ಗೂಗಲ್‌ ಪ್ಲೇ ಸ್ಟೋರ್‌ಗೆ ಸೆಡ್ಡು ಹೊಡೆಯಲು ಪೇಟಿಎಂ ಮಿನಿ ಆಪ್‌ ಸ್ಟೋರ್‌ ಲಾಂಚ್‌!

|

ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿರುವ ಪೇಟಿಎಂ ಮಿನಿ ಆಪ್ ಸ್ಟೋರ್ ಅನ್ನು ಲಾಂಚ್‌ ಮಾಡಿದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಕೆಲವಾರಗಳಿಂದ ಗೇಟ್‌ಪಾಸ್‌ ಪಡೆದು ಮತ್ತೆ ಪ್ಲೇ ಸ್ಟೋರ್‌ಗೆ ಮರಳಿದ್ದ ಪೇಟಿಎಂ ಇದೀಗ ಗೂಗಲ್‌ ಪ್ಲೇ ಸ್ಟೋರ್‌ಗೆ ಪರ್ಯಾಯ ಎನಿಸುವ ಆಪ್‌ ಸ್ಟೋರ್‌ ಪರಿಚಯಿಸಿದೆ. ಇತ್ತೀಚಿಗಷ್ಟೇ ಗೂಗಲ್‌ಗೆ ಪರ್ಯಾಯವಾಗಿ ಭಾರತದಲ್ಲಿ ಒಂದು ರಾಷ್ಟ್ರೀಯ ಆಪ್‌ ಪರಿಚಯಿಸಬೇಕು ಎಂದು ಟೆಕ್‌ ಉದ್ಯಮಿಗಳು ಸರ್ಕಾರಿ ಮನವಿ ಮಾಡಿದ ಸಂದರ್ಭದಲ್ಲಿಯೇ ಈ ಸ್ಟೋರ್‌ ಲಾಂಚ್‌ ಆಗಿರುವುದು ವಿಶೇಷ ಎನಿಸಿದೆ.

ಪೇಟಿಎಂ

ಹೌದು, ಪೇಟಿಎಂ ತನ್ನದೇ ಆದ ಮಿನಿ ಆಪ್‌ ಸ್ಟೋರ್‌ ಒಂದನ್ನ ಬಿಡುಗಡೆ ಮಾಡಿದೆ. ಆದರೆ ಇದು ಗೂಗಲ್‌ ಪ್ಲೇ ಸ್ಟೋರ್‌ಗಿಂತ ಸ್ವಲ್ಪ ವಿಭಿನ್ನವಾಗಿದೆ. ಇದು ಲೋಕಲ್‌ ಅಪ್ಲಿಕೇಶನ್‌ಗಳು ಮತ್ತು ಡೆವಲಪರ್ ಟೂಲ್ಸ್‌ಗಳನ್ನು ನೀಡುವ ಬದಲು, Paytm progressive ವೆಬ್ ಅಪ್ಲಿಕೇಶನ್‌ಗಳಿಗೆ (PWAs) ಲಿಂಕ್‌ಗಳನ್ನು ಹೋಸ್ಟ್ ಮಾಡುತ್ತಿದೆ. ಇವು ಯಾವುದೇ ಇನ್‌ಸ್ಟಾಲ್‌ ಅಗತ್ಯವಿಲ್ಲದೇ ವೆಬ್ ಬ್ರೌಸರ್‌ನಲ್ಲಿ ಕಾರ್ಯನಿರ್ವಹಿಸಬಲ್ಲ ಲೈಟ್‌ ಅಪ್ಲಿಕೇಶನ್‌ಗಳಾಗಿವೆ. ಸದ್ಯ ಈಗಿನಂತೆ, ಮಿನಿ ಆಪ್ ಸ್ಟೋರ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ, ಆದರೂ ಮುಂದಿನ ದಿನಗಳಲ್ಲಿ 300 ಕ್ಕೂ ಹೆಚ್ಚು ಆಪ್‌ ಸೇವೆಗಳನ್ನು ಪಟ್ಟಿ ಮಾಡಲು Paytm ಯೋಜಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಪೇಟಿಎಂ ಮಿನಿ ಆಪ್‌ ಸ್ಟೋರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಪೇಟಿಎಂ

ಪೇಟಿಎಂ ತಿಳಿಸಿರುವ ಮಾಹಿತಿ ಪ್ರಕಾರ, HTML ಮತ್ತು ಜಾವಾಸ್ಕ್ರಿಪ್ಟ್ ಬಳಸಿ ಕಡಿಮೆ-ವೆಚ್ಚದ ಮತ್ತು ಸುಲಭವಾಗಿ ನಿರ್ಮಿಸಬಹುದಾದ ಅಪ್ಲಿಕೇಶನ್‌ಗಳನ್ನು ಹೊಂದಿಸಲು ಭಾರತದ ಸ್ಮಾಲ್‌ ಡೆವಲಪರ್‌ಗಳು ಮತ್ತು ವ್ಯವಹಾರಗಳಿಗೆ ಸಹಾಯ ಮಾಡಲು ಮಿನಿ ಆಪ್ ಸ್ಟೋರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್‌ಗಳು Paytm ಅಪ್ಲಿಕೇಶನ್‌ನೊಳಗಿನ ವಿಂಡೋದೊಳಗೆ ತೆರೆದುಕೊಳ್ಳುತ್ತವೆ, ಮತ್ತು ಇವುಗಳು ಉಚಿತವಾಗಿರುತ್ತದೆ ಎಂದು Paytm ಹೇಳಿದೆ.

ಅಲ್ಲದೆ Paytm ಡೆವಲಪರ್‌ಗಳಿಗೆ Paytm Wallet, Paytm Payments Bank, ಮತ್ತು UPI ಸೇರಿದಂತೆ ಉಚಿತ ಪಾವತಿ ಮಾರ್ಗಗಳನ್ನು ಒದಗಿಸುತ್ತದೆ.

ಪೇಟಿಎಂ

ಇದಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಪಾವತಿಗಳಿಗೆ 2% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಡೆವಲಪರ್‌ಗಳಿಗಾಗಿ, ಬಳಕೆದಾರರೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಪೇಟಿಎಂ ವಿಶ್ಲೇಷಣೆ, ಪಾವತಿ ಸಂಗ್ರಹ ಮತ್ತು ವಿವಿಧ ಮಾರ್ಕೆಟಿಂಗ್ ಪರಿಕರಗಳಿಗಾಗಿ ಡ್ಯಾಶ್‌ಬೋರ್ಡ್ ಅನ್ನು ಸಹ ಒದಗಿಸಿದೆ. ಸದ್ಯ ಪೇಟಿಎಂ ಮಿನಿ ಆಪ್ ಸ್ಟೋರ್ ಇದೀಗ ಬೀಟಾ ಪರೀಕ್ಷೆಯ ಹಂತದಲ್ಲಿದೆ. ಇದು ಈಗಾಗಲೇ ಎಕ್ಯೂಐ ಮಾನಿಟರ್, ಇಎಂಐ ಕ್ಯಾಲ್ಕುಲೇಟರ್, ಮೊಜೊಪಿಜ್ಜಾ, ಜಾತಕ, ಸ್ಪೀಡ್‌ಟೆಸ್ಟ್ ಮತ್ತು ಯುನಿಟ್ ಪರಿವರ್ತಕಗಳಂತಹ ಕೆಲವು ಅಪ್ಲಿಕೇಶನ್‌ಗಳನ್ನು ಹೊಂದಿದೆ.

ಪೇಟಿಎಂ

ಅಲ್ಲದೆ ಡೆಕಾಥ್ಲಾನ್, ಡೊಮಿನೊಸ್ ಪಿಜ್ಜಾ, ಫ್ರೆಶ್‌ಮೆನು, ನೆಟ್‌ಮೆಡ್ಸ್, ನೋಬ್ರೊಕರ್, ಓಲಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 300 ಕ್ಕೂ ಹೆಚ್ಚು ಅಪ್ಲಿಕೇಶನ್ ಆಧಾರಿತ ಸೇವಾ ಪೂರೈಕೆದಾರರು ಈಗಾಗಲೇ ಕಾರ್ಯಕ್ರಮಕ್ಕೆ ಸೇರಿದ್ದಾರೆ ಎಂದು ಪೇಟಿಎಂ ಹೇಳಿದೆ. ಈ ಅಪ್ಲಿಕೇಶನ್‌ಗಳು ಶೀಘ್ರದಲ್ಲೇ ಮಿನಿ ಆಪ್ ಸ್ಟೋರ್‌ಗೆ ಪ್ರವೇಶಿಸುವ ನಿರೀಕ್ಷೆಯಿದೆ. ನೀವು ಮಿನಿ ಆಪ್ ಸ್ಟೋರ್ ಪ್ರವೇಶಿಸಲು, ನಿಮ್ಮ Paytm ಅಪ್ಲಿಕೇಶನ್ ತೆರೆಯಿರಿ. ಮುಖಪುಟದಲ್ಲಿ, ಪಾಪ್-ಅಪ್ ಮೆನುವಿನಿಂದ ಇನ್ನಷ್ಟು ತೋರಿಸು> ಮಿನಿ ಆಪ್ ಸ್ಟೋರ್ ಕ್ಲಿಕ್ ಮಾಡಿ. ಯಾವುದೇ ಹೆಚ್ಚುವರಿ ಡೌನ್‌ಲೋಡ್‌ಗಳು ಅಥವಾ ಇನ್‌ಸ್ಟಾಲ್‌ ಮಾಡದೆ, ಅಪ್ಲಿಕೇಶನ್‌ಗಳ ಮೂಲಕ ಅನ್ವೇಷಿಸಲು, ಬಳಸಲು ಮತ್ತು ಪಾವತಿಗಳನ್ನು ಮಾಡಲು ಬಳಕೆದಾರರಿಗೆ ನೇರ ಪ್ರವೇಶವನ್ನು ಪೋರ್ಟಲ್ ಅನುಮತಿಸುತ್ತದೆ.

Most Read Articles
Best Mobiles in India

Read more about:
English summary
Paytm Mini App Store has been launched within the digital payments app, the company announced on Monday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X