ್ತು ಆಪಲ್ ಜೊತೆಗೆ ಮಾರುಕಟ್ಟೆ ಹಂಚಿಕೊಂಡಿದೆ.

ಎರಡನೇ ತ್ರೈಮಾಸಿಕದಲ್ಲಿ ದೇಶದ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು ವಾರ್ಷಿಕವಾಗಿ ಶೇಕಡಾ 33 ರಷ್ಟು ಹೆಚ್ಚಿವೆ. ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ಆಪಲ್‌ನ ಒಟ್ಟು ಪಾಲು 85 ಪ್ರತಿಶತದಷ್ಟಿದ್ದು, ಒನ್‌ಪ್ಲಸ್ ಮೊದಲ ಸ್ಥಾನ ಪಡೆದುಕೊಂಡರೆ, ಶೇ. 26 ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದೆ. ಗ್ಯಾಲಕ್ಸಿ ಎಸ್ 10ಇ ಲಭ್ಯತೆಯ ಹೊರತಾಗಿಯೂ, ಗ್ಯಾಲಕ್ಸಿ ಎಸ್ 10 ಪ್ಲಸ್ ಸ್ಯಾಮ್‌ಸಂಗ್‌ ಕಂಪೆನಿಯ ಉನ್ನತ ಮಾದರಿ ಫೋನ್ ಆಗಿ ಹೊರಹೊಮ್ಮಿದೆ ಎಂದು ರಿಪೋರ್ಟ್ ತಿಳಿಸಿದೆ.

ಒನ್‌ಪ್ಲಸ್ ಮುಂದೆ ಸ್ಯಾಮ್‌ಸಂಗ್ ಮತ್ತು ಆಪಲ್ ಆಟಕ್ಕಿಲ್ಲ ಬೆಲೆ!

ಕೌಂಟರ್ಪಾಯಿಂಟ್ ರಿಸರ್ಚ್ ನೀಡಿದ ಮಾರುಕಟ್ಟೆ ವರದಿ ಕುರಿತು ಪ್ರತಿಕ್ರಿಯಿಸಿರುವ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್ವಾಲ್ ಅವರು, 'ನಮ್ಮ ಗ್ರಾಹಕ ಸ್ನೇಹಿ ಉತ್ಪನ್ನಗಳ ಸಿದ್ಧಾಂತವು ಉದ್ಯಮದ ಕುಸಿತದ ನಂತರವೂ ಗಮನಾರ್ಹ ವಹಿವಾಟು ದಾಖಲಿಸಲು ನೆರವಾಗಿದೆ ಎಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಒಟ್ಟಾರೆ ಸ್ಮಾರ್ಟ್‌ಪೋನ್ ವಿಭಾಗದಲ್ಲಿ ಶೇ. 5ಕ್ಕಿಂತ ಕಡಿಮೆ ಷೇರು ಹೊಂದಿದ್ದ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸಂತಸ ತಂದಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!

ಇನ್ನು ಈ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಅತಿ ಹೆಚ್ಚು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ನಾವು ನೋಡಬಹುದು.ಶಿಯೋಮಿ, ಒಪ್ಪೊ, ವಿವೋ ಮತ್ತು ಹುವಾವೆಯಂತಹ ಬ್ರಾಂಡ್‌ಗಳು ಪ್ರೀಮಿಯಂ ಮಾರುಕಟ್ಟೆ ವಲಯವನ್ನು ಪ್ರವೇಶಿಸಿರುವುದರಿಂದ, ಈ ಪ್ರೀಮಿಯಂ ಸೆಗ್ಮೆಂಟ್ 2019ರ ದ್ವಿತೀಯಾರ್ಧದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಲಿದೆ ಎಂದು ಅಭಪ್ರಾಯಪಡಲಾಗಿದೆ. ಇದು ಗ್ರಾಹಕರಿಗೆ ಮತ್ತಷ್ಟು ಹೊಸ ಆಯ್ಕೆಗಳನ್ನು ನೀಡಲಿದೆ ಎಂದು ಮೊಬೈಲ್ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

Most Read Articles
Best Mobiles in India

English summary
Riding on its flagship OnePlus 7 series, Chinese smartphone maker OnePlus captured its highest-ever shipment share of 43 percent in the second quarter (Q2) to become the leader in the premium segment (Rs. 30,000 and above) in India, Counterpoint Research said on Wednesday. to know more visit to kannada.gizbotcom

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more