ಬಹು ನಿರೀಕ್ಷಿತ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಬಹು ನಿರೀಕ್ಷಿತ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಪಂಚ್ ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೊನ್‌ ಅನ್ನು ಸದ್ಯ ಆನ್‌ಲೈನ್‌ ಈವೆಂಟ್‌ ಮೂಲಕ ಅನಾವರಣಗೊಳಸಿಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಈ ಫೋನ್‌ 5G ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ ಎಂದು ಕಂಪೆನಿ ಹೇಳಿದೆ. ಅಲ್ಲದೆ "ವೇಗದ ಮತ್ತು ಸುಗಮ" ಅನುಭವವನ್ನು ಒದಗಿಸಲು ಒನ್‌ಪ್ಲಸ್ ನಾರ್ಡ್‌ಗೆ ಸುಮಾರು 300 ಆಪ್ಟಿಮೈಸೇಷನ್‌ಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ಫೋನ್‌ ಗ್ರಾಹಕರ ನಿರೀಕ್ಷಗೆ ತಕ್ಕಂತೆ ಆನ್‌ಲೈನ್‌ ಈವೆಂಟ್‌ನಲ್ಲಿ ಬಿಡುಗಡೆ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.44 ಇಂಚಿನ ಡಿಸ್‌ಪ್ಲೇ ಹೊಂದಿದ್ದು,90Hz ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಅಲ್ಲದೆ ಡಿಸ್‌ಪ್ಲೇ ರಚನೆಯ ಅನುಪಾತ 20:9 ರಷ್ಟಿದೆ. ಇದಲ್ಲದೆ ಈ ಸ್ಮಾರ್ಟ್‌ಫೊನ್‌ ಅಕ್ಟಾ-ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಒನ್‌ಪ್ಲಸ್ ನಾರ್ಡ್ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.44-ಇಂಚಿನ ಫುಲ್‌-ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಇದು ಫ್ಲೂಯಿಡ್‌ ಅಮೋಲೆಡ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಹೊಂದಿದ್ದು, ನೈಟ್ ಮೋಡ್, ರೀಡಿಂಗ್ ಮೋಡ್ ಮತ್ತು ವಿಡಿಯೋ ವರ್ಧಕ ಸೇರಿದಂತೆ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765 G SoC ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ ಇದು ಆಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ ಒಎಸ್ 10.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಅಡ್ರಿನೊ 620 GPU ಯನ್ನು ಹೊಂದಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 6GB RAM + 64GB, 8GB RAM + 128GB ಮತ್ತು 12GB RAM + 256GB ಇಂಟರ್‌ ಸ್ಟೋರೇಜ್‌ ಸಂಗ್ರಹ ಸಾಮರ್ಥ್ಯ ಹೊಂದಿರುವ ಮೂರು ರೀತಿಯ ವೇರಿಯೆಂಟ್‌ ಆಯ್ಕೆಯನ್ನ ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಒನ್‌ ಪ್ಲಸ್‌ ನಾರ್ಡ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಸೆನ್ಸಾರ್‌, ಇನ್ನು ಈ ಪ್ರೈಮರಿ ಕ್ಯಾಮೆರಾ ಸೆನ್ಸಾರ್‌ ಒನ್‌ಪ್ಲಸ್ 8 ನಲ್ಲಿ ಲಭ್ಯವಿರುವಂತೆಯೇ ಇರುತ್ತದೆ ಮತ್ತು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಜೊತೆಗೆ ಬರುತ್ತದೆ. ಇದಲ್ಲದೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ, ಇದು 119 ಡಿಗ್ರಿಗಳಷ್ಟು ವೀಕ್ಷಣಾ ಕ್ಷೇತ್ರವನ್ನು ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನಯ ಸಹ ಒಳಗೊಂಡಿದೆ. ಇದಲ್ಲದೆ ಇದು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 616 ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಅಲ್ಟ್ರಾ-ವೈಡ್-ಆಂಗಲ್ ಅನ್ನು ಹೊಂದಿದ್ದು, ಇದು 105 ಡಿಗ್ರಿಗಳಷ್ಟು ಎಫ್‌ಒವಿ ಹೊಂದಿದೆ.

ಕ್ಯಾಮೆರಾ ಫೀಚರ್ಸ್‌

ಕ್ಯಾಮೆರಾ ಫೀಚರ್ಸ್‌

ಅಲ್ಲದೆ ಒನ್‌ಪ್ಲಸ್ ನಾರ್ಡ್ ಕ್ಯಾಮೆರಾ ವೈಶಿಷ್ಟ್ಯಗಳಾದ ಅಲ್ಟ್ರಾಶಾಟ್ ಎಚ್‌ಡಿಆರ್, ನೈಟ್‌ಸ್ಕೇಪ್, ಸೂಪರ್ ಮ್ಯಾಕ್ರೋ, ಪೋರ್ಟ್ರೇಟ್, ಪ್ರೊ ಮೋಡ್, ಪನೋರಮಾ, ಎಐ ದೃಶ್ಯ ಪತ್ತೆ, ರಾ ಇಮೇಜ್ ಮತ್ತು ಅಲ್ಟ್ರಾ-ವೈಡ್ ಸೆಲ್ಫಿಯನ್ನ ಹೊಂದಿದೆ.ಇದು 30 ಕೆಪಿಎಸ್ ಅಥವಾ 1080 ಪಿ 30 ಅಥವಾ 60 ಎಫ್ಪಿಎಸ್ ನಲ್ಲಿ 4 ಕೆ ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ನೀವು ಸೂಪರ್ ನಿಧಾನ ಚಲನೆಯ ವೀಡಿಯೊಗಳನ್ನು 240fps ನಲ್ಲಿ 1080p ರೆಸಲ್ಯೂಶನ್ ಅಥವಾ 4K ಮತ್ತು 1080p ರೆಸಲ್ಯೂಶನ್‌ಗಳಲ್ಲಿ 30fps ಫ್ರೇಮ್ ದರದಲ್ಲಿ ಸೆರೆಹಿಡಿಯಬಹುದಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4,115mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಇದು ವಾರ್ಪ್ ಚಾರ್ಜ್ 30 ಟಿ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ, ಬ್ಲೂಟೂತ್ v5.1, GPS, ನ್ಯಾವಿಕ್, NFC, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸೆನ್ಸಾರ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್ ನಾರ್ಡ್ ಬೆಲೆ 6GB RAM + 64GB ಶೇಖರಣಾ ರೂಪಾಂತರಕ್ಕೆ 24,999 ರೂ. ಫೋನ್ 8GB RAM + 128GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ ರೂ. 27,999 ಮತ್ತು ಟಾಪ್-ಆಫ್-ಲೈನ್, 12GB RAM + 256GB ಶೇಖರಣಾ ಮಾದರಿಯ ಬೆಲೆ 29,999 ರೂ ಆಗಿದೆ. ಅಲ್ಲದೆ ಇದು ಬ್ಲೂ ಮಾರ್ಬಲ್ ಮತ್ತು ಗ್ರೇ ಓನಿಕ್ಸ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಒನ್‌ಪ್ಲಸ್ ನಾರ್ಡ್ ಇದೇ ಆಗಸ್ಟ್ 4 ರಿಂದ ಅಮೆಜಾನ್ ಮತ್ತು ಒನ್‌ಪ್ಲಸ್.ಇನ್ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles
Best Mobiles in India

English summary
OnePlus Nord has finally been launched months after being teased online and surfacing on the rumour mill as the OnePlus Z and OnePlus 8 Lite.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X