ಪೇಟಿಎಂನಿಂದ ಟ್ರಾನ್ಸಿಟ್ ಕಾರ್ಡ್ ಬಿಡುಗಡೆ? ಒಂದು ಕಾರ್ಡ್‌ ಹಲವು ಉಪಯೋಗಗಳು!

|

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಪೇಟಿಎಂ ಗ್ರಾಹಕರ ಅನುಕೂಲಕ್ಕಾಗಿ ಹಲವು ಸೇವೆಗಳನ್ನು ಪರಿಚಯಿಸಿದೆ. ಈಗಾಗಲೇ ಹಲವು ಮಾದರಿಯ ಸೇವೆಗಳನ್ನು ಪರಿಚಯಿಸಿರುವ ಪೇಟಿಎಂ ಇದೀಗ ಹೊಸದಾಗಿ ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ ಅನ್ನು ಪ್ರಾರಂಭಿಸಿದೆ. ಇದು ಆನ್‌ಲೈನ್ ಶಾಪಿಂಗ್ ಮತ್ತು ಆಫ್‌ಲೈನ್ ಸ್ಟೋರ್ ಖರೀದಿಗಳಿಗೆ ಪಾವತಿ ಮಾಡಲು ಸಹಾಯಕವಾಗಲಿದೆ. ಜೊತೆಗೆ ಎಲ್ಲಾ ಮೆಟ್ರೋ, ಬಸ್ ಮತ್ತು ರೈಲು ಪ್ರಯಾಣ, ಪಾರ್ಕಿಂಗ್ ಶುಲ್ಕ ಪಾವತಿ ಮಾಡುವುದಕ್ಕೆ ಈ ಕಾರ್ಡ್‌ ಬಳಕೆ ಮಾಡಬಹುದಾಗಿದೆ.

ಪೇಟಿಎಂ

ಹೌದು, ಪೇಟಿಎಂ ಭಾರತದಲ್ಲಿ ಒಂದು ರಾಷ್ಟ್ರ, ಒಂದು ಕಾರ್ಡ್ ವ್ಯವಸ್ಥೆ ಅಭಿಯಾನ ಉತ್ತೇಜಿಸುವುದಕ್ಕೆ ಮುಂದಾಗಿದೆ. ಡಿಜಿಟಲ್‌ ಭಾರತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಹಾಕಿದೆ. ಇದೇ ಕಾರಣಕ್ಕೆ ಪೇಟಿಎಂ ಟ್ರಾನ್ಸಿಟ್‌ ಕಾರ್ಡ್ ಲಾಂಚ್‌ ಮಾಡಿದೆ. ಈ ಕಾರ್ಡ್‌ ಮೂಲಕ ಎಟಿಎಂಗಳಿಂದ ಹಣವನ್ನು ಡ್ರಾ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಅಂದರೆ Paytm ಟ್ರಾನ್ಸಿಟ್ ಕಾರ್ಡ್ ಮೂಲಕ ಹಲವು ಕಾರ್ಯಗಳನ್ನು ಮಾಡಬಹುದಾಗಿದೆ. ಹಾಗಾದ್ರೆ ಪೇಟಿಎಂ ಟ್ರಾನ್ಸಿಟ್‌ಕಾರ್ಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೇಟಿಎಂ

ಪೇಟಿಎಂ ಒಂದು ರಾಷ್ಟ್ರ, ಒಂದು ಕಾರ್ಡ್‌ ವ್ಯವಸ್ಥೆಯನ್ನು ಬೆಂಬಲಿಸುವ ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ ಅನ್ನು ಪರಿಚಯಿಸಿದೆ. ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ ಬಹುತೇಕ ಎಲ್ಲಾ ವಹಿವಾಟುಗಳಿಗೂ ಅನ್ವಯವಾಗಲಿದೆ. ಅಂದರೆ ಮೆಟ್ರೋ,ಬಸ್‌, ರೈಲು ಎಲ್ಲಾ ಸೇವೆಗಳಿಗೂ ಈ ಕಾರ್ಡ್‌ ಅನ್ನು ಬಳಸಬಹುದಾಗಿದೆ. ಇನ್ನು ಈ ಕಾರ್ಡ್‌ ಅನ್ನು ರೀಚಾರ್ಜ್ ಮಾಡುವ ಮತ್ತು ಟ್ರ್ಯಾಕ್ ಮಾಡುವ ಪ್ರಕ್ರಿಯೆಯನ್ನು Paytm ಅಪ್ಲಿಕೇಶನ್‌ನಲ್ಲಿಯೇ ಆನ್‌ಲೈನ್‌ನಲ್ಲಿ ಮಾಡಬಹುದು. ಪೇಟಿಎಂನ ಈ ಟ್ರಾನ್ಸಿಟ್‌ ಕಾರ್ಡ್ ಅನ್ನು ಬಳಕೆದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಅಥವಾ ಗೊತ್ತುಪಡಿಸಿದ ಮಾರಾಟ ಕೇಂದ್ರಗಳಲ್ಲಿ ಖರೀದಿಸಬಹುದು ಎಂದು ಹೇಳಲಾಗಿದೆ.

Paytm

ಇನ್ನು ಪ್ರಿಪೇಯ್ಡ್ ಕಾರ್ಡ್ ನೇರವಾಗಿ Paytm ವಾಲೆಟ್‌ಗೆ ಲಿಂಕ್ ಆಗಿದೆ. ಅಲ್ಲಿ ಬಳಕೆದಾರರು ಟ್ರಾನ್ಸಿಟ್ ಕಾರ್ಡ್ ಅನ್ನು ಬಳಸಲು ವ್ಯಾಲೆಟ್ ಅನ್ನು ಟಾಪ್-ಅಪ್ ಮಾಡಬಹುದು. ಇದಕ್ಕಾಗಿ ಯಾವುದೇ ಪ್ರತ್ಯೇಕ ಖಾತೆಯನ್ನು ರಚಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಸದ್ಯ ಹೈದರಾಬಾದ್ ಮೆಟ್ರೋ ರೈಲಿನ ಸಹಯೋಗದೊಂದಿಗೆ Paytm ಟ್ರಾನ್ಸಿಟ್ ಕಾರ್ಡ್ ರೋಲ್‌ಔಟ್ ಅನ್ನು ಪ್ರಾರಂಭಿಸಲಾಗುತ್ತಿದೆ. ಹೈದರಾಬಾದ್‌ನಲ್ಲಿರುವ ಪೇಟಿಎಂ ಬಳಕೆದಾರರು ಈಗ ಈ ಟ್ರಾನ್ಸಿಟ್ ಕಾರ್ಡ್ ಅನ್ನು ಖರೀದಿಸಬಹುದಾಗಿದೆ.

ಪೇಟಿಎo

ಸದ್ಯ ಹೈದಾರ್‌ಬಾದ್‌ನಲ್ಲಿ ಲಭ್ಯವಿರುವ ಪೇಟಿಎo ಟ್ರಾನ್ಸಿಟ್‌ ಕಾರ್ಡ್‌ ಅನ್ನು ಪ್ರಯಾಣದ ಸಂದರ್ಭದಲ್ಲಿ ಬಳಸಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲಿ ಸ್ವಯಂಚಾಲಿತ ಶುಲ್ಕ ಸಂಗ್ರಹ (AFC) ಗೇಟ್‌ಗಳಲ್ಲಿ ಪ್ರದರ್ಶಿಸಬಹುದು. ಈ ಸೇವೆಯು ಪ್ರತಿದಿನ ಮೆಟ್ರೋ/ಬಸ್/ರೈಲು ಸೇವೆಗಳನ್ನು ಬಳಸುವ 50 ಲಕ್ಷಕ್ಕೂ ಹೆಚ್ಚು ಸವಾರರಿಗೆ ಸಹಾಯ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. Paytm ಟ್ರಾನ್ಸಿಟ್ ಕಾರ್ಡ್ ಈಗಾಗಲೇ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಮತ್ತು ಅಹಮದಾಬಾದ್ ಮೆಟ್ರೋದಲ್ಲಿ ಲೈವ್ ಆಗಿದೆ. ಅಷ್ಟೇ ಅಲ್ಲ Paytm ಟ್ರಾನ್ಸಿಟ್ ಕಾರ್ಡ್ ಅನ್ನು ದೇಶದ ಮೆಟ್ರೋ ನಿಲ್ದಾಣಗಳಲ್ಲಿ ಬಳಸಬಹುದಾಗಿದೆ.

ಡಿಜಿಟಲ್‌

ಸದ್ಯ ದೇಶದಲ್ಲಿ ಡಿಜಿಟಲ್‌ ಕ್ರಾಂತಿ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ವಲಯದಲ್ಲೂ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗ್ತಿದೆ. ಒಂದು ರಾಷ್ಟ್ರ ಒಂದು ಕಾರ್ಡ್‌ ನಂತಹ ಅಭಿಯಾನ ಜೋರಾಗಿದೆ. ಈ ಅಭಿಯಾನದ ಅಡಿಯಲ್ಲಿ ಪೇಟಿಎಂ ಪರಿಚಯಿಸಿರುವ ಟ್ರಾನ್ಸಿಟ್‌ ಕಾರ್ಡ್‌ ನಿಮಗೆ ಹಲವು ಕಾರ್ಡ್‌ಗಳನ್ನು ಬಳಸುವುದನ್ನು ತಪ್ಪಿಸಲಿದೆ. ಪ್ರತಿಯೋಂದು ಸೇವೆಗೂ ವಿವಿದ ಕಾರ್ಡ್‌ಗಳನ್ನು ಬಳಸುವ ಬದಲು ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ ಒಂದೇ ಪರಿಹಾರವಾಗಲಿದೆ.

Paytm ಟ್ರಾನ್ಸಿಟ್ ಕಾರ್ಡ್‌ನ ವಿಶೇಷತೆ ಏನು?

Paytm ಟ್ರಾನ್ಸಿಟ್ ಕಾರ್ಡ್‌ನ ವಿಶೇಷತೆ ಏನು?

* ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ NCMC ಇಂಟರ್-ಆಪರೇಬಲ್ ಫಿಸಿಕಲ್ ಮೊಬಿಲಿಟಿ ಕಾರ್ಡ್ ಅನ್ನು ನೀಡುತ್ತದೆ.
* Paytm ವಾಲೆಟ್‌ಗೆ ಲಿಂಕ್ ಮಾಡಲಾದ ಕಾರ್ಡ್ ಅನ್ನು ಬಳಕೆದಾರರ ಎಲ್ಲಾ ವಹಿವಾಟುಗಳಿಗೆ ಬಳಸಬಹುದು.
* ಬಳಕೆದಾರರು ಈ ಕಾರ್ಡ್ ಅನ್ನು ಬಳಸಲು Paytm ವಾಲೆಟ್ ಖಾತೆಯನ್ನು ಟಾಪ್ ಅಪ್ ಮಾಡಬಹುದು.
* ಪೇಟಿಎಂ ಟ್ರಾನ್ಸಿಟ್‌ ಕಾರ್ಡ್‌ ಪಡೆಯಲು ಯಾವುದೇ ಪ್ರತ್ಯೇಕ ಖಾತೆಯನ್ನು ನಿರ್ವಹಿಸುವ ಅಗತ್ಯವಿಲ್ಲ.
* ಸದ್ಯ ಈ ಟ್ರಾನ್ಸಿಟ್‌ ಕಾರ್ಡ್‌ ಅನ್ನು ಮೊದಲ ಹಂತದಲ್ಲಿ ಹೈದರಾಬಾದ್ ಮೆಟ್ರೋ ರೈಲು, ಅಹಮದಾಬಾದ್ ಮೆಟ್ರೋ ಮತ್ತು ದೆಹಲಿ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ.

ಪೇಟಿಎಂ

ಇನ್ನು ಇದೇ ವಿಚಾರವಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸತೀಶ್ ಗುಪ್ತಾ ಮಾತನಾಡಿದ್ದು, "ಪೇಟಿಎಂ ಟ್ರಾನ್ಸಿಟ್ ಕಾರ್ಡ್‌ನ ಬಿಡುಗಡೆಯು ಲಕ್ಷಾಂತರ ಭಾರತೀಯರಿಗೆ ಒಂದೇ ಕಾರ್ಡ್‌ನ ಶಕ್ತಿಯೊಂದಿಗೆ ಎಲ್ಲಾ ಸಾರಿಗೆ ಮತ್ತು ಬ್ಯಾಂಕಿಂಗ್ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಇದು ಆರ್ಥಿಕ ಸೇರ್ಪಡೆ ಮತ್ತು ಎಲ್ಲರಿಗೂ ಪ್ರವೇಶಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಇನ್ನು Paytm ಟ್ರಾನ್ಸಿಟ್ ಕಾರ್ಡ್ ಪೇಟಿಎಂ ಪರಿಚಯಿಸಿರುವ PPBL FASTags ನಂತರ ಸಮೂಹ ಸಾರಿಗೆ ವಿಭಾಗದಲ್ಲಿ ಪರಿಚಯಿಸಿರುವ ಎರಡನೇ ಪ್ರಾಡಕ್ಟ್‌ ಆಗಿದೆ.

ಪೇಟಿಎಂ

ಈಗಾಗಲೇ ಪೇಟಿಎಂ ಅಪ್ಲಿಕೇಶನ್‌ ಅನ್ನು ಹಲವು ಸೇವೆಗಳಿಗೆ ಬಳಸಲಾಗುತ್ತಿದೆ. ಪೇಟಿಎಂ ಮೂಲಕ ಬಳಕೆದಾರರು ಮೊಬೈಲ್‌ ರೀಚಾರ್ಜ್‌, ವಾಟರ್‌ ಬಿಲ್, ವಿದ್ಯುತ್ ಬಿಲ್, ಇನ್ಶುರೆನ್ಸ ಪ್ರೀಮಿಯಂ, ಡಿಟಿಎಚ್‌ ರೀಚಾರ್ಜ್‌ ಸೇರಿದಂತೆ ಹಲವು ಪಾವತಿಗಳನ್ನು ಸಹ ಮಾಡಬಹುದಾಗಿದೆ. ಇನ್ನು ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಯಾವಾಗ ಬೇಕಾದರೂ ಮತ್ತು ಎಲ್ಲಿಂದಲಾದರೂ ರೀಚಾರ್ಜ್ ಮಾಡಲು ಪೇಟಿಎಮ್‌ ನಿಮಗೆ ಅವಕಾಶವನ್ನು ನೀಡುತ್ತದೆ.

ಪೇಟಿಎಮ್‌ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಪೇಟಿಎಮ್‌ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಪೇಟಿಎಮ್‌ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ, 'ಮೊಬೈಲ್ ಪ್ರಿಪೇಯ್ಡ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಹೊಸ ಪುಟ ಕಾಣಿಸುತ್ತದೆ, ಇಲ್ಲಿ ನಿಮಗೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಎಂಬ ಎರಡು ಆಯ್ಕೆಗಳಿವೆ.
ಹಂತ 4: "ಪ್ರಿಪೇಯ್ಡ್ 'ಆಯ್ಕೆಯನ್ನು ಆರಿಸಿ.
ಹಂತ 5: ಅದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. (ಅದರ ಪಕ್ಕದಲ್ಲಿರುವ ವಿಳಾಸ ಪುಸ್ತಕ ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಸಂಪರ್ಕ ಪಟ್ಟಿಯಿಂದ ಸಂಖ್ಯೆಯನ್ನು ಆಯ್ಕೆ ಮಾಡಬಹುದು)
ಹಂತ 6: ನೀವು ರೀಚಾರ್ಜ್ ಮಾಡಲು ಬಯಸುವ ಮೊತ್ತವನ್ನು ನೀವು ನೇರವಾಗಿ ನಮೂದಿಸಿ (ನಿಮ್ಮ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಲು ನೀವು 'ಬ್ರೌಸ್ ಪ್ಲ್ಯಾನ್‌ಗಳು' ಕ್ಲಿಕ್ ಮಾಡಬಹುದು)
ಹಂತ 7: ನಂತರ ರೀಚಾರ್ಜ್ ಮಾಡಲು 'Proceed' ಕ್ಲಿಕ್ ಮಾಡಿ.

Most Read Articles
Best Mobiles in India

English summary
Paytm Payments Bank has launched the Paytm Transit Card to make payments for online shopping and offline store purchases.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X