ಒನ್‌ಪ್ಲಸ್‌ ಟಿವಿ ಮನೆಗೊಯ್ಯಲು ಈ ಹಬ್ಬದ ಸೀಸನ್ ಬೆಸ್ಟ್‌..! ಅಮೆಜಾನ್‌ನಲ್ಲಿ ಅತ್ಯಾಕರ್ಷಕ ಆಫರ್ಸ್‌..!

|

ನೀವು ಹೊಸ ಒನ್‌ಪ್ಲಸ್ ಟಿವಿ ಕ್ಯೂ 1 ಅಥವಾ ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೊ ಸ್ಮಾರ್ಟ್‌ ಟಿವಿ ಖರೀದಿಸಲು ಬಯಸಿದ್ದಿರಾ..? ಹಾಗಾದ್ರೆ ನಿಮ್ಮನ್ನು ಅದೃಷ್ಟವಂತರೇ ಎನ್ನಬೇಕು. ಹೌದು, ಈ ಎರಡು ಸ್ಮಾರ್ಟ್‌ ಟಿವಿಗಳು ಅತ್ಯಾಕರ್ಷಕ ಆಫರ್‌ಗಳೊಂದಿಗೆ ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿವೆ. ಅತ್ಯಂತ ಆಕರ್ಷಕ ಕೊಡುಗೆ ಎಂದರೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಉಪಯೋಗಿಸಿ ಟಿವಿ ಖರೀದಿ ಹಾಗೂ ಇಎಂಐ ವಹಿವಾಟಿನ ಮೇಲೆ 5000 ರೂ.ವರೆಗೂ ತ್ವರಿತ ರಿಯಾಯಿತಿ ಸಿಗಲಿದೆ. ಅಕ್ಟೋಬರ್ 5 ರಿಂದ ಪ್ರಾರಂಭವಾಗಿರುವ ಆಫರ್‌ ಸೇಲ್‌ ಅಕ್ಟೋಬರ್ 11 ರವರೆಗೂ ನಡೆಯಲಿದೆ.

ಒನ್‌ಪ್ಲಸ್‌ ಟಿವಿ ಮನೆಗೊಯ್ಯಲು ಈ ಹಬ್ಬದ ಸೀಸನ್ ಬೆಸ್ಟ್‌..!

ತ್ವರಿತ ರಿಯಾಯಿತಿ

ಎರಡೂ ಟಿವಿ ಮಾದರಿಗಳ ಉತ್ಪನ್ನ ಪಟ್ಟಿ ಪ್ರಕಾರ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಿಂದ ಒನ್‌ಪ್ಲಸ್ ಟಿವಿ ಕ್ಯೂ 1 ಖರೀದಿಸಿದರೆ 4,000 ರೂ. ತ್ವರಿತ ರಿಯಾಯಿತಿ ಹಾಗೂ ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೋ ಖರೀದಿಸಿದರೆ 5,000 ರೂ. ತ್ವರಿತ ರಿಯಾಯಿತಿ ದೊರೆಯುತ್ತದೆ. ಈ ತ್ವರಿತ ರಿಯಾಯಿತಿ ಮೇಲೆ ತಿಳಿಸಿದ ವಿಧಾನದಲ್ಲಿ ಹಣ ಪಾವತಿಸಿದರೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.

ಬೆಲೆ ಎಷ್ಟು ಅಂತೀರಾ..?

ಭಾರತದಲ್ಲಿ ಒನ್‌ಪ್ಲಸ್ ಟಿವಿ ಕ್ಯೂ 1 ಬೆಲೆ 69,900 ರೂ. ಆಗಿದ್ದರೆ, ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೋ ಬೆಲೆ 99,900 ರೂ. ಆಗಿದೆ. ಆದ್ದರಿಂದ, ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ತ್ವರಿತ ರಿಯಾಯಿತಿ ಕೊಡುಗೆಯನ್ನು ಅನ್ವಯಿಸಿದ ನಂತರ, ಒನ್‌ಪ್ಲಸ್ ಟಿವಿ ಕ್ಯೂ 1 ನ ಪರಿಣಾಮಕಾರಿ ಬೆಲೆ 65,900 ರೂ. ಆಗಿದ್ದರೆ, ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೋ ಬೆಲೆ ಕೇವಲ 94,900 ರೂ. ಆಗಲಿದೆ.

ಅಮೆಜಾನ್‌ ಆಫರ್ಸ್‌..!

ತ್ವರಿತ ರಿಯಾಯಿತಿಯಷ್ಟೇ ಅಲ್ಲದೇ ಅಮೆಜಾನ್‌ ಕೂಡ ಹಲವಾರು ಆಫರ್‌ಗಳನ್ನು ನೀಡುತ್ತಿದೆ. ಇದರಿಂದ ಒನ್‌ಪ್ಲಸ್ ಟಿವಿ ಬೆಲೆ ಮತ್ತಷ್ಟು ಇಳಿಸಲು ಅಥವಾ ಇತರ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗಲಿದೆ. ನಿಮ್ಮ ಹಳೇ ಟಿವಿಯನ್ನು ವಿನಿಮಯ ಮಾಡಿಕೊಂಡರೆ 4,800 ರೂ. ವಿನಿಮಯ ಮೌಲ್ಯವನ್ನು ಪಡೆಯುತ್ತೀರಿ. ಹೆಚ್ಚುವರಿಯಾಗಿ, ದೀಪಾವಳಿ ಟಿವಿ ಫೈರ್ ಸ್ಟಿಕ್ ಆಫರ್‌ ಭಾಗವಾಗಿ, ಒನ್‌ಪ್ಲಸ್ ಟಿವಿ ಖರೀದಿದಾರರು ಅಮೆಜಾನ್ ಫೈರ್ ಟಿವಿ ಸ್ಟಿಕ್ ಅನ್ನು 3,999 ರೂ.ಗೆ ಬದಲಾಗಿ ಕೇವಲ 2,399 ರೂ. ಗೆ ಖರೀದಿಸಬಹುದಾಗಿದೆ. ನೋ ಕಾಸ್ಟ್‌ ಇಎಂಐ ಆಯ್ಕೆಗಳು ಸಹ ಗ್ರಾಹಕರಿಗೆ ಲಭ್ಯವಿವೆ.

ಫೀಚರ್ಸ್‌ ಗೊತ್ತಾ..?

ಒನ್‌ಪ್ಲಸ್ ಟಿವಿಯನ್ನು ಕಳೆದ ತಿಂಗಳು ಭಾರತದಲ್ಲಿ ಒನ್‌ಪ್ಲಸ್ ಟಿವಿ ಕ್ಯೂ 1 ಮತ್ತು ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೋ ಎಂಬ ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಯಿತು. ಎರಡು ಆವೃತ್ತಿಗಳು 55 ಇಂಚಿನ 4ಕೆ ಕ್ಯೂಎಲ್‌ಇಡಿ ಫಲಕಗಳನ್ನು ಹೊಂದಿದ್ದು, 50W ಧ್ವನಿ ಉತ್ಪಾದನೆಯನ್ನು ಹೊಂದಿವೆ. ಇದಲ್ಲದೆ, ಆಕ್ಸಿಜನ್ ಪ್ಲೇ ಎಂಬ ಒನ್‌ಪ್ಲಸ್‌ ಸ್ವಾಮ್ಯದ ಕ್ಯುರೇಟೆಡ್ ಕಂಟೆಂಟ್‌ ಸೇವೆಯೊಂದಿಗೆ ಆಂಡ್ರಾಯ್ಡ್ ಟಿವಿ 9.0 ಬೆಂಬಲ ಹೊಂದಿದೆ. ಎರಡೂ ಟಿವಿಗಳು ಹಿಂಭಾಗದಲ್ಲಿ ಕಾರ್ಬನ್ ಫೈಬರ್ ತರಹದ ಫಿನಿಶ್ ಹೊಂದಿದ್ದು, ಅನನ್ಯ ಸ್ಟ್ಯಾಂಡ್ ವಿನ್ಯಾಸದೊಂದಿಗೆ ಬಳಕೆದಾರರನ್ನು ಸೆಳೆಯುತ್ತವೆ. ಗಮನಿಸಬೇಕಾದ ಅಂಶವೇನೆಂದರೆ ಒನ್‌ಪ್ಲಸ್ ಪ್ರೋ ಮಾದರಿಯೊಂದಿಗೆ ಮಾತ್ರ ಟೇಬಲ್-ಟಾಪ್ ಸ್ಟ್ಯಾಂಡ್‌ನ್ನು ನೀಡಿದ್ದು, ಒನ್‌ಪ್ಲಸ್ ಟಿವಿ ಕ್ಯೂ 1 ಖರೀದಿದಾರರು ಸ್ಟ್ಯಾಂಡ್ ಅನ್ನು ಪ್ರತ್ಯೇಕವಾಗಿ 2,990 ರೂ. ನೀಡಿ ಖರೀದಿಸಬೇಕಾಗುತ್ತದೆ.

Best Mobiles in India

English summary
OnePlus TV Now Available With Rs. 5,000 Off

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X