Just In
Don't Miss
- News
ಅಂಕೋಲ; ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Lifestyle
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನಾಲ್ಕು ಕ್ಯಾಮೆರಾವುಳ್ಳ 'ಒಪ್ಪೊ ರೆನೋ 2Z' ಸೇಲ್ ಆರಂಭ!..ಭಾರೀ ಆಫರ್!
ಚೀನಾದ ಮೂಲದ ಓಪ್ಪೊ ಸ್ಮಾರ್ಟ್ಫೋನ್ ಕಂಪನಿ ಇತ್ತೀಚಿಗೆ ಒಪ್ಪೊ ರೆನೋ 2 ಸರಣಿಯಲ್ಲಿ, ಒಪ್ಪೊ ರೆನೋ, ಒಪ್ಪೊ ರೆನೋ 2Z ಮತ್ತು ಒಪ್ಪೊ ರೆನೋ 2F ಹೆಸರಿನ ಮೂರು ಸ್ಮಾರ್ಟ್ಫೋನ್ಗಳನ್ನು ಘೋಷಿಸಿದೆ. ಅವುಗಳಲ್ಲಿ ಈಗ ರೆನೋ 2Z ಸ್ಮಾರ್ಟ್ಫೋನ್ ಇದೀಗ ಸೇಲ್ ಆರಂಭಿಸಿದೆ. ಗ್ರಾಹಕರು ಇ ಕಾಮರ್ಸ್ ತಾಣಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ತಾಣಗಳಲ್ಲಿ ಖರೀದಿಸಬಹುದಾಗಿದೆ.

ಹೌದು, ಒಪ್ಪೊ ರೆನೋ 2Z ಸ್ಮಾರ್ಟ್ಫೋನ್ ಸೇಲ್ ಶುರುವಾಗಿದ್ದು, ಈ ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆಯು 29,990ರೂ.ಗಳಾಗಿದ್ದು, ಇಎಮ್ಐ ಸೇರದಂತೆ ಆಯ್ದ ಬ್ಯಾಂಕುಗಳಿಂದ ಇನ್ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಹಾಗಾದರೇ ಒಪ್ಪೊ ರೆನೋ 2Z ಸ್ಮಾರ್ಟ್ಫೋನ್ ಫೀಚರ್ಸ್ಗಳೆನು ಮತ್ತು ಆಫರ್ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಓದಿರಿ : ಅತೀ ಕಡಿಮೆ ಬೆಲೆಗೆ 'ಇನ್ಫಿನಿಕ್ಸ್ ಹಾಟ್ 8' ಫೋನ್ ಬಿಡುಗಡೆ!

ಏರ್ಟೆಲ್ ಕನೆಕ್ಷನ್ ಇರುವ ಗ್ರಾಹಕರು ಒಪ್ಪೊ ರೆನೋ 2Z ಸ್ಮಾರ್ಟ್ಫೋನ್ ಖರೀದಿಸಿದರೇ ಡಬಲ್ ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯ ಸಿಗಲಿದೆ. ಹಾಗೂ ವೊಡಾಫೋನ್ ಗ್ರಾಹಕರು 255ರೂ. ರೀಚಾರ್ಜ್ ಮೇಲೆ 250GB ಡೇಟಾ ದೊರೆಯಲಿದ್ದು, ಇನ್ನು ಜಿಯೋ 198ರೂ ಮತ್ತು 299ರೂ.ಗಳ ಪ್ಲ್ಯಾನ್ನಲ್ಲಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ತಾಣಗಳಲ್ಲಿ ಎಕ್ಸ್ಚೇಂಜ್ ಮೇಲೆ 3000ರೂ ರಿಯಾಯಿತಿ ದೊರೆಯಲಿದೆ.

ಒಪ್ಪೊ ರೆನೋ 2Z ಸ್ಮಾರ್ಟ್ಫೋನ್ 1,080 x 2,340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯು 19.5:9 ಅನುಪಾತವನ್ನು ಒಳಗೊಂಡಿದೆ. ಬಾಹ್ಯಬಾಡಿಯಿಂದ ಡಿಸ್ಪ್ಲೇಯ ನಡುವಿನ ಅಂತರವು ಶೇ.91.6% ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ.
ಓದಿರಿ : BSNL ಆಫರ್!..ಬ್ರಾಡ್ಬ್ಯಾಂಡ್ ಸೇವೆ ಉಚಿತ, ಪ್ರತಿದಿನ 5GB ಡೇಟಾ ಖಚಿತ!

ಮೀಡಿಯಾ ಟೆಕ್ ಹಿಲಿಯೊ P90 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದೆ. ಇದರೊಂದಿಗೆ 8GB RAM ಸಾಮರ್ಥ್ಯವಿದ್ದು, 256GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಮಲ್ಟಿಟಾಸ್ಕ್ ಕೆಲಸಗಳನ್ನು ವೇಗವಾಗಿ ನಡೆಸಲು ಸಪೋರ್ಟ್ ಮಾಡಲಿದೆ.

ಒಟ್ಟು ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ ಮತ್ತು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ನಲ್ಲಿವೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. AI ಬ್ಯೂಟಿ ಮೋಡ್, ಸ್ಟೆಡಿ ಮೋಡ್ ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಾಗಿದೆ.

VOOC 3.0 ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನದ ಬೆಂಬಲವನ್ನು ಪಡೆದಿರುವಒಪ್ಪೊ ರೆನೋ 2Z ಸ್ಮಾರ್ಟ್ಫೋನ್ 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್, ಆಂಬಿಯಂಟ್ ಲೈಟ್ ಮೋಡ್, ಬ್ಲೂಟೂತ್, ವೈಫೈ, ಒಳಗೊಂಡಂತೆ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ಈ ಸ್ಮಾರ್ಟ್ಫೋನ್ನಲ್ಲಿ ಕಾಣಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790