'ಒಪ್ಪೊ ಕೆ5' ಫೋನ್ ಬಿಡುಗಡೆ!..ಫಾಸ್ಟ್‌ ಚಾರ್ಜರ್‌, 64MP ಕ್ಯಾಮೆರಾ ವಿಶೇಷ!

|

ಚೀನಾ ಮೂಲದ ಒಪ್ಪೊ ಸ್ಮಾರ್ಟ್‌ಫೋನ್ ಕಂಪನಿಯು ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಸೆಲ್ಫಿ ಎಕ್ಸ್‌ಪರ್ಟ್‌ ಎಂದೇ ಗುರುತಿಸಿಕೊಂಡಿದೆ. ಒಪ್ಪೊ ಇದೀಗ ಮತ್ತೆ ತನ್ನ ಸ್ಮಾರ್ಟ್‌ಫೋನ್ ಶ್ರೇಣಿಗೆ ಹೊಸ ಸ್ಮಾರ್ಟ್‌ಫೋನ್‌ ಸೇರ್ಪಡೆ ಮಾಡಿದ್ದು, 64ಎಂಪಿ ಕ್ಯಾಮೆರಾ ಸೆನ್ಸಾರ್‌ ಹಾಗೂ 8GB RAM ಸೇರಿದಂತೆ ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳಿರುವ ಈ ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿರುವುದು ವಿಶೇಷ.

'ಒಪ್ಪೊ ಕೆ5' ಫೋನ್ ಬಿಡುಗಡೆ!..ಫಾಸ್ಟ್‌ ಚಾರ್ಜರ್‌, 64MP ಕ್ಯಾಮೆರಾ ವಿಶೇಷ!

ಹೌದು, ಒಪ್ಪೊ ಸ್ಮಾರ್ಟ್‌ಫೋನ್ ಕಂಪನಿಯು ಇಂದು ಚೀನಾ ಮಾರುಕಟ್ಟೆಯಲ್ಲಿ ಒಪ್ಪೊ ಕೆ5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರರ್‌ ಹೊಂದಿದ್ದು, 30W ಸಾಮರ್ಥ್ಯದ VOOC ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಕ್ವಾಡ್‌ ಕ್ಯಾಮೆರಾ ರಚನೆ, ವಾಟರ್‌ನಾಚ್ ಸ್ಟೈಲ್‌, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಫೀಚರ್ಸ್‌ಗಳು ಪ್ರಮುಖ ಆಕರ್ಷಣೆಯಾಗಿವೆ.

ಡಿಸ್‌ಪ್ಲೇ ರಚನೆ

ಒಪ್ಪೊ ಕೆ5 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, AMOLED ಮಾದರಿಯ ಡಿಸ್‌ಪ್ಲೇ ಇದೆ. ವಾಟರ್‌ನಾಚ್ ಸ್ಟೈಲ್‌ನಲ್ಲಿರುವ ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಹಾಗೆಯೇ ಡಿಸ್‌ಪ್ಲೇಯ ಸುತ್ತಳತೆಯು 158.7x75.16x8.55mm ಆಗಿದೆ. ಪ್ರಖರತೆ ಅತ್ಯುತ್ತಮವಾಗಿದ್ದು, ವಿಡಿಯೊ ವೀಕ್ಷಣೆಗೆ, ಗೇಮಿಂಗ್‌ಗೆ ಉತ್ತಮ ಎನಿಸಲಿದೆ.

'ಒಪ್ಪೊ ಕೆ5' ಫೋನ್ ಬಿಡುಗಡೆ!..ಫಾಸ್ಟ್‌ ಚಾರ್ಜರ್‌, 64MP ಕ್ಯಾಮೆರಾ ವಿಶೇಷ!

ಪ್ರೊಸೆಸರ್‌ ಸಾಮರ್ಥ್ಯ

ಒಪ್ಪೊ ಕೆ5 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ ಪೈ ಓಎಸ್‌ ಬೆಂಬಲವನ್ನು ಒಳಗೊಂಡಿದೆ. ಇದರೊಂದಿಗೆ 6GB + 128GB , 8GB + 128GB ಹಾಗೂ 8GB RAM ಮತ್ತು 256GB ಆಂತರಿಕ ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಗೇಮ್‌ ಬೂಸ್ಟ್‌ ಆಯ್ಕೆ ಸಹ ಇದರಲ್ಲಿ ಕಾಣಬಹುದು.

ಕ್ವಾಡ್‌ ಕ್ಯಾಮೆರಾ

ಒಪ್ಪೊ ಕೆ5 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು f/2.0 ಅಪರ್ಚರ್‌ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳೆರಡು f/2.4 ಅಪರ್ಚರ್‌ನೊಂದಿಗೆ 2 ಎಂಪಿ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿಗಾಗಿ f/2.0 ಅಪರ್ಚರ್‌ನೊಂದಿಗೆ 32ಎಂಪಿ ಸೆನ್ಸಾರ್ ನೀಡಲಾಗಿದೆ.

ಬ್ಯಾಟರಿ ಪವರ್‌

ಒಪ್ಪೊ ಕೆ5 ಸ್ಮಾರ್ಟ್‌ಫೋನ್ 3,920mAh ಸಾಮರ್ಥ್ಯದ ಬ್ಯಾಟರಿ ಒದಗಿಸಲಾಗಿದ್ದು, ಇದರೊಂದಿಗೆ 30W ಸಾಮರ್ಥ್ಯದ VOOC ಫ್ಲ್ಯಾಶ್‌ ಚಾರ್ಜ್‌ 4.0 ತಂತ್ರಜ್ಞಾನದ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಹಾಗೆಯೇ ಡ್ಯುಯಲ್‌ ಬ್ಯಾಂಡ್‌ ವೈಫೈ, ಎನ್‌ಎಫ್‌ಸಿ, ಬ್ಲೂಟೂತ್, 3.5ಎಂಎಂ ಆಡಿಯೊ ಜಾಕ್, ಯುಎಸ್‌ಬಿ ಟೈಪ್‌-ಸಿ, ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ.

'ಒಪ್ಪೊ ಕೆ5' ಫೋನ್ ಬಿಡುಗಡೆ!..ಫಾಸ್ಟ್‌ ಚಾರ್ಜರ್‌, 64MP ಕ್ಯಾಮೆರಾ ವಿಶೇಷ!

ಬೆಲೆ ಮತ್ತು ಲಭ್ಯತೆ

ಒಪ್ಪೊ ಕೆ5 ಸ್ಮಾರ್ಟ್‌ಫೋನ್ 6GB + 128GB ಬೆಲೆಯು CNY 1,899 (ಅಂದಾಜು 18,900ರೂ), 8GB + 128GB ಬೆಲೆಯು CNY 2,099 (ಅಂದಾಜು 20,900ರೂ) ಹಾಗೂ 8GB RAM ಮತ್ತು 256GB ವೇರಿಯಂಟ್ ಬೆಲೆಯು 2,499 (ಅಂದಾಜು. 24,900ರೂ) ಆಗಿದೆ. ಇದೇ ಅಕ್ಟೋವರ್ 17ರಿಂದ ಸೇಲ್ ಆರಂಭವಾಗಲಿದ್ದು, ಒಪ್ಪೊ ಕಂಪನಿಯ ಅಧಿಕೃತ ವೆಬ್‌ತಾಣದಲ್ಲಿ ಮತ್ತು ಇತರೆ ಚೀನಾದ ತಾಣಗಳಲ್ಲಿ ಸಿಗಲಿದೆ. ಬ್ಲೂ, ಗ್ರೀನ್, ವೈಟ್‌ ಮತ್ತು ಗ್ರೇಡಿಯಂಟ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Oppo K5 comes with a quad camera setup, a waterdrop-style notch, an in-display fingerprint scanner. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X