Just In
- 14 hrs ago
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- 19 hrs ago
ಈ ಯೋಜನೆಗಳನ್ನು ರೀಚಾರ್ಜ್ ಮಾಡಿದ್ರೆ, ನಿಮಗೆ ವ್ಯಾಲಿಡಿಟಿ ಬಗ್ಗೆ ಟೆನ್ಷನ್ ಇರಲ್ಲ!
- 23 hrs ago
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- 1 day ago
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
Don't Miss
- Finance
ಜೂನ್ 27: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಸ್ಥಿರ
- News
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಇಂದಿನಿಂದ ಜೂ.27 ಪ್ರಾರಂಭ
- Lifestyle
Today Rashi Bhavishya: ಸೋಮವಾರದ ದಿನ ಭವಿಷ್ಯ: ಮೇಷ, ಕರ್ಕ, ಕನ್ಯಾ, ಧನು ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿವಹಿಸಿ
- Sports
ಭಾರತ vs ಐರ್ಲೆಂಡ್: ಮೊದಲ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ಗಳ ಭರ್ಜರಿ ಜಯ
- Movies
ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಒಪ್ಪೋ F21 ಪ್ರೊ ಮತ್ತು ಒಪ್ಪೋ F21 ಪ್ರೊ 5G ಬಿಡುಗಡೆ! ಲಾಂಚ್ ಆಫರ್ ಏನು?
ಒಪ್ಪೋ ಕಂಪೆನಿ ತನ್ನ ಬಹು ನಿರೀಕ್ಷಿತ ಒಪ್ಪೋ F21 ಪ್ರೊ ಮತ್ತು ಒಪ್ಪೋ F21 ಪ್ರೊ 5G ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇನ್ನು ಈ ಎರಡೂ ಸ್ಮಾರ್ಟ್ಫೋನ್ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಅನ್ನು ಸಹ ಒಳಗೊಂಡಿದ್ದು, ನೋಟಿಫೀಕೇಶನ್ ಸೂಚಕವಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್ಫೋನ್ 90Hz ರಿಪ್ರೆಶ್ ರೇಟ್ ಡಿಸ್ಪ್ಲೇ ಹೊಂದಿದೆ. ಆದರೆ ಒಪ್ಪೋ F21 ಪ್ರೊ 5G ಫೋನ್ 60Hz ರಿಫ್ರೆಶ್ ರೇಟ್ ಡಿಸ್ಪ್ಲೇ ಒಳಗೊಂಡಿದೆ.

ಹೌದು, ಒಪ್ಪೋ ಕಂಪೆನಿ ತನ್ನ ಒಪ್ಪೋ F21 ಪ್ರೊ ಮತ್ತು ಒಪ್ಪೋ F21 ಪ್ರೊ 5G ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಒಪ್ಪೋ F21 ಪ್ರೊ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್ ಹೊಂದಿದೆ. ಆದರೆ ಒಪ್ಪೋ F21 ಪ್ರೊ 5G ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ಗಳು ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್ಸೆಟ್ ಆರೆಂಜ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇನ್ನುಳಿದಂತೆ ಈ ಎರಡೂ ಸ್ಮಾರ್ಟ್ಫೋನ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ F21 ಪ್ರೊ ಸ್ಮಾರ್ಟ್ಫೋನ್
ಒಪ್ಪೋ F21 ಪ್ರೊ ಸ್ಮಾರ್ಟ್ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4 ಇಂಚಿನ ಫುಲ್ ಹೆಚ್ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಲರ್OS 12.1 ಜೊತೆಗೆ ರನ್ ಆಗುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಒಪ್ಪೋ F21 ಪ್ರೊ 5G
ಒಪ್ಪೋ F21 ಪ್ರೊ 5G ಸ್ಮಾರ್ಟ್ಫೋನ್ 6.4-ಇಂಚಿನ ಫುಲ್ ಹೆಚ್ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಲರ್OS 12.1 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಆರ್ಬಿಟ್ ಲೈಟ್ಗಳನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಜೊತೆಗೆ 4,500mAh ಬ್ಯಾಟರಿ ಹೊಂದಿದ್ದು, 33W SuperVOOC ಚಾರ್ಜಿಂಗ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್ಫೋನ್ ಬೆಲೆ 8GB + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 22,999ರೂ.ಆಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ. ಇನ್ನು ಒಪ್ಪೋ F21 ಪ್ರೊ 5G ಸ್ಮಾರ್ಟ್ಫೋನ್ ಬೆಲೆ 8GB + 128GB ಕಾನ್ಫಿಗರೇಶನ್ಗೆ 26,999ರೂ.ಆಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇನ್ಬೋ ಸ್ಪೆಕ್ಟ್ರಮ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ ಒಪ್ಪೋ F21 ಪ್ರೊ ಫೋನ್ ಏಪ್ರಿಲ್ 15 ರಿಂದ ಮಾರಾಟವಾಗಲಿದೆ. ಆದರೆ ಒಪ್ಪೋ F21 ಪ್ರೊ 5G ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಎರಡೂ ಸ್ಮಾರ್ಟ್ಫೋನ್ಗಳ ಲಾಂಚ್ ಆಫರ್ನಲ್ಲಿ 10% ಬ್ಯಾಂಕ್ ಕ್ಯಾಶ್ಬ್ಯಾಕ್ ಮತ್ತು ನೋ-ಕಾಸ್ಟ್ EMI ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999