Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಇತಿಹಾಸದಲ್ಲೇ ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್!..'ಇಮೇಲ್' ಚೆಕ್ ಮಾಡಿ ನೋಡಿ!!
ಈ ಆನ್ಲೈನ್ ಪ್ರಪಂಚ ಎಂದೂ ಸುರಕ್ಷಿತವಲ್ಲ ಎಂಬ ಈ ಮಾತಿಗೆ ಪುಷ್ಟಿ ಕೊಡುವಂತೆ ಬರೋಬ್ಬರಿ 77 ಕೋಟಿಗೂ ಹೆಚ್ಚು ಇಮೇಲ್ ವಿಳಾಸಗಳು ಸಾರ್ವಜನಿಕರಿಗೆ ಲೀಕ್ ಆಗಿವೆ.! ಸ್ಟ್ರಾಂಗ್ ಆಗಿರುವ ಪಾಸ್ವರ್ಡ್ ಹಾಕಿದರೆ ಇಮೇಲ್ ಸುರಕ್ಷಿತವಾಗಿರುತ್ತದೆಂಬ ವಿಶ್ವಾಸದಿಂದ ಇರುತ್ತೇವೆ. ಆದರೆ, ವಾಸ್ತವದಲ್ಲಿ ಇಮೇಲ್ ವಿಳಾಸಗಳು ಸೇರಿದಂತೆ 2.1 ಕೋಟಿ ಪಾಸ್ವರ್ಡ್ಗಳೂ ಲೀಕ್ ಆಗಿರುವ ಶಾಕಿಂಗ್ ರಿಪೋರ್ಟ್ ಒಂದು ಇದೀಗ ವರದಿಯಾಗಿದೆ.
ಮೆಗಾ ಎಂಬ ಶೇರಿಂಗ್ ವೆಬ್ಸೈಟ್ನಲ್ಲಿ ಲೀಕ್ ಆಗಿರುವ ಈ ಎಲ್ಲಾ ಡೇಟಾಗಳು ಮೊದಲು ಪ್ರಕಟವಾಗಿದ್ದು, ಟ್ರಾಯ್ ಹಂಟ್ ಎಂಬ ಸೆಕ್ಯೂರಿಟಿ ರಿಸರ್ಚರ್ ಅವರ ಕಣ್ಣಿಗೆ ಬಿದ್ದಿದೆ. ಇದಾದ ಬಳಿಕ ಮೆಗಾ ವೆಬ್ಸೈಟ್ನಿಂದ ಈ ಡೇಟಾವನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಸ್ಟ್ರಾಂಗ್ ಆಗಿರುವ ಪಾಸ್ವರ್ಡ್ ಹಾಕಿದರೆ ಇಮೇಲ್ ಸುರಕ್ಷಿತವಾಗಿರುತ್ತದೆಂಬ ವಿಶ್ವಾಸದಿಂದ ಇರುತ್ತೇವೆ. ಆದರೆ, ವಾಸ್ತವದಲ್ಲಿ ಇದ್ಯಾವುದೂ ಸುರಕ್ಷಿತವಲ್ಲ ಎಂಬುದು ಸಹ ಈಗ ಖಾತ್ರಿಯಾಗಿದೆ.
ನಮ್ಮೆಲ್ಲಾ ರಹಸ್ಯ ದಾಖಲೆಗಳನ್ನು ಆನ್ಲೈನ್ನಲ್ಲೇ ಸಂಗ್ರಹಿಸುವ ಈ ಇಂಟರ್ನೆಟ್ ಯುಗದಲ್ಲಿ, ಅಂತರ್ಜಾಲ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್ ಎನ್ನಲಾಗಿದ್ದು, ಸೆಕ್ಯೂರಿಟಿ ರೀಸರ್ಚರ್ ಟ್ರಾಯ್ ಹಂಟ್ ಅವರು ತಮ್ಮ "Have I Been Pwned" ವೆಬ್ಸೈಟ್ನಲ್ಲಿ ಈ ಎಲ್ಲಾ ಡೇಟಾವನ್ನು ಫೀಡ್ ಮಾಡಿದ್ದಾರೆ. ಯಾರಿಗಾದರೂ ಅವರ ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ಲೀಕ್ ಆಗಿದೆ ಎಂದನಿಸಿದರೆ ಈ ವೆಬ್ಸೈಟ್ನಲ್ಲಿ ಹೋಗಿ ಪರೀಕ್ಷಿಸಬಹುದು ಎಂದು ಹಂಟ್ ಹೇಳಿದ್ದಾರೆ.
ಬಹುತೇಕ ವೆಬ್ಸೈಟ್ಗಳು ಲಾಗಿನ್ ಹಾಗೂ ಪಾಸ್ವರ್ಡ್ಗಳನ್ನು ಯಥಾವತ್ತಾಗಿ ಸಂಗ್ರಹಿಸುವುದಿಲ್ಲ. ಸಂಕೀರ್ಣ ನಂಬರ್ಗಳಿರುವ ಹ್ಯಾಷ್ ರೂಪದಲ್ಲಿ ಪಾಸ್ವರ್ಡ್ ಸಂಗ್ರಹವಾಗುತ್ತದೆ. ಈ ಹ್ಯಾಷ್ಗಳು ನಮ್ಮ ಪಾಸ್ವರ್ಡ್ಗೆ ಕವಚದಂತೆ ಕಾರ್ಯನಿರ್ವಹಿಸುತ್ತವೆ. ಹ್ಯಾಕರ್ಗಳು ಇದೇ ಹ್ಯಾಷ್ಗಳನ್ನ ಕ್ರ್ಯಾಕ್ ಮಾಡಿ ಪಾಸ್ವರ್ಡ್ಗಳನ್ನ ಕ್ರಿಮಿನಲ್ಗಳು ಹೆಕ್ಕಿದ್ದಾರೆ ಎಂದು ಈ ಶಾಕಿಂಗ್ ರಿಪೋರ್ಟ್ ಬಗ್ಗೆ ಟೆಕ್ ತಜ್ಞರು ಹೇಳಿರುವುದು ವರದಿಯಾಗಿದೆ.
ಹ್ಯಾಕರ್ಗಳು ಹೆಕ್ಕಿರುವ ಮೊದಲ ಪಟ್ಟಿಯಲ್ಲಿ 12 ಸಾವಿರ ಫೈಲ್ಗಳಲ್ಲಿ ಇಮೇಲ್, ಪಾಸ್ವರ್ಡ್ಗಳಿರುವ 87 ಜಿಬಿಯಷ್ಟು ಗಾತ್ರದ ಡೇಟಾವನ್ನು ಸಂಗ್ರಹಿಸಲಾಗಿತ್ತು. ನೀವು ಹಂಟ್ ಅವರ ವೆಬ್ಸೈಟ್ಗೆ ಹೋಗಿ ಪರೀಕ್ಷಿಸಲು ಅನುಮಾನವಿದ್ದರೆ ಕೂಡಲೇ ನಿಮ್ಮ ಇಮೇಲ್ಗಳ ಪಾಸ್ವರ್ಡ್ಗಳನ್ನ ಬದಲಿಸುವುದು ಕ್ಷೇಮವಾಗಿದ್ದು, ಇಂಟರ್ನೆಟ್ನಲ್ಲಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಇನ್ನಷ್ಟು ಬಲಯುತಗೊಳಿಸುವ ಅವಶ್ಯಕತೆಯತ್ತ ಗಮನ ಹರಿಸಲು ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090