ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಈ ತಿಂಗಳ ಒಳಗೆ ಈ ಕೆಲಸವನ್ನು ಮಾಡಲೇಬೇಕು?

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕರು ಈ ಸ್ಟೋರಿಯನ್ನು ಗಮನಿಸಲೇಬೇಕು. ಎಸ್‌ಬಿಐ ತನ್ನ ಎಲ್ಲಾ ಖಾತೆದಾರರಿಗೆ ಒಂದೆರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡುವುದಕ್ಕೆ ತುರ್ತು ಸಂದೇಶವನ್ನು ಕಳುಹಿಸಿದೆ. ಅಲ್ಲದೆ ಈ ಕೆಲಸವನ್ನು ಆದಷ್ಟು ಬೇಗ ನಿರ್ವಹಿಸಬೇಕೆಂದು ಎಚ್ಚರಿಕೆಯನ್ನು ಸಹಯ ನೀಡಿದೆ. ಸದ್ಯ ಎಸ್‌ಬಿಐ ನೀಡಿರುವ ಸಂದೇಶದ ಪ್ರಕಾರ ಎಸ್‌ಬಿಐ ಖಾತೆದಾರರು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಕಾರ್ಡ್‌ ನೊಂದಿಗೆ ಇದೇ ಸೆಪ್ಟೆಂಬರ್‌ ಅಂತ್ಯದೊಳಗೆ ಲಿಂಕ್ ಮಾಡಲೇಬೇಕು ಎಂದು ಹೇಳಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಹೌದು, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಎಲ್ಲಾ ಗ್ರಾಹಕರಿಗೆ ಇದೇ ಸೆಫ್ಟೆಂಬರ್‌ ತಿಂಗಳ ಅಂತ್ಯದೊಳಗೆ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿರಬೇಕು ಎಂದು ಹೇಳಿದೆ. ಒಂದು ವೇಳೆ SBI ಬ್ಯಾಂಕ್‌ನ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ವಿಫಲವಾದರೆ, ಬ್ಯಾಂಕಿಂಗ್‌ ಸೇವೆ ಪಡೆಯುವಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಎಸ್‌ಬಿಐ ತನ್ನ ಗ್ರಾಹಕರಿಗೆ ಕೊಟ್ಟ ಸೂಚನೆಯಲ್ಲಿ ಯಾವೆಲ್ಲಾ ಅಂಶಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ಬ್ಯಾಂಕ್‌ನ ಅಕೌಂಟ್‌ ಹೊಂದಿರುವ ಎಲ್ಲರೂ ಕೂಡ ಈ ತಿಂಗಳ ಒಳಗೆ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿಸುವುದು ಕಡ್ಡಾಯ. ಒಂದು ವೇಳೆ ನಿಮ್ಮ ಪ್ಯಾನ್‌ ಆಧಾರ್‌ ಲಿಂಕ್‌ ಆಗದೇ ಹೋಗಿದ್ದರೆ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಅದರಲ್ಲೂ ನಿಖರವಾಗಿ ಯಾವ ಸೇವೆ ವಿಳಂಬವಾಗುತ್ತದೆ ಅಥವಾ ನಿರಾಕರಿಸಲಾಗುತ್ತದೆ ಎಂಬುದನ್ನು ಕೂಡ ಬ್ಯಾಂಕ್‌ ತನ್ನ ಸಂದೇಶದಲ್ಲಿ ಸ್ಪಷ್ಟಪಡಿಸಿದೆ. ಸದ್ಯ ಇದರ ಬಗ್ಗೆ ಎಸ್‌ಬಿಐ ಟ್ವಿಟರ್‌ಗೆ ಪೋಸ್ಟ್‌ ಮಾಡಿದೆ. "ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ನಾವು ನಮ್ಮ ಗ್ರಾಹಕರಿಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ" ಎಂದು ಟ್ವೀಟ್‌ನಲ್ಲಿ ಹೇಳಿದೆ.

ಎಸ್‌ಬಿಐ

ಇನ್ನು ಎಸ್‌ಬಿಐ ಬ್ಯಾಂಕ್‌ ಖಾತೆದಾರರು PAN- ಆಧಾರ್ ಲಿಂಕ್ ಅನ್ನು ನಿಗಧಿತ ಕಾಲ ಮಿತಿಯೊಳಗೆ ಮಾಡದೇ ಹೋದರೆ ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಲ್ಲದೆ ಎಸ್‌ಬಿಐ ಖಾತೆದಾರರಿಗೆ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಅನ್ನೊದನ್ನ ಸ್ಪಷ್ಟಪಡಿಸಿದೆ. ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರ ಕೂಡ ಕಡ್ಡಾಯಮಾಡಿರೋದು ನಿಮಗೆಲ್ಲಾ ತಿಳಿದೆ ಇದೆ. ಇದೇ ಕಾರಣಕ್ಕೆ ಎಸ್‌ಬಿಐ ಕೂಡ ತನ್ನ ಗ್ರಾಹಕರಿಗೆ ತುರ್ತು ಸಂದೇಶವನ್ನು ಕಳುಸಹಿಸುತ್ತಿದೆ.

ಎಸ್‌ಬಿಐ

ಆದ್ದರಿಂದ, ನೀವು ಎಸ್‌ಬಿಐ ಖಾತೆಯನ್ನು ಹೊಂದಿದ್ದು, ಎಸ್‌ಬಿಐ ಬ್ಯಾಂಕ್‌ ಒದಗಿಸುವ ಎಲ್ಲಾ ಪ್ರಯೋಜನಗಳನ್ನು ಪಡದುಕೊಳ್ಳಬೇಕಾದರೆ ನೀವು ಪ್ಯಾನ್‌ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಲೇಬೇಕಿದೆ. ಇನ್ನು ಪ್ಯಾನ್ ಮತ್ತು ಆಧಾರ್ ಕಾರ್ಡ್ ಎರಡನ್ನೂ ಲಿಂಕ್ ಮಾಡುವ ಹಿಂದಿನ ಮೂಲ ಉದ್ದೇಶ ನೀವು ನಡೆಸುವ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಉತ್ತಮವಾಗಿ ಪತ್ತೆಹಚ್ಚಲು ಸಹಾಯ ಮಾಡಲಿದೆ. ಅಲ್ಲದೆ ಸಂಬಂಧಪಟ್ಟ ಪ್ರತಿಯೊಬ್ಬರೂ ತೆರಿಗೆಯನ್ನು ಪಾವತಿಸುವುದನ್ನು ಖಚಿತಪಡಿಸಲಿದೆ.

ಎಸ್‌ಬಿಐ ಬ್ಯಾಂಕ್‌ ಖಾತೆದಾರರು ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಎಸ್‌ಬಿಐ ಬ್ಯಾಂಕ್‌ ಖಾತೆದಾರರು ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಹಂತ:1 Onlinesbi.com ಗೆ ಹೋಗಿ ಮತ್ತು 'ಲಿಂಕಿಂಗ್‌ ಪ್ಯಾನ್‌ ವಿಥ್‌ ಆಧಾರ್ ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು ನೇರವಾಗಿ ಪ್ಯಾನ್-ಆಧಾರ್ ಕಾರ್ಡ್ ಆನ್‌ಲೈನ್ ಫಾರ್ಮ್‌ಗೆ ಕರೆದೊಯ್ಯುತ್ತದೆ.

ಹಂತ:2 ನಂತರ ಪ್ಯಾನ್-ಆಧಾರ್ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು ಪಾಪ್-ಅಪ್ ವಿಂಡೋ ಮೂಲಕ ಪ್ರತ್ಯೇಕ ಪುಟಕ್ಕೆ ಕರೆದೊಯ್ಯುತ್ತದೆ-https://eportal.incometax.gov.in/iec/foservices/#/pre-login/bl-link-aadhaar.

ಹಂತ:3 ಇದರಲ್ಲಿ ನೀವು ನಿಮ್ಮ ಹೆಸರು, ಪ್ಯಾನ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. 'ಆಧಾರ್ ಸಂಖ್ಯೆ' ಮತ್ತು 'ಆಧಾರ್ ಪ್ರಕಾರ ಹೆಸರು' ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಮುದ್ರಿಸಿದಂತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದೆ ನಿಮ್ಮ ಆಧಾರ್ ವಿವರ ಸರಿಯಿದೆಯಾ ಅನ್ನೊದನ್ನ ಪರಿಶೀಲಿಸಿಕೊಳ್ಳಬೇಕು.

ಹಂತ:4. 'ಲಿಂಕ್ ಆಧಾರ್' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಪ್ಯಾನ್‌ ಆಧಾರ್‌ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Most Read Articles
Best Mobiles in India

English summary
SBI had taken to Twitter to post this message, "We advise our customers to link their PAN with Aadhaar to avoid any inconvenience and continue enjoying a seamless banking service".to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X