ಒನ್‌ಪ್ಲಸ್‌ ಸೇಲ್: ಒನ್‌ಪ್ಲಸ್‌ ಡಿವೈಸ್‌ಗಳನ್ನು ಖರೀದಿ ಮಾಡಲು ಇದುವೇ ಸಕಾಲ!

|

ಟೆಕ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪನಿಯು ಭಿನ್ನ ಡಿವೈಸ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ, ಸ್ಮಾರ್ಟ್‌ ಟಿವಿ ಹಾಗೂ ಇತರೆ ಉತ್ಪನ್ನಗಳು ಜನಪ್ರಿಯವಾಗಿವೆ. ನೀವೇನಾದರೂ ಒನ್‌ಪ್ಲಸ್‌ ಕಂಪನಿಯ ಡಿವೈಸ್‌ ಖರೀದಿಸುವ ಯೋಜನೆ ಇದ್ರೆ, ಅದಕ್ಕೆ ಈಗ ಒಂದು ಬೊಂಬಾಟ್ ಆಫರ್ ಒದಗಿ ಬಂದಿದೆ. ಏಕೆಂದರೇ ಸದ್ಯ ಕಂಪನಿಯ ಒನ್‌ಪ್ಲಸ್ ಕಮ್ಯೂನಿಟಿ ಸೇಲ್ ಆಯೋಜಿಸಿದೆ.

ಒನ್‌ಪ್ಲಸ್

ಹೌದು, ಒನ್‌ಪ್ಲಸ್ ಕಂಪನಿಯು ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌ ಅನ್ನು ಇಂದು ಪ್ರಾರಂಭಿಸಿದೆ. ಈ ಸೇಲ್‌ ಮೇಳವು ಜೂನ್ 24 ರಿಂದ ಪ್ರಾರಂಭವಾಗಿ ಜೂನ್ 27 ರವರೆಗೆ ಮುಂದುವರಿಯುತ್ತದೆ. ಒನ್‌ಪ್ಲಸ್‌ನ ಅಧಿಕೃತ ಪೋರ್ಟಲ್ ಮತ್ತು ಅಮೆಜಾನ್‌ನಲ್ಲಿ ಕೊಡುಗೆಗಳು ಸಕ್ರಿಯವಾಗಿರುತ್ತವೆ. ಈ ಸೇಲ್‌ನಲ್ಲಿ ಅತ್ಯುತ್ತಮ ಕೊಡುಗೆಗಳ ಪಡೆದ ಕೆಲವು ಗಮನಾರ್ಹ ಉತ್ಪನ್ನಗಳನ್ನು ಪಡೆದಿವೆ. ಹಾಗಾದರೇ ಒನ್‌ಪ್ಲಸ್‌ ಕಮ್ಯೂನಿಟಿ ಸೇಲ್‌ನಲ್ಲಿ ಅತ್ಯುತ್ತಮ ಆಫರ್‌ ಪಡೆದ ಡಿವೈಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ 9 ಪ್ರೊ ಫೋನ್

ಒನ್‌ಪ್ಲಸ್ 9 ಪ್ರೊ ಫೋನ್

ಸೇಲ್‌ನಲ್ಲಿ ಈ ಫೋನ್ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಖರೀದಿಯ ಮೇಲೆ ಗ್ರಾಹಕರು ಹೆಚ್ಚುವರಿ 5,000ರೂ ವಿನಿಮಯ ಬೋನಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 3,000ರೂ ತ್ವರಿತ ರಿಯಾಯಿತಿ ಪಡೆಯಬಹುದು. ಹಾಗೆಯೇ ಅಮೆಜಾನ್.ಇನ್‌ನಲ್ಲಿ ಇಎಂಐ ಆಯ್ಕೆಯು ಇದೆ. ಇನ್ನೂ ಈ ಕೊಡುಗೆಗಳು ಅಧಿಕೃತ ಒನ್‌ಪ್ಲಸ್.ಇನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಪಾಲುದಾರ ಮಳಿಗೆಗಳಲ್ಲಿ ಲಭ್ಯವಿದೆ.

ಒನ್‌ಪ್ಲಸ್ 9 ಫೋನ್

ಒನ್‌ಪ್ಲಸ್ 9 ಫೋನ್

ಈ ಫೋನ್ ಖರೀದಿಯಲ್ಲಿ 2,499ರೂ. ಸ್ಟ್ಯಾಂಡರ್ಡ್‌ ಡಿಸ್ಕೌಂಟ್‌ ಲಭ್ಯ. ಇದರೊಂದಿಗೆ ಅಮೆಜಾನ್.ಇನ್, ಒನ್‌ಪ್ಲಸ್.ಇನ್ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 3,000ರೂ. ತ್ವರಿತ ರಿಯಾಯಿತಿ ಸಿಗಲಿದೆ. ಹಾಗೂ ಇಎಂಐ ಆಯ್ಕೆಗಳು.

ಒನ್‌ಪ್ಲಸ್ 9 ಆರ್

ಒನ್‌ಪ್ಲಸ್ 9 ಆರ್

ಒನ್‌ಪ್ಲಸ್ 9 ಆರ್ ನಲ್ಲಿ 3,000ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಿಗಲಿದೆ. ಜೊತೆಗೆ 2,000 ರೂ. ಸ್ಟ್ಯಾಂಡರ್ಡ್ ರಿಯಾಯಿತಿ ಲಭ್ಯ ಅಮೆಜಾನ್.ಇನ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐ ಆಯ್ಕೆಗಳು ಇವೆ. ಕೊಡುಗೆಗಳು ಒನ್‌ಪ್ಲಸ್.ಇನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಪಾಲುದಾರ ಮಳಿಗೆಗಳಲ್ಲಿ ಲಭ್ಯವಿದೆ.

ಒನ್‌ಪ್ಲಸ್ ನಾರ್ಡ್ CE 5G

ಒನ್‌ಪ್ಲಸ್ ನಾರ್ಡ್ CE 5G

ಹೊಸದಾಗಿ ಲಾಂಚ್ ಮಾಡಲಾದ ನಾರ್ಡ್ CE 5G ಫೋನ್‌ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮೂಲಕ ಖರೀದಿಸಿದರೇ 1,000ರೂ. ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ. ಜೊತೆಗೆ ಆರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಇವೆ.

ಒನ್‌ಪ್ಲಸ್ ಟಿವಿ 32 ವೈ 1

ಒನ್‌ಪ್ಲಸ್ ಟಿವಿ 32 ವೈ 1

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮೇಲೆ 1000ರೂ. ಇನ್‌ಸ್ಟಂಟ್ ಡಿಸ್ಕೌಂಟ್‌ ಜೊತೆಗೆ ಹೆಚ್ಚುವರಿಯಾಗಿ 500ರೂ.ಗಳ ರಿಯಾಯಿತಿ ಲಭ್ಯ. ಇದರೊಂದಿಗೆ ಇಎಮ್ಐ ಸೌಲಭ್ಯದ ಆಯ್ಕೆಗಳು ಇವೆ. ಅಮೆಜಾನ್.ಇನ್, ಫ್ಲಿಪ್‌ಕಾರ್ಟ್.ಕಾಮ್, ಒನ್‌ಪ್ಲಸ್.ಇನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಒನ್‌ಪ್ಲಸ್ ಚಿಲ್ಲರೆ ಅಂಗಡಿಗಳಲ್ಲಿ ಕೊಡುಗೆ ಲಭ್ಯ.

ಒನ್‌ಪ್ಲಸ್ ಟಿವಿ 40 ವೈ 1

ಒನ್‌ಪ್ಲಸ್ ಟಿವಿ 40 ವೈ 1

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮೇಲೆ 1,500 ರೂ. ಇನ್‌ಸ್ಟಂಟ್ ಡಿಸ್ಕೌಂಟ್‌ ಜೊತೆಗೆ ಹೆಚ್ಚುವರಿಯಾಗಿ 500ರೂ.ಗಳ ರಿಯಾಯಿತಿ ಲಭ್ಯ. ಇದರೊಂದಿಗೆ ಇಎಮ್ಐ ಸೌಲಭ್ಯದ ಆಯ್ಕೆಗಳು ಇವೆ. ಅಮೆಜಾನ್.ಇನ್, ಫ್ಲಿಪ್‌ಕಾರ್ಟ್.ಕಾಮ್, ಒನ್‌ಪ್ಲಸ್.ಇನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಒನ್‌ಪ್ಲಸ್ ಚಿಲ್ಲರೆ ಅಂಗಡಿಗಳಲ್ಲಿ ಕೊಡುಗೆ ಲಭ್ಯ.

Most Read Articles
Best Mobiles in India

English summary
OnePlus Community Sale offers listed: Discounts on OnePlus 9, earbuds and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X