ಒಪ್ಪೋ ಕಂಪೆನಿಯಿಂದ 125W ಫ್ಲ್ಯಾಶ್‌ ಚಾರ್ಜಿಂಗ್‌ ಪರಿಚಯಿಸಲು ಸಿದ್ದತೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೋ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಕ್ಯಾಮೆರಾ ಫೀಚರ್ಸ್‌ಗಳಿಂದಲೇ ಗುರುತಿಸಿಕೊಂಡಿರುವ ಒಪ್ಪೋ ತನ್ನ ಫಾಸ್ಟ್ ಚಾರ್ಜಿಂಗ್ ಫೀಚರ್ಸ್‌ಗಳಿಂದಲೂ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಸದ್ಯ ಇದೀಗ ಒಪ್ಪೋ ಒನ್‌ಪ್ಲಸ್ ಫೋನ್‌ಗಳಲ್ಲಿ ಬಳಸುವ ಡ್ಯಾಶ್ ಚಾರ್ಜ್ ಸಿಸ್ಟಂನ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ ತನ್ನದೇ ಆದ 125W ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗ್ತಿದೆ.

ಒಪ್ಪೋ

ಹೌದು, ಒಪ್ಪೋ ಕಂಪೆನಿ ಹೊಸ ಮಾದರಿಯ ಬ್ಯಾಟರಿ ಚಾರ್ಜಿಂಗ್‌ ಸಿಸ್ಟಮ್‌ ಅನ್ನು ಅಭಿವೃದ್ದಿ ಪಡಿಸಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಅದು 20 ನಿಮಿಷಗಳಲ್ಲಿ 4,000mAh ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೆ 5 ನಿಮಿಷಗಳಲ್ಲಿ 41%ರವರೆಗೆ ಚಾರ್ಜ್ ಮಾಡಬಹುದು. ಅಲ್ಲದೆ ದೊಡ್ಡ ಗಾತ್ರದ ಬ್ಯಾಟರಿಯನ್ನು ಸುಮಾರು 10 ನಿಮಿಷಗಳವರೆಗೆ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಹೊಸ ಚಾರ್ಜಿಂಗ್‌ ಸಿಸ್ಟಮ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಯಾಟರಿ

ಸದ್ಯ ಟೆಕ್‌ ವಲಯದಲ್ಲಿ ಬ್ಯಾಟರಿ ಸಾಮರ್ಥ್ಯ ಹಾಗೂ ವೇಗದ ಚಾರ್ಜಿಂಗ್‌ ವಿನ್ಯಾಸದ ಸ್ಮಾರ್ಟ್‌ಫೋನ್‌‌ಗಳಿಗೆ ಬೇಡಿಕೆ ಜಾಸ್ತಿ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಬಿಗ್‌ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುತ್ತಿವೆ. ಇದರ ಜೊತೆಗೆ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುತ್ತಲೇ ಇವೆ. ಇದೀಗ ಒಪ್ಪೋ ಕಂಪೆನಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಮತ್ತು ಅಡಾಪ್ಟರ್ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ ಸುರಕ್ಷತೆ ಮತ್ತು ದಕ್ಷತೆಗಾಗಿ ಚಾರ್ಜರ್, ಕೇಬಲ್ ಮತ್ತು ಬ್ಯಾಟರಿಯನ್ನು ಒಟ್ಟಿಗೆ ವಿನ್ಯಾಸಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ಚಾರ್ಜಿಂಗ್‌

ಇನ್ನು ಈ ವೇಗದ ಚಾರ್ಜಿಂಗ್‌ ಸಿಸ್ಟಂ ಡಬಲ್-6C ಸೆಲ್‌ಗಳನ್ನು ಬಳಸುವುದಕ್ಕಾಗಿ ''ಅದ್ಭುತ ಬ್ಯಾಟರಿ ಅನುಪಾತ" ವನ್ನು ಬಳಸಲಾಗಿದೆ ಎಂದು ಒಪ್ಪೋ ಹೇಳಿಕೊಂಡಿದೆ. ಅಲ್ಲದೆ ಚಾರ್ಜಿಂಗ್‌ ಹೆಚ್ಚು ಬ್ಯಾಟರಿ ಗಾತ್ರ ದೊಡ್ಡದಾಗಿ ಬೆಳೆಯದಂತೆ ಸುಧಾರಿತ ವಿದ್ಯುತ್ ಸಾಂದ್ರತೆಯ ಗುಣಲಕ್ಷಣಗಳಿಂದ ಪ್ರಯೋಜನವನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಒಪ್ಪೊದ ಹಿಂದಿನ ಯುಎಸ್‌ಬಿ-ಎ VOC ಚಾರ್ಜರ್‌ಗಳಿಗಿಂತ ಭಿನ್ನವಾಗಿ ಇದು ಕೇಬಲ್‌ನ ಎರಡೂ ತುದಿಗಳಲ್ಲಿ ಯುಎಸ್‌ಬಿ-ಸಿ ಅನ್ನು ಬೆಂಬಲಿಸಲಿದೆ ಎನ್ನಲಾಗ್ತಿದೆ.

ಒಪ್ಪೋ

ಇದಲ್ಲದೆ ಒಪ್ಪೋ ಈ ಟೆಕ್ನಾಲಜಿಯನ್ನು ಹೊಂದಿರುವ ಫೋನ್ ಯಾವುದು ಅನ್ನೊದನ್ನ ಇನ್ನೂ ಘೋಷಿಸಿಲ್ಲ, ಆದರೆ ಇದು ಪ್ರಸ್ತುತ ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ಒಪ್ಪೋ ರೆನೋ ಏಸ್ ಆಗಿರಲಿದೆ ಎನ್ನಲಾಗ್ತಿದೆ. ಜೊತೆಗೆ ಇದು 4,000mAh ಬ್ಯಾಟರಿಯನ್ನು ಹೊಂದಿರಲಿದ್ದು, 65W ಚಾರ್ಜರ್‌ನೊಂದಿಗೆ 31 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಆದರೆ ಕಳೆದ ವರ್ಷ 120W ಟೆಕ್ ಅನ್ನು 13 ನಿಮಿಷಗಳಲ್ಲಿ 4,000mAh ಬ್ಯಾಟರಿಯನ್ನು ಚಾರ್ಜ್ ಮಾಡಬಹುದೆಂದು ಘೋಷಣೆ ಮಾಡಿಕೊಂಡಿತ್ತು.

ಒಪ್ಪೋ

ಸದ್ಯ ಇದೀಗ ಒಪ್ಪೋ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅಳವಡಿಸಿಕೊಳ್ಳಲು ಬಹಳ ನಿಧಾನವಾಗಿಲ್ಲದೆ. ಆದರೆ ಈ ವರ್ಷದ ಆರಂಭದಲ್ಲಿ ತಂತ್ರಜ್ಞಾನವನ್ನು ಬಳಸುವ ಮೊದಲ ಫೋನ್ ಅನ್ನು ಘೋಷಿಸಿದೆ. ಆದರೆ ಕಂಪನಿಯು ಈಗ ಅತಿ ವೇಗದ ವೈರ್‌ಲೆಸ್ ವ್ಯವಸ್ಥೆಯನ್ನು ಸಹ ಹೊಂದಿದೆ ಎಂದು ಹೇಳಿಕೊಳ್ಳುತ್ತಿದೆ. ಇದರ ಹೊಸ 65W AirVOOC ಟೆಕ್ನಾಲಜಿ 30 ನಿಮಿಷಗಳಲ್ಲಿ 4,000mAh ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಒಪ್ಪೊ ಹೇಳಿಕೊಂಡಿದೆ, ಇದು ಪ್ರಸ್ತುತ ಲಭ್ಯವಿರುವ ಯಾವುದೇ ಪರಿಹಾರಕ್ಕಿಂತಲೂ ವೇಗವನ್ನು ನೀಡುತ್ತದೆ ಎಂದು ಹೇಳಲಾಗ್ತಿದೆ. ಒಪ್ಪೋ 65W ಏರ್‌ವಿಒಸಿ ಚಾರ್ಜರ್ ಅನ್ನು ವಿನ್ಯಾಸಗೊಳಿಸಿದೆ, ಆದರೆ ಅದು ಯಾವಾಗ ಲಭ್ಯವಿರುತ್ತದೆ ಅಥವಾ ಫೋನ್‌ಗಳು ಅದನ್ನು ಯಾವಾಗ ಬೆಂಬಲಿಸುತ್ತವೆ ಅನ್ನೊದನ್ನ ಇನ್ನು ಬಹಿರಂಗ ಪಡಿಸಿಲ್ಲ.

Most Read Articles
Best Mobiles in India

English summary
The headline figures of the system are that it can charge a 4,000mAh phone battery in 20 minutes and up to 41 percent in 5 minutes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X