ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡಲಿದೆ ಹೊಸ 'ಒಪ್ಪೋ A54s' ಸ್ಮಾರ್ಟ್‌ಫೋನ್!

|

ಬಜೆಟ್‌ ದರದಲ್ಲಿ ಒಪ್ಪೊ ಮೊಬೈಲ್‌ ಸಂಸ್ಥೆಯು ಹಲವು ಶ್ರೇಣಿಯಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಅದರಲ್ಲಿ ಒಪ್ಪೋ A ಸರಣಿಯ ಕೆಲವು ಫೋನ್‌ಗಳು ಗ್ರಾಹಕರನ್ನು ಸೆಳೆದಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಒಪ್ಪೋ ಸಂಸ್ಥೆಯು ಅದೇ ಸರಣಿಯಲ್ಲಿ ಮತ್ತೆ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ. ಅದುವೇ ಒಪ್ಪೋ A54s ಸ್ಮಾರ್ಟ್‌ಫೋನ್ ಆಗಿದ್ದು, ಈ ಸ್ಮಾರ್ಟ್‌ಫೋನ್ ಲೀಕ್ ಫೀಚರ್ಸ್‌ಗಳು ಈಗ ಕುತೂಹಲ ಮೂಡಿಸಿವೆ.

ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡಲಿದೆ ಹೊಸ 'ಒಪ್ಪೋ A54s' ಸ್ಮಾರ್ಟ್‌ಫೋನ್!

ಹೌದು, ಒಪ್ಪೋ ಮೊಬೈಲ್ ಸಂಸ್ಥೆಯು ಸದ್ಯ ಒಪ್ಪೋ A54s ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಉತ್ಸುಕವಾಗಿದೆ. ಲಾಂಚ್ಗೂ ಮೊದಲೇ ಈ ಫೋನಿನ ಲುಕ್ ಹಾಗೂ ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್‌ ಬಹುತೇಕ ಒಪ್ಪೋ A16 ಫೋನಿನ ಹೋಲಿಕೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಫೋನ್ ಕೆಳ ಬಲಭಾಗದಲ್ಲಿ ಒಪ್ಪೋ ಲೋಗೋ ನೀಡಲಾಗಿದೆ.

ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡಲಿದೆ ಹೊಸ 'ಒಪ್ಪೋ A54s' ಸ್ಮಾರ್ಟ್‌ಫೋನ್!

ಒಪ್ಪೋ A54s ಸ್ಮಾರ್ಟ್‌ಫೋನ್ ಶೈನ್‌ ಫಿನಿಶ್ ಇರುವಂತೆ ಕಾಣುತ್ತದೆ. ಫೋನಿನ ಮೇಲ್ಭಾಗದಲ್ಲಿ ವಾಟರ್‌ಡ್ರಾಪ್ ಶೈಲಿಯ ನಾಚ್ ಇದ್ದು, ಇದೊಂದು ಬಜೆಟ್‌ ಬೆಲೆಯ ಫೋನ್‌ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 6.52 ಇಂಚಿನ IPS LCD ಮಾದರಿಯಲ್ಲಿ ಇರಲಿದ್ದು ಇದರ ಜೊತೆಗೆ ಡಿಸ್‌ಪ್ಲೇಯು HD+ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿವೈಸ್‌ ಸಹ ಆಕರ್ಷಕ ಎನ್ನಲಾಗಿದೆ.

ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಬಹುದು. ಇನ್ನುಳಿದಂತೆ ಉಳಿದೆರಡು ರಿಯರ್‌ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಆಗಿರಲಿವೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಇನ್ನು ಸೆಲ್ಫಿ ಕ್ಯಾಮೆರಾಗಾಗಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡಲಿದೆ ಹೊಸ 'ಒಪ್ಪೋ A54s' ಸ್ಮಾರ್ಟ್‌ಫೋನ್!

ಒಪ್ಪೋ A54s ಫೋನ್ ಮೀಡಿಯಾ ಟೆಕ್ ಹೆಲಿಯೋ G35 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11 ಅನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಇವೆ. ಇನ್ನು ಒಪ್ಪೋ A54s ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಮಾಹಿತಿಯು ಈಗ ಲಭ್ಯವಿಲ್ಲ. ಆದರೆ ಲೀಕ್ ವರದಿಯಂತೆ ಈ ಫೋನ್ ಪರ್ಲ್ ಬ್ಲೂ ಮತ್ತು ಕ್ರಿಸ್ಟಲ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ ಎನ್ನಲಾಗಿದೆ.

Most Read Articles
Best Mobiles in India

English summary
Oppo A54s Specifications, Price And Color Options Leak.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X