Just In
Don't Miss
- News
ಪಕ್ಷ ಬಿಡೋರು ಬಿಡಲಿ, ಹೊಸದಾಗಿ ಪಕ್ಷ ಕಟ್ತೀವಿ: ಉದ್ಧವ್ ಠಾಕ್ರೆ
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Movies
ಕೋಸ್ಟಲ್ವುಡ್ ನಲ್ಲಿ ಪ್ರಖ್ಯಾತಿ ಗಳಿಸಿದ ನಟಿ ರಾಧಿಕಾ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ ಲಾಂಚ್; ತ್ರಿವಳಿ ಕ್ಯಾಮೆರಾ!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಒನ್ಪ್ಲಸ್ ಸಂಸ್ಥೆಯು ನಾರ್ಡ್ ಸರಣಿಯಲ್ಲಿ ಮೀಡ್ರೇಂಜ್ ಫೋನ್ಗಳನ್ನು ಪರಿಚಯಿಸಿದೆ. ಇದೀಗ ಅದೇ ಸರಣಿಯಲ್ಲಿ ಮತ್ತೆ ನೂತನವಾಗಿ ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ 4,500mAh ಬ್ಯಾಟರಿ ಬ್ಯಾಕ್ಅಪ್ ಒಳಗೊಂಡಿದ್ದು, 65W ಚಾರ್ಜಿಂಗ್ ಸೌಲಭ್ಯ ಪಡೆದಿದೆ.

ಹೌದು, ಒನ್ಪ್ಲಸ್ ಸಂಸ್ಥೆಯು ಮೊಬೈಲ್ ಮಾರುಕಟ್ಟೆಯಲ್ಲಿ ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ ಸರಣಿಯನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ. ಹಾಗೆಯೇ 32 ಮೆಗಾ ಪಿಕ್ಸಲ್ ಸೆನ್ಸಾರ್ನ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಇನ್ನು ಈ ಫೋನ್ ಬ್ಲೂ, ಗ್ರೇ ಹಾಗೂ ಗ್ರೀನ್ ವುಡ್ ಮ್ಯಾಟ್ ಫಿನಿಶಿಂಗ್ ಬಣ್ಣಗಳ ಆಯ್ಕೆ ಪಡೆದಿದೆ. ಇನ್ನುಳಿದಂತೆ ಒನ್ಪ್ಲಸ್ ನಾರ್ಡ್ 2T 5G ಫೋನ್ ಯಾವೆಲ್ಲಾ ಫೀಚರ್ಸ್ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.43 ಇಂಚಿನ HD+ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯ 90Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ. ಇನ್ನು ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್ ಆಕ್ಸಿಜೆನ್ 12.1 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ 8GB RAM + 128GB ಮತ್ತು 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದೆ.

ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ನ ಸ್ಪೋರ್ಟಿ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಈ ಫೋನ್ ನೈಟ್ಸ್ಕೇಪ್ ಅಲ್ಟ್ರಾ, ನೈಟ್ ಪೋರ್ಟ್ರೇಟ್, ಒಐಎಸ್, ಎಐ ವಿಡಿಯೋ ವರ್ಧನೆ, ಎಐ ಫೋಟೋ ವರ್ಧನೆ ಮತ್ತು ಡ್ಯುಯಲ್ ವ್ಯೂ ವಿಡಿಯೋದಂತಹ ವೈಶಿಷ್ಟ್ಯಗಳನ್ನು ಪಡೆದಿದೆ.
ಒನ್ಪ್ಲಸ್ ನಾರ್ಡ್ 2T 5G ಸ್ಮಾರ್ಟ್ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 80W SuperVOOC ವೈರ್ಡ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಫೋನ್ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ v5.2 ಮತ್ತು ಎನ್ಎಫ್ಸಿ ಸೇರಿವೆ.
ಬೆಲೆ ಮತ್ತು ಲಭ್ಯತೆ
ಒನ್ಪ್ಲಸ್ ನಾರ್ಡ್ 2T 5G ಎರಡು ಮಾದರಿಗಳಲ್ಲಿ ಎಂಟ್ರಿ ಪಡೆದಿದೆ. 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ EUR 399 (ಭಾರತದಲ್ಲಿ ಅಂದಾಜು 32,600ರೂ.) ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆಯು EUR 499 (ಭಾರತದಲ್ಲಿ ಅಂದಾಜು 40,800ರೂ) ಆಗಿದೆ. ಇನ್ನು ಈ ಫೊನ್ ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999