ಒನ್‌ಪ್ಲಸ್‌ ನಿಂದ ಬರಲಿದೆ ವೇಗದ ಚಾರ್ಜಿಂಗ್‌ ಬೆಂಬಲಿಸುವ ಪವರ್‌ ಬ್ಯಾಂಕ್‌!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ವಿದ್ಯುತ್‌ ದಾಹ ತೀರಿಸುವ ಪವರ್‌ಬ್ಯಾಂಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ವಿಸ್ತಾರವಾದಷ್ಟು ಪವರ್‌ಬ್ಯಾಂಕ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಲೆ ಇದೆ. ಈಗಾಗ್ಲೆ ಹಲವು ಕಂಪೆನಿಗಳ ವಿವಿಧ ಮಾದರಿಯ mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳ ಲಭ್ಯವಿವೆ. ಆದರೂ ಕೆಲವು ಬ್ರ್ಯಾಂಡ್‌ ಕಂಪೆನಿಗಳ ಪವರ್‌ಬ್ಯಾಂಕ್‌ಗಳನ್ನೇ ಗ್ರಾಹಕರು ಇಷ್ಟ ಪಡುತ್ತಾರೆ. ಸದ್ಯ ಸ್ಮಾರ್ಟ್‌ಫೋನ್‌ ವಲಯದಲ್ಲಿ ಸೈ ಎನಿಸಿಕೊಂಡಿರುವ ಒನ್‌ಪ್ಲಸ್‌ ಕಂಪೆನಿ ವೇಗದ ಚಾರ್ಜಿಂಗ್‌ ಬೆಂಬಲಿಸುವ ಹೊಸ ಪವರ್‌ ಬ್ಯಾಂಕ್‌ ಅನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಹೌದು

ಹೌದು , ಸ್ಮಾರ್ಟ್‌ಫೋನ್‌ ವಲಯದಲ್ಲಿ ಬ್ರ್ಯಾಂಡ್‌ ಆಗಿ ಗುರುತಿಸಿ ಕೊಂಡಿರುವ ಒನ್‌ಪ್ಲಸ್ ಕಂಪೆನಿ ತನನ್ ಹೊಸ ಆವೃತ್ತಿಯ ಪವರ್‌ ಬ್ಯಾಂಕ್‌ ಅನ್ನು ಬಿಡುಗಡೆ ಮಾಡಲಿದೆ. ಈಗಾಗ್ಲೆ 10000mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳನ್ನ ಪರಿಚಯಿಸಿರುವ ಒನ್‌ಪ್ಲಸ್‌ ಇದೀಗ ಎರಡನೇ ತಲೆಮಾರಿನ ವೇಗದ ಚಾರ್ಜಿಂಗ್‌ ಪವರ್‌ ಬ್ಯಾಂಕ್‌ ಅನ್ನು ಶೀಘ್ರದಲ್ಲೇ ಪರಚಯಿಸಲಿದೆ ಎನ್ನಲಾಗ್ತಿದ್ದು. ಈ ಪವರ್‌ ಬ್ಯಾಂಕ್‌ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ನೊಂದಿಗೆ ಬರುವ ಸಾಧ್ಯತೆ ಇದೆ.

ಒನ್‌ಪ್ಲಸ್‌ ಪವರ್‌ ಬ್ಯಾಂಕ್‌

ಒನ್‌ಪ್ಲಸ್‌ ಪವರ್‌ ಬ್ಯಾಂಕ್‌

ಸದ್ಯ ಒನ್‌ಪ್ಲಸ್‌ ಕಂಪೆನಿ ಲಾಂಚ್‌ ಮಾಡಲಿದೆ ಎನ್ನಲಾದೆ ಪವರ್‌ ಬ್ಯಾಂಕ್‌ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ ಎನ್ನಲಾಗ್ತಿದ್ದು ಈ ಪವರ್‌ ಬ್ಯಾಂಕ್‌ ಒನ್ನಪ್ಲಸ್‌ 8 ಸ್ಮಾರ್ಟ್‌ಫೋನ್‌ ನೊಂದಿಗೆ ಬರಲಿದೆ ಎನ್ನಲಾಗ್ತಿದೆ. ಈ ಪವರ್‌ ಬ್ಯಾಂಕ್‌ ಕರ್ವಿಂಗ್ ಸೈಡ್‌ ಹೊಂದಿರಲಿದ್ದು, ಎರಡು ಯುಎಸ್‌ಬಿ ಪೋರ್ಟ್‌ಗಳನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು 5v ಪವರ್‌ನೊಂದಿಗೆ 2A ಕರೆಂಟ್ ಅನ್ನು ಪಸರಿಲಿಸದೆ ಎಂದು ನಿರೀಕ್ಷಿಸಲಾಗಿದೆ.

ಪವರ್‌ ಬ್ಯಾಂಕ್‌ನ ವಿನ್ಯಾಸ

ಪವರ್‌ ಬ್ಯಾಂಕ್‌ನ ವಿನ್ಯಾಸ

ಈ ಹೊಸ ಪವರ್ ಬ್ಯಾಂಕ್ ಹೆಚ್ಚಿನ ವಿದ್ಯುತ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ತನ್ನ ವಾರ್ಪ್ ಚಾರ್ಜ್ ಪ್ರಕಾರದ ಚಾರ್ಜಿಂಗ್ ಅನುಭವವನ್ನು ಬಳಕೆದಾರರಿಗೆ ನೀಡಲಿದೆ ಎಂದು ಹೇಳಲಾಗಿದೆ. ಸದ್ಯ ಕಂಪೆನಿಯ ಟ್ವೀಟ್ ಪ್ರಕಾರ, ಒನ್‌ಪ್ಲಸ್‌ ತನ್ನ ಎರಡನೇ ಆವೃತ್ತಿಯ ಪವರ್ ಬ್ಯಾಂಕ್ ಅನ್ನು ಬಹಯಳ ಉತ್ತಮ ರೀತಿಯ ವಿನ್ಯಾಸದೊಂದಿಗೆ ಪರಿಚಯಿಸಲಿದ್ದು, ಇದು ಕ್ಲಾಸಿಕ್ ಕೆಂಪು-ಬಣ್ಣದ ಕೇಬಲ್ ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಟೆಕ್ಷನ್‌

ಪ್ರೊಟೆಕ್ಷನ್‌

ಇನ್ನು ಈ ಪವರ್ ಬ್ಯಾಂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದ್ದು, ಒವರ್‌ ದಿ ಚಾರ್ಜ್‌ ಪ್ರೊಟೆಕ್ಷನ್‌ ಅನ್ನು ನೀಡಲಿದೆ. ಅಲ್ಲದೆ ಶಾರ್ಟ್‌ ಸರ್ಕ್ಯೂಟ್‌ನಿಂದ ಉತ್ತಮ ಪ್ರೊಟೆಕ್ಷನ್‌ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಇದು ಹಲವು ಲೆಯರ್‌ಗಳನ್ನ ಹೊಂದಿದ್ದು ಲೋಹದ ಕವಚವನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆಯಾದರೂ ಈ ಪವರ್ ಬ್ಯಾಂಕ್‌ನ ಪ್ರೊಟೆಕ್ಷನ್‌ ಪವರ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಒನ್‌ಪ್ಲಸ್‌ನ ಹೊಸ ಪವರ್‌ ಬ್ಯಾಂಕ್‌ 50W ವೇಗದ ಚಾರ್ಜಿಂಗ್ ಅಥವಾ ವೈರ್‌ಲೆಸ್ ಚಾರ್ಜಿಂಗ್ ಪವರ್‌ ಬ್ಯಾಂಕ್‌ ಅನ್ನು ಪರಿಚಯಿಸುವ ನಿರೀಕ್ಷೆ ಇದ್ದು, ಈ ಪವರ್‌ ಬ್ಯಾಂಕ್‌ನ ಬ್ಯಾಟರಿ ಸಾಮರ್ಥ್ಯ ಏನು ಅನ್ನೊದು ಇನ್ನು ಬಹಿರಂಗವಾಗಿಲ್ಲ. ಆದರೆ ಕಂಪೆನಿಯ ಟ್ವೀಟ್‌ ಪ್ರಕಾರ ಒನ್‌ಪ್ಲಸ್‌ ವೇಗದ ಚಾರ್ಜಿಂಗ್‌ ಬೆಂಬಲಿಸುವ ಪವರ್‌ಬ್ಯಾಂಕ್‌ ಅನ್ನು ಶೀಘ್ರದಲ್ಲೇ ಪರಿಚಯಿಸೋದು ಮಾತ್ರ ಪಕ್ಕಾ ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Smartphone maker OnePlus may be looking at launching a new power bank in the market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X