ಒಪ್ಪೋ ಸಂಸ್ಥೆ ಜೊತೆ ವಿಲೀನವಾಯ್ತಾ ಒನ್‌ಪ್ಲಸ್‌ ಕಂಪೆನಿ?

|

ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಒಪ್ಪೊ ಕಂಪೆನಿ ಜೊತೆ ವಿಲೀನವಾಗಿದೆಯಾ ಎನ್ನುವ ಸುದ್ದಿ ಹರಿದಾಡ್ತಿದೆ. ಇತ್ತೀಚಿಗೆ ಸೋರಿಕೆಯಾದ ದಾಖಲೆಯ ಪ್ರಕಾರ ಒನ್‌ಪ್ಲಸ್ ಒಪ್ಪೋ ಸಂಸ್ಥೆಯ ಸಬ್‌ಬ್ರಾಂಡ್ ಆಗುತ್ತಿದೆ. ಒನ್‌ಪ್ಲಸ್ ಸಂಸ್ಥೆ ಇದರ ಬಗ್ಗೆ ನಿಖರವಾಗಿ ಅರ್ಥವನ್ನು ವಿವರಿಸದೆ "ಒಪ್ಪೋ ಜೊತೆ ತನ್ನ ಸಂಘಟನೆಯನ್ನು ಮತ್ತಷ್ಟು ಸಂಯೋಜಿಸಿದೆ" ಎಂದು ಒನ್‌ಪ್ಲಸ್ ಘೋಷಿಸಿದೆ. ಸದ್ಯ ಒನ್‌ಪ್ಲಸ್‌ ಟಾಕಿಂಗ್ ಪಾಯಿಂಟ್ಸ್ ಮೆಮೋ ಆಗಿ ಕಾರ್ಯನಿರ್ವಹಿಸುವ ಡಾಕ್ಯುಮೆಂಟ್ ಅನ್ನು ಎವ್ಲೀಕ್ಸ್ ಖ್ಯಾತಿಯ ಇವಾನ್ ಬ್ಲಾಸ್ ಸೋರಿಕೆ ಮಾಡಿದೆ.

ಒನ್‌ಪ್ಲಸ್

ಹೌದು, ಒನ್‌ಪ್ಲಸ್ ಕಂಪೆನಿ ಒಪ್ಪೊ ಸಂಸ್ಥೆ ಜೊತೆಗೆ ವಿಲೀನವಾಗಿದೆ ಎಂದು ಹೇಳಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಮತ್ತು ಒಪ್ಪೋ ಸಂಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಎರಡೂ ಸಂಸ್ಥೆಗಳು ಕೂಡ ಇರುವ ಮಾರುಕಟ್ಟೆಗಳಲ್ಲಿ ಪರಸ್ಪರ ಪೈಪೋಟಿ ನಡೆಸುತ್ತವೆ ಎಂದು ಡಾಕ್ಯುಮೆಂಟ್ ಹೇಳುತ್ತದೆ. ಕಂಟ್ಯಾಕ್ಟ್‌ ಚಾನಲ್‌ಗಳು ಮತ್ತು ಉತ್ಪನ್ನ ಮಾರ್ಗಗಳು ಈಗಿರುವಂತೆ ಉಳಿಯುತ್ತವೆ. ಹಾಗಾದ್ರೆ ಒನ್‌ಪ್ಲಸ್‌, ಒಪ್ಪೊ ಸಂಸ್ಥೆ ಜೊತೆ ವಿಲೀನವಾಗಿದೆಯಾ ಇದರ ಬಗ್ಗೆ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಕಾರ

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಒನ್‌ಪ್ಲಸ್‌ ಕಂಪೆನಿ ಒಪ್ಪೊ ಜೊತೆಗೆ ಹೆಜ್ಜೆ ಹಾಕಲು ಮುಂದಾಗಿದೆ. ಆದರೆ ಒನ್‌ಪ್ಲಸ್ ಸಂಗ್ರಹಿಸಿದ ಗ್ರಾಹಕರ ಡೇಟಾವನ್ನು ಒಪ್ಪೋ ಸಂಸ್ಥೆ ಜೊತೆಗೆ ಹಂಚಿಕೊಳ್ಳುವುದಿಲ್ಲ ಎನ್ನಲಾಗಿದೆ. ಇನ್ನು ಈ ಏಕೀಕರಣ ಪ್ರಕ್ರಿಯೆಯು ಕಳೆದ ವರ್ಷದ ಕೊನೆಯಲ್ಲಿ ಆರ್ & ಡಿ ಏಕೀಕರಣದೊಂದಿಗೆ ಪ್ರಾರಂಭವಾಗಿದೆ. ಈ ವರ್ಷ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ.

ಡಾಕ್ಯುಮೆಂಟ್‌

ಇನ್ನು ಈ ಡಾಕ್ಯುಮೆಂಟ್‌ನಲ್ಲಿರುವ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ "ಏಕೀಕರಣ ಪ್ರಕಟಣೆಯನ್ನು ಗುರಿಯಾಗಿಸುವ ಯಾವುದೇ ಓಎಸ್ ಅಥವಾ ಕಲರ್ ಓಎಸ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಬಾರದು" ಎಂದು ಹೇಳುತ್ತದೆ. ಅಲ್ಲದೆ "ಪ್ರಸ್ತುತ ನಾವು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ನವೀಕರಣಗಳನ್ನು ಹೊಂದಿಲ್ಲ, ಎಂದು ಹೇಳುವುದನ್ನು ಮುಂದುವರೆಸುವಂತೆ ಸೂಚಿಲಾಗಿದೆ. ಅಂದರೆ ಆಕ್ಸಿಜನ್ ಓಎಸ್‌ನಲ್ಲಿ ದೊಡ್ಡ ಬದಲಾವಣೆಗಳು ಬರುತ್ತಿವೆ ಎಂದು ಇದರ ಅರ್ಥ. ಚೀನಾದಲ್ಲಿ ಒಪ್ಪೋ ಸಂಸ್ಥೆಯ ಕಲರ್ ಓಎಸ್ ಸಾಫ್ಟ್‌ವೇರ್ ಅನ್ನು ಚಲಾಯಿಸಲು ಒನ್‌ಪ್ಲಸ್ ಈಗಾಗಲೇ ತನ್ನ ಫೋನ್‌ಗಳನ್ನು ಬದಲಾಯಿಸಿದೆ.

ಒನ್‌ಪ್ಲಸ್

ಈ ಏಕೀಕರಣದೊಂದಿಗೆ, ಒನ್‌ಪ್ಲಸ್ ಒಪ್ಪೊದಲ್ಲಿ ಒಂದು ಬ್ರಾಂಡ್ ಆಗುತ್ತದೆ. ಆದರೆ ಸ್ವತಂತ್ರ ಘಟಕವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ. ಒಪ್ಪೊದಲ್ಲಿ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ಲಾ ಅವರ ಪಾತ್ರವು ಒಪ್ಪೊ ಮತ್ತು ಒನ್‌ಪ್ಲಸ್ ಎರಡರ ಉತ್ಪನ್ನ ತಂತ್ರಗಳಿಗೆ ಜವಾಬ್ದಾರನಾಗಿರುತ್ತದೆ ಎಂದು ಮೆಮೋ ಹೇಳುತ್ತದೆ. ಅಲ್ಲದೆ "ಎರಡೂ ಸಂಸ್ಥೆಗಳ ವಿಲೀನದೊಂದಿಗೆ, ಇನ್ನೂ ಉತ್ತಮ ಉತ್ಪನ್ನಗಳನ್ನು ರಚಿಸಲು ನಾವು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ್ದೇವೆ" ಎಂದು ಮೆಮೊದಲ್ಲಿ ಉಲ್ಲೇಖಿಸಲಾಗಿದೆ.

Most Read Articles
Best Mobiles in India

English summary
OnePlus is becoming an OPPO subbrand, according to a newly leaked document of internal “talking points”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X