ಭಾರತದಲ್ಲಿ ಒನ್‌ಪ್ಲಸ್‌ ಟಿವಿ U1S ಸರಣಿ ಬಿಡುಗಡೆ! ವಿಶೇಷತೆ ಏನು?

|

ಒನ್‌ಪ್ಲಸ್‌ ಕಂಪೆನಿ ತನ್ನ ಬಹು ನಿರೀಕ್ಷಿತ ಒನ್‌ಪ್ಲಸ್ ಟಿವಿ U1S ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿ 50-ಇಂಚು, 55-ಇಂಚು ಮತ್ತು 65-ಇಂಚು ಹೊಂದಿರುವ ಮೂರು ಆಯ್ಕೆಗಳನ್ನು ಹೊಂದಿದೆ. ಇನ್ನು ಈ ಮೂರು ಸ್ಮಾರ್ಟ್‌ಟಿವಿಗಳು ಕೂಡ 4K ಡಿಸ್‌ಪ್ಲೇ ರೆಸಲ್ಯೂಶನ್ ಹೊಂದಿದೆ. ಒನ್‌ಪ್ಲಸ್ ಟಿವಿ U1S ಸರಣಿಯು ಹೆಚ್‌ಡಿಆರ್ 10 +, ಹೆಚ್‌ಎಲ್‌ಜಿ ಮತ್ತು ಎಂಇಎಂಸಿ ಬೆಂಬಲವನ್ನು ಹೊಂದಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಸಂಸ್ಥೆ ಭಾರತದಲ್ಲಿ ಹೊಸ ಒನ್‌ಪ್ಲಸ್‌ ಟಿವಿ U1S ಸರಣಿಯನ್ನು ಲಾಂಚ್‌ ಮಾಡಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು ಸ್ಲಿಮ್ ಬೆಜೆಲ್‌ಗಳನ್ನು ಹೊಂದಿವೆ. ಅಲ್ಲದೆ ಡೈನಾಡಿಯೊದೊಂದಿಗೆ ಸಹ-ಟ್ಯೂನ್ ಮಾಡಲಾದ ಡಾಲ್ಬಿ ಆಡಿಯೊ ಬೆಂಬಲಿಸುವ 30W ಸ್ಪೀಕರ್‌ಗಳನ್ನು ಒಳಗೊಂಡಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಟಿವಿ U1S

ಒನ್‌ಪ್ಲಸ್ ಟಿವಿ U1S ಸರಣಿಯು 50-ಇಂಚಿನ, 55-ಇಂಚಿನ ಮತ್ತು 65-ಇಂಚಿನ ಮಾದರಿಗಳಲ್ಲಿ ಲಭ್ಯವಿದೆ. ಈ ಮೂರು ಸ್ಮಾರ್ಟ್‌ಟಿವಿಗಳು 4K (3,840x2,160) ರೆಸಲ್ಯೂಶನ್‌ ಹೊಂದಿರುವ 10-ಬಿಟ್ ಕಲರ್‌ ಡೆಪ್ತ್‌ ಹೊಂದಿದೆ. ಜೊತೆಗೆ ಹೆಚ್ಚಿನ ಬಣ್ಣದೊಂದಿಗೆ 93% ಡಿಸಿಐ-ಪಿ 3 ಕವರೇಜ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಒನ್‌ಪ್ಲಸ್‌ನ ಗಾಮಾ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ, ಇದು ಶಬ್ದ ಕಡಿತ, ಎಂಇಎಂಸಿ, ಎಫ್‌ಸಿಸಿ, ಆಂಟಿ-ಅಲಿಯಾಸಿಂಗ್, ಸೂಪರ್ ರೆಸಲ್ಯೂಶನ್ ಮತ್ತು 50 ಕ್ಕೂ ಹೆಚ್ಚು ಎಐ ಕ್ರಮಾವಳಿಗಳನ್ನು ಬಳಸುತ್ತದೆ. ಇದು ಆಂಡ್ರಾಯ್ಡ್ ಟಿವಿ 10 ನಲ್ಲಿ ಆಕ್ಸಿಜನ್‌ಪ್ಲೇ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್

ಇನ್ನು ಒನ್‌ಪ್ಲಸ್ ಟಿವಿ U1S ಸರಣಿಯು ಹೆಚ್‌ಡಿಆರ್ 10 + ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಟಿವಿಗಳು 30W ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಆಡಿಯೊವನ್ನು ಡೈನಾಡಿಯೊದೊಂದಿಗೆ ಸಹಕರಿಸುತ್ತದೆ. ಮಲ್ಟಿಕಾಸ್ಟ್‌ನೊಂದಿಗೆ, ಎರಡು ಸ್ಮಾರ್ಟ್‌ಫೋನ್‌ಗಳು ತಮ್ಮ ಪ್ರದರ್ಶನಗಳನ್ನು ಟಿವಿ ಮಾದರಿಗಳಲ್ಲಿ ಏಕಕಾಲದಲ್ಲಿ ಬಿತ್ತರಿಸಬಹುದು. ಜೊತೆಗೆ ಈ ಟಿವಿ ಮಾದರಿಗಳು ಒನ್‌ಪ್ಲಸ್ ಬಡ್‌ಗಳೊಂದಿಗೆ ತ್ವರಿತ ಸಂಪರ್ಕ ಹೊಂದಬಹುದಾದ ಫೀಚರ್ಸ್‌ಗಳೊಂದಿಗೆ ಬರುತ್ತವೆ. ಒನ್‌ಪ್ಲಸ್‌ ಟಿವಿ U1S ಸರಣಿ ಸ್ಮಾರ್ಟ್‌ಟಿವಿಗಳು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು ಎತರ್ನೆಟ್ ಜ್ಯಾಕ್ ಇವೆ.

ಟಿವಿ

ಇದಲ್ಲದೆ ಈ ಟಿವಿ ಮಾದರಿಗಳು ಎಚ್‌ಡಿಎಂಐ 2.1 ಮತ್ತು ಇಎಆರ್‌ಸಿ ವೈಶಿಷ್ಟ್ಯವನ್ನು ಹೊಂದಿವೆ. ಈ ಸ್ಮಾರ್ಟ್‌ಟಿವಿಯನ್ನು ನಿಯಂತ್ರಿಸಲು ಮತ್ತು ಕಿಡ್ಸ್ ಮೋಡ್ ಅನ್ನು ಸಕ್ರಿಯಗೊಳಿಸಲು ಒನ್‌ಪ್ಲಸ್ ಸಂಪರ್ಕ ಅಪ್ಲಿಕೇಶನ್ ಅನ್ನು ಬಳಸಬಹುದು, ಇದು ಬಳಕೆದಾರರಿಗೆ ಕೆಲವು ವಿಷಯವನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ. ಒನ್‌ಪ್ಲಸ್ ಕನೆಕ್ಟ್ 2.0 ಐದು ಜನರಿಗೆ ಟಿವಿಯ ನಿಯಂತ್ರಣವನ್ನು ನೀಡುತ್ತದೆ. ಒನ್‌ಪ್ಲಸ್ ಟಿವಿ U1S ಸರಣಿಯು ದೂರದ ಫೀಲ್ಡ್ ಮೈಕ್ರೊಫೋನ್ ಮತ್ತು ಸ್ಪೀಕ್ ನೌ ಫೀಚರ್ಸ್‌ನೊಂದಿಗೆ ಬರುತ್ತದೆ, ಇದು ಟಿವಿಯನ್ನು ‘ಒಕೆ ಗೂಗಲ್' ಧ್ವನಿ ಆಜ್ಞೆಗಳೊಂದಿಗೆ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಸ್ಮಾರ್ಟ್‌ಟಿವಿ

ಇನ್ನು ಒನ್‌ಪ್ಲಸ್ ಟಿವಿ U1S ಸರಣಿಯ ಸ್ಮಾರ್ಟ್‌ಟಿವಿ 50 ಇಂಚಿನ ಮಾದರಿಗೆ 39,999,ರೂ. 55 ಇಂಚಿನ ಮಾದರಿಗೆ 47,999,ರೂ. 65 ಇಂಚಿನ ಮಾದರಿಗೆ 62,999 ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಇಂದು ರಾತ್ರಿ 9 ಗಂಟೆಯಿಂದ ರೆಡ್ ಕೇಬಲ್ ಕ್ಲಬ್, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಮತ್ತು ಅಮೆಜಾನ್ ಪ್ರೈಮ್ ಸದಸ್ಯರಿಗೆ ಖರೀದಿಸಲು ಲಭ್ಯವಾಗಲಿದೆ, ಇವುಗಳ ಒಪನ್‌ ಸೇಲ್‌ ಜೂನ್ 11 ರಿಂದ ಒನ್‌ಪ್ಲಸ್ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಪ್ರಾರಂಭವಾಗಲಿದೆ. ಇದಲ್ಲದೆ ಬಾಹ್ಯ ಒನ್‌ಪ್ಲಸ್ ಟಿವಿ ಕ್ಯಾಮೆರಾ ಮಾಡ್ಯೂಲ್ ಇದೆ ಮತ್ತು ಇದರ ಬೆಲೆ ರೂ. 2,499 ಮತ್ತು ಪ್ರತ್ಯೇಕವಾಗಿ ಮಾರಲಾಗುತ್ತದೆ.

Most Read Articles
Best Mobiles in India

English summary
OnePlus TV U1S series comes with OnePlus’ Gamma Engine that uses over 50 AI algorithms to deliver a cinematic viewing experience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X