ಸದ್ಯದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ಒಪ್ಪೋ F19 ಸ್ಮಾರ್ಟ್‌ಫೋನ್ ಸರಣಿ!

|

ಬಜೆಟ್‌ ದರದಲ್ಲಿ ಒಪ್ಪೊ ಮೊಬೈಲ್‌ ಸಂಸ್ಥೆಯು ಹಲವು ಶ್ರೇಣಿಯಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಅದರಲ್ಲಿ ಒಪ್ಪೋ F17 ಸರಣಿಯ ಫ್ಲ್ಯಾಗ್‌ಶಿಪ್ ಲುಕ್ ಪಡೆದುಕೊಂಡಿದ್ದು, ಗ್ರಾಹಕರನ್ನು ಸೆಳೆದಿದೆ. ಇದೀಗ ಒಪ್ಪೋ ಸಂಸ್ಥೆಯು ಅದೇ ಸರಣಿಯಲ್ಲಿ ಮತ್ತೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದೆ. ಅದುವೇ ಒಪ್ಪೋ F19 ಸ್ಮಾರ್ಟ್‌ಫೋನ್ ಸರಣಿ. ಈ ಫೋನ್ ಫೀಚರ್ಸ್‌ಗಳು ಈಗ ಕುತೂಹಲ ಮೂಡಿಸಿವೆ.

ಯಶಸ್ಸಿನ

ಹೌದು, ಒಪ್ಪೋ ಸಂಸ್ಥೆಯು ಸದ್ಯ ಒಪ್ಪೋ F19 ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಉತ್ಸುಕವಾಗಿದ್ದು, ಭಾರತದಲ್ಲಿ ಇದೇ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಸರಣಿಯು ಒಪ್ಪೋ F19 ಮತ್ತು ಒಪ್ಪೋ F19 ಪ್ರೊ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಹೊಂದಿದೆ. ಈ ಎರಡು ಫೋನ್‌ಗಳು ಆಕರ್ಷಕ ಕ್ಯಾಮೆರಾ ಫೀಚರ್ಸ್ ಜೊತೆ ಬಿಗ್ ಬ್ಯಾಟರಿ ಬಾಳಿಕೆ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಒಪ್ಪೋ F19 ಸರಣಿಯು ಈ ಹಿಂದಿನ ಒಪ್ಪೋ 17 ಸ್ಮಾರ್ಟ್‌ಫೋನ್‌ ಸರಣಿಯ ಯಶಸ್ಸಿನ ಮುಂದಿನ ಭಾಗ ಎನ್ನಲಾಗಿದೆ. ಹಾಗಾದರೇ ಒಪ್ಪೋ F17 ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒಪ್ಪೊ ಎಫ್ 17 ಪ್ರೊ - ಫೀಚರ್ಸ್‌

ಒಪ್ಪೊ ಎಫ್ 17 ಪ್ರೊ - ಫೀಚರ್ಸ್‌

ಒಪ್ಪೊ ಎಫ್ 17 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಒಪ್ಪೊ ಎಫ್ 17- ಫೀಚರ್ಸ್‌

ಒಪ್ಪೊ ಎಫ್ 17- ಫೀಚರ್ಸ್‌

ಒಪ್ಪೊ ಎಫ್ 17 ಸ್ಮಾರ್ಟ್‌ಫೋನ್ 6.44-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ವಾಟರ್‌ಡ್ರಾಪ್ ನಾಚ್ ಸ್ಟೈಲ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 4GB/64GB, 6GB/128GB ಮತ್ತು 8GB/128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ಸೆಟ್‌ಅಪ್

ಒಪ್ಪೊ ಎಫ್ 17 ಫೋನ್ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Most Read Articles
Best Mobiles in India

English summary
Oppo F19 series could be launched as soon as next month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X