Oppo: ಒಪ್ಪೋದ ಈ ಫೋನ್ ಶೀಘ್ರದಲ್ಲೇ ಲಾಂಚ್! 50MP ಕ್ಯಾಮೆರಾ.. 8GB RAM..
ಒಪ್ಪೋ (Oppo) ಕಂಪೆನಿ ಆಗಾಗ್ಗೆ ಭಿನ್ನ ಫೀಚರ್ಸ್ ಆಯ್ಕೆಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿದೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಒಪ್ಪೋದ ಹೊಸ ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಈ ಫೋನ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.
ಹೌದು, ಒಪ್ಪೋ A59 5G ಸ್ಮಾರ್ಟ್‌ಫೋನ್ (Oppo A59 5G smartphone) ಶೀಘ್ರದಲ್ಲೇ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ, ಡೈಮೆನ್ಸಿಟಿ 700 ಚಿಪ್‌ಸೆಟ್ ಪ್ರೊಸೆಸರ್ ಬಲ ಹಾಗೂ 33W ಫಾಸ್ಟ್ ಚಾರ್ಜಿಂಗ್ ಆಯ್ಕೆ ಸೇರಿದಂತೆ ಆಕರ್ಷಕ ಫೀಚರ್ಸ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಬಜೆಟ್ ಬೆಲೆಯಲ್ಲಿ ಈ ಫೋನ್ ಲಭ್ಯ ಇರಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಒಪ್ಪೋ A59 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ವಿಶೇಷ ಫೋನ್ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ ಎನ್ನಲಾಗಿದ್ದು, ಐಪಿಎಸ್ ಎಲ್‌ಸಿಡಿ ಮೂಲಕ ಕಾಣಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿರಲಿದ್ದು, 90Hz ರಿಫ್ರೆಶ್ ರೇಟ್‌ನೊಂದಿಗೆ ಕಾಣಿಸಿಕೊಳ್ಳಲಿದೆ.
ಒಪ್ಪೋ A59 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಇದರ ಪ್ರೊಸೆಸರ್ ವಿಚಾರಕ್ಕೆ ಬರುವುದಾದ್ರೆ ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಚಿಪ್‌ಸೆಟ್ (MediaTek Dimensity 700 SoC chipset) ಬಲ ಪಡೆದುಕೊಳ್ಳಲಿದೆ ಎನ್ನಲಾಗಿದ್ದು, ಮಾಲಿ G57 MC2 ಜಿಪಿಯು ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಓಎಸ್ ಮತ್ತು ಕಲರ್‌ಓಸ್ 13.1 ಅನ್ನು ರನ್ ಮಾಡಲಿದೆ.
ಈ ಪ್ರೊಸೆಸರ್ ಹಾಗೂ ಗ್ರಾಫಿಕ್ಸ್ ಕಾರ್ಡ್ ಬಲ ಗಮನಿಸಿದರೆ ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯ ಫೋನ್ ಆಗಲಿದೆ. ಅಷ್ಟೇ ಅಲ್ಲದೆ ಈ ಫೋನ್ 6GB RAM + 128GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 8GB RAM + 128GB ಯ ಸ್ಟೋರೇಜ್ ಆಯ್ಕೆಯಲ್ಲಿ ಇದು ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಜೊತೆಗೆ 8 GB RAM + 256 GB ಸ್ಟೋರೇಜ್‌ನಲ್ಲಿ ಈ ಫೋನ್ ಬರಲಿದ್ದು, ವಿಶೇಷ ಏನೆಂದರೆ ವರ್ಚುವಲ್ RAM ಬೆಂಬಲವನ್ನು ಸಹ ಹೊಂದಿರಲಿದೆ ಎನ್ನಲಾಗಿದೆ. ಉಳಿದಂತೆ 1TB ವರೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು ವಿಸ್ತರಣೆ ಮಾಡಿಕೊಳ್ಳಬಹುದಂತೆ.
ಒಪ್ಪೋ A59 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ದೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಆಯ್ಕೆ ಇದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕ್ಯಾಮೆರಾ ಪ್ರಿಯರಿಗೆ ಈ ಫೋನ್ ಅಚ್ಚು ಮೆಚ್ಚಾಗಲಿದೆ.
ಒಪ್ಪೋ A59 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಕೊನೆಯದಾಗಿ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ ಎನ್ನಲಾಗಿದ್ದು, 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ, ಬ್ಲೂಟೂತ್ ಆವೃತ್ತಿ 5.3, ವೈ-ಫೈ 802, 5G SA, ಡ್ಯುಯಲ್ 4G ನೊಂದಿಗೆ ಈ ಫೋನ್ ಲಾಂಚ್ ಆಗಲಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಒಪ್ಪೋ A59 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಇನ್ನು ಈ ಫೋನ್‌ನ 6 GB RAM + 128 GB ವೇರಿಯಂಟ್‌ಗೆ 12,575 ರೂಪಾಯಿ ಬೆಲೆ ಹೊಂದಿರಲಿದ್ದು, 8 GB RAM + 256 GB ವೇರಿಯಂಟ್‌ಗೆ 16,005ರೂ.ಗಳ ಬೆಲೆ ನಿಗದಿ ಪಡಿಸಲಾಗುತ್ತದೆ ಎಂದು ತೋರುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಈ ಫೋನ್ ಭಾರತದಲ್ಲಿ ಲಾಂಚ್ ಆಗುವುದು ಪಕ್ಕಾ ಆಗಿದೆ.


Click it and Unblock the Notifications








