ಸದ್ಯದಲ್ಲೇ ಲಾಂಚ್ ಆಗಲಿದೆ ಹೈ ಎಂಡ್‌ ಫೀಚರ್ಸ್‌ಗಳ ಒಪ್ಪೋ ಫೈಂಡ್‌ ಫೋನ್ ಸರಣಿ!

|

ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಒಪ್ಪೋ ಮೊಬೈಲ್‌ ಸಂಸ್ಥೆಯು ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಅದರಲ್ಲಿ ಒಪ್ಪೋ ಫೈಂಡ್ ಸರಣಿಯ ಫ್ಲ್ಯಾಗ್‌ಶಿಪ್ ಲುಕ್ ಪಡೆದುಕೊಂಡಿದ್ದು, ಗ್ರಾಹಕರನ್ನು ಸೆಳೆದಿದೆ. ಇದೀಗ ಒಪ್ಪೋ ಸಂಸ್ಥೆಯು ಜನಪ್ರಿಯ ಫೈಂಡ್ ಸರಣಿಯಲ್ಲಿ ಮತ್ತೆ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದ್ದು, ಆ ಫೋನ್‌ಗಳ ಲೀಕ್ ಫೀಚರ್ಸ್‌ಗಳು ಕುತೂಹಲ ಮೂಡಿಸಿವೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆಯು ಸದ್ಯ ಫೈಂಡ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಉತ್ಸುಕವಾಗಿದ್ದು, ಮಾರ್ಚ್ 11ರಂದು ಅನಾವರಣ ಆಗುವ ನಿರೀಕ್ಷೆಗಳಿವೆ. ಈ ಸರಣಿಯು ಒಪ್ಪೋ ಫೈಂಡ್‌ x3 ಪ್ರೊ, ಒಪ್ಪೋ ಫೈಂಡ್‌ x3 ನಿಯೋ ಮತ್ತು ಒಪ್ಪೋ ಫೈಂಡ್‌ x3 ಲೈಟ್ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಈ ಮೂರು ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಆದರೆ ಭಿನ್ನ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದರೇ ಲೀಕ್ ಮಾಹಿತಿಯಂತೆ ಒಪ್ಪೋ ಫೈಂಡ್‌ ಸರಣಿಯ ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒಪ್ಪೊ ಒಪ್ಪೋ ಫೈಂಡ್‌ x3 ಪ್ರೊ - ಫೀಚರ್ಸ್‌

ಒಪ್ಪೊ ಒಪ್ಪೋ ಫೈಂಡ್‌ x3 ಪ್ರೊ - ಫೀಚರ್ಸ್‌

ಒಪ್ಪೊ ಫೈಂಡ್‌ x3 ಪ್ರೊ ಫೋನ್ 1,440x3,216 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.7 ಡಿಸ್‌ಪ್ಲೇ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 888 SoCಪ್ರೊಸೆಸರ್‌ ಇರಲಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್‌ ಪಡೆದಿರಲಿದೆ. ಜೊತೆಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ.

ಒಪ್ಪೊ ಒಪ್ಪೋ ಫೈಂಡ್‌ x3 ನಿಯೋ - ಫೀಚರ್ಸ್‌

ಒಪ್ಪೊ ಒಪ್ಪೋ ಫೈಂಡ್‌ x3 ನಿಯೋ - ಫೀಚರ್ಸ್‌

ಒಪ್ಪೊ ಫೈಂಡ್‌ x3 ನಿಯೋ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.5 ಡಿಸ್‌ಪ್ಲೇ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 865 SoCಪ್ರೊಸೆಸರ್‌ ಇರಲಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್‌ ಪಡೆದಿರಲಿದೆ. ಹಾಗೆಯೇ ಈ ಫೋನ್ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ.

ಒಪ್ಪೊ ಒಪ್ಪೋ ಫೈಂಡ್‌ x3 ಲೈಟ್ - ಫೀಚರ್ಸ್‌

ಒಪ್ಪೊ ಒಪ್ಪೋ ಫೈಂಡ್‌ x3 ಲೈಟ್ - ಫೀಚರ್ಸ್‌

ಒಪ್ಪೊ ಫೈಂಡ್‌ x3 ನಿಯೋ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.44 ಡಿಸ್‌ಪ್ಲೇ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 765G SoCಪ್ರೊಸೆಸರ್‌ ಇರಲಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್‌ ಪಡೆದಿರಲಿದೆ. ಹಾಗೆಯೇ ಈ ಫೋನ್ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,300mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ.

Most Read Articles
Best Mobiles in India

English summary
Oppo Find X3 Pro may be powered by the Snapdragon 888 SoC, whereas the Oppo Find X3 Neo may be powered by the Snapdragon 865 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X