Just In
- 8 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 11 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 12 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 13 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ದೀಪಾವಳಿ ಹಬ್ಬದ ವೇಳೆ ದಾಖಲೆ ಮೊತ್ತದ 'ಒನ್ಪ್ಲಸ್' ಉತ್ಪನ್ನಗಳ ಮಾರಾಟ!
ವಿಶ್ವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಯಶಸ್ಸಿನಲ್ಲಿ ತೇಲುತ್ತಿರುವ ಒನ್ಪ್ಲಸ್ ಮೊಬೈಲ್ ಕಂಪೆನಿ ಈ ಬಾರಿಯ ದೀಪಾವಳಿಯಲ್ಲಿ ದೇಶದಲ್ಲಿ ದಾಖಲೆ ಮಾರಾಟ ಮಾಡಿದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಒನ್ಪ್ಲಸ್ ಸಾಧನಗಳು ಆಫ್ಲೈನ್ ಮತ್ತು ಆನ್ಲೈನ್ ಮಾರಾಟದಲ್ಲಿ ದಾಖಲೆಯಾಗಿ 1500 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು, ಸೆಪ್ಟಂಬರ್ 28 ರಿಂದ ಅಕ್ಟೋಬರ್ 24 ರವರೆಗೆ ಇಂತಹದೊಂದು ಅಭೂತಪೂರ್ವವಾದ ಈ ಸಾಧನೆಯನ್ನು ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಈ ಯಶಸ್ಸಿನ ಬಗ್ಗೆ ಮಾತನಾಡಿದ ಒನ್ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್ವಾಲ್ ಅವರು ತಿಳಿಸಿದ್ದು, ದೇಶಾದ್ಯಂತ ನಮ್ಮ ಗ್ರಾಹಕರು ಒನ್ಪ್ಲಸ್ ಉತ್ಪನ್ನಗಳ ಖರೀದಿಯಲ್ಲಿ ತೋರಿರುವ ಉತ್ಸಾಹವನ್ನು ಕಂಡು ನಮಗೆ ಅತೀವ ಆನಂದವಾಗಿದೆ. ಅವರ ಈ ಉತ್ಸಾಹದಿಂದಲೇ ನಾವು ಈ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕಾಗಿ ನಾವು ನಮ್ಮ ಗ್ರಾಹಕ ಸಮುದಾಯಕ್ಕೆ ಆಭಾರಿಯಾಗಿದ್ದೇವೆ. ಈ ಯಶಸ್ಸು ನಮಗೆ ಇನ್ನೂ ಅತ್ಯುತ್ತಮವಾದ ಉತ್ಪನ್ನಗಳನ್ನು ಪರಿಚಯಿಸಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ದೀಪಾವಳಿ ಮಾರಾಟದಲ್ಲಿ ಒಟ್ಟು ವಾಣಿಜ್ಯ ಮೌಲ್ಯ (ಜಿಎಂವಿ) ಮೌಲ್ಯದ 1,500 ಕೋಟಿ ರೂ.ಗಳ ಮಾರಾಟವನ್ನು ಗಳಿಸಿರುವುದಾಗಿ ಹೇಳಿರುವ ಒನ್ಪ್ಲಸ್ ಇದೇ ವೇಳೆ ಮತ್ತೊಂದು ದಾಖಲೆಯನ್ನು ಸಹ ತನ್ನ ಹೆಸರಿಗೆ ಬರೆದುಕೊಂಡಿದೆ. ಒನ್ಪ್ಲಸ್ ಆಂಡ್ರಾಯ್ಡ್ ಟಿವಿ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ ಉತ್ಪನ್ನಗಳ ಯಶಸ್ಸಿನ ಮೇಲೆ ಕಂಪನಿಯು ಅಮೆಜಾನ್ ಮತ್ತು ಆಫ್ಲೈನ್ ಪಾಲುದಾರ ಮಳಿಗೆಗಳಲ್ಲಿ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್ಫೋನ್ ವಿಭಾಗಗಳಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಬ್ರಾಂಡ್ ಆಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ.

ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ಹಲವಾರು ಕ್ಷೇತ್ರಗಳ ಹೊರತಾಗಿಯೂ ಎಲೆಕ್ಟ್ರಾನಿಕ್ಸ್ ಉದ್ಯಮವು ದೀಪಾವಳಿ ಮಾರಾಟ ಋತುವಿನಲ್ಲಿ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಹಬ್ಬದ ಸಂದರ್ಭದಲ್ಲಿ ಆಫ್ಲೈನ್ ಮತ್ತು ಆನ್ಲೈನ್ ಮಾರಾಟ ಪಾಲುದಾರಿಕೆ ಸ್ಟೋರ್ಗಳಲ್ಲಿ ಅಭೂತಪೂರ್ವವಾದ ಮಾರಾಟವನ್ನು ಕಂಡಿದ್ದೇವೆ. ಒನ್ಪ್ಲಸ್ ಸ್ಮಾರ್ಟ್ಫೋನ್ಗಳ ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಲಾದ ಒನ್ಪ್ಲಸ್ ಟಿವಿ ಆಫ್ಲೈನ್ ಮತ್ತು ಆನ್ಲೈನ್ ವೇದಿಕೆಗಳಲ್ಲಿ ಅತ್ಯಧಿಕ ಮಾರಾಟವನ್ನು ಕಂಡಿರುವುದಾಗಿ ಒನ್ಪ್ಲಸ್ ಕಂಪೆನಿ ತಿಳಿಸಿದೆ.

ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, ಆರ್ಥಿಕ ಕುಸಿತವು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದ್ದರೂ ಸಹ, 2019ರ ಮೂರನೇ ತ್ರೈಮಾಸಿಕದಲ್ಲಿ ಭಾರತವು 4.9 ಕೋಟಿ ಸ್ಮಾರ್ಟ್ ಫೋನ್ಗಳ ಮಾರಾಟ ದಾಖಲಿಸಿದೆ. ಹೊಸ ಉಡಾವಣೆಗಳು, ರಿಯಾಯಿತಿಗಳು ಸ್ಮಾರ್ಟ್ ಫೋನ್ಗಳ ಮಾರಾಟವನ್ನು ಹೆಚ್ಚಿಸಿದ್ದು, ಒನ್ಪ್ಲಸ್, ರಿಯಲ್ಮಿ, ವಿವೊ, ಐಟೆಲ್ ಮತ್ತು ಕಂಪೆನಿಗಳು ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಾಗಿವೆ, ಇನ್ನು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಪ್ರಾಬಲ್ಯ ಮುಂದುವರಿಸಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790