ಬಳಕೆದಾರರಿಗೆ ಲೈಫ್‌ ಇನ್ಸುರೆನ್ಸ್‌ ಪ್ಲ್ಯಾನ್‌ ಪರಿಚಯಿಸಲು ಮುಂದಾದ ಫೋನ್‌ಪೇ !

|

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಫೋನ್‌ಪೇ ಕೂಡ ಒಂದಾಗಿದೆ. ಈಗಾಗಲೇ ಹಲವು ಸೇವೆಗಳನ್ನ ಪರಿಚಯಿಸಿರುವ ಫೋನ್‌ಪೇ ಇದೀಗ ತನ್ನ ಗ್ರಾಹಕರಿಗೆ ಟರ್ಮ್‌ ಲೈಫ್‌ ಇನ್ಸುರೆನ್ಸ್‌ ಪ್ಲ್ಯಾನ್‌ ಅನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ. ICICI ಪ್ರುಡೆನ್ಶಿಯಲ್ ಲೈಫ್ ಇನ್ಸುರೆನ್ಸ್‌ ಸಹಯೋಗದೊಂದಿಗೆ ಲೈಫ್ ಇನ್ಶುರೆನ್ಸ್ ಯೋಜನೆ ಪ್ರಾರಂಭಿಸುವದಕ್ಕೆ ಪ್ಲ್ಯಾನ್‌ ರೂಪಿಸಿದೆ. ಇನ್ನು ಫೋನ್‌ಪೆ ವಾರ್ಷಿಕ 149 ರೂ.ಗಿಂತ ಕಡಿಮೆ ಬೆಲೆಯ ಪ್ರೀಮಿಯಂ ಪ್ಲ್ಯಾನ್‌ಗಳನ್ನು ನೀಡುವುದಾಗಿ ಹೇಳಿದೆ.

ಫೋನ್‌ಪೇ

ಹೌದು, ಯುಪಿಐ ಪಾವತಿ ಅಪ್ಲಿಕೇಶನ್‌ ಫೋನ್‌ಪೇ ತನ್ನ ಗ್ರಾಹಕರಿಗೆ ಟರ್ಮ್‌ಲೈಪ್‌ ಇನ್ಸುರೆನ್ಸ್‌ ಅನ್ನು ಪರಿಚಯಿಸುತ್ತಿದೆ. ಯಾವುದೇ ಆರೋಗ್ಯ ತಪಾಸಣೆ ಮತ್ತು ದಾಖಲೆಗಳಿಲ್ಲದೆ ವಿಮಾ ಪಾಲಿಸಿಯನ್ನು ಆಪ್ ಮೂಲಕ ತ್ವರಿತವಾಗಿ ಪಡೆಯಬಹುದು ಎಂದು ಫೋನ್‌ಪೇ ಹೇಳಿದೆ. ಇನ್ನುಳಿದಂತೆ ಈ ಇನ್ಸುರೆನ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ

ಫೋನ್‌ಪೇ ಭಾರತದಲ್ಲಿ ಇನ್ಸುರೆನ್ಸ್‌ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಗಮನಿಸಿದೆ. ಇದೇ ಕಾರಣಕ್ಕೆ ತಾನು ಕೂಡ ಹೊಸ ಮಾದರಿಯ ವಿಮಾ ಪಾಲಿಸಿ ಪರಿಚಯಿಸಲು ಮುಂದಾಗಿದೆ. ಅದರಲ್ಲೂ ಹೆಚ್ಚಿನ ಜನರಲ್ಲಿ ಮುಖ್ಯವಾಗಿ ಅರಿವಿನ ಕೊರತೆ ಮತ್ತು ಗೊಂದಲಮಯ ಕಾಗದಪತ್ರಗಳು ಸಮಸ್ಯೆ ಇದೆ. ಇದನ್ನು ಕಡಿಮೆ ಮಾಡುವುದಕ್ಕೆ ಫೋನ್‌ಪೆ ಮುಂದಾಗಿದೆ. 18 ರಿಂದ 50 ವರ್ಷ ವಯಸ್ಸಿನ ಫೋನ್‌ಪೇ ಬಳಕೆದಾರರು ಮತ್ತು ವರ್ಷಕ್ಕೆ 1 ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವವರು ಈ ನೀತಿಯನ್ನು ಪ್ಲ್ಯಾಟ್‌ಫಾರ್ಮ್‌ನಲ್ಲಿ ತಕ್ಷಣ ಪಡೆಯಬಹುದು ಎನ್ನಲಾಗಿದೆ.

ಪ್ರೀಮಿಯಂ

ಇದಲ್ಲದೆ, ಸಾಮಾನ್ಯ ಆರೋಗ್ಯ ತಪಾಸಣೆಯ ತೊಂದರೆಯಿಲ್ಲದೆ, ಮತ್ತು ಶೂನ್ಯ ಕಾಗದಪತ್ರಗಳೊಂದಿಗೆ, ಈ ನೀತಿಯು ಬಳಕೆದಾರರಿಗೆ ಪ್ರೀಮಿಯಂ ಮೊತ್ತವನ್ನು ಅವಲಂಬಿಸಿ 1 ಲಕ್ಷದಿಂದ 20 ಲಕ್ಷ ರೂ.ತನಕ ಲಭ್ಯವಾಗಲಿದೆ. ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಅವಧಿ ಮುಗಿದ ನಂತರ ಇತರ ವಿಮಾ ಯೋಜನೆಗಳನ್ನು ಸಹ ನವೀಕರಿಸಬಹುದಾಗಿದೆ. ಇನ್ನು ಟರ್ಮ್ ಲೈಫ್ ಇನ್ಶುರೆನ್ಸ್ ಯೋಜನೆಗಳ ಪ್ರಾರಂಭದ ಕುರಿತು ಮಾತನಾಡಿದ ಫೋನ್‌ಪೆಯ ವಿಮಾ ಮುಖ್ಯಸ್ಥ ಗುಂಜನ್ ಘಾಯ್, "ಒಂದು ಉತ್ಪನ್ನವಾಗಿ ವಿಮೆ ಭಾರತದಲ್ಲಿ ವಿಶೇಷವಾಗಿ ಭೌಗೋಳಿಕತೆ, ವಯಸ್ಸು ಮತ್ತು ಆದಾಯ ಗುಂಪುಗಳಲ್ಲಿ ಹೆಚ್ಚು ಅಗತ್ಯವಿಲ್ಲದಿರುವಂತೆ ಉಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ಮತ್ತು ನಮ್ಮ ಬಳಕೆದಾರರ ನೆಲೆಯನ್ನು ವಿಶೇಷವಾಗಿ ವಿಶಿಷ್ಟ ಉತ್ಪನ್ನದೊಂದಿಗೆ ಸಹಾಯ ಮಾಡಲು ಐಸಿಐಸಿಐ ಪ್ರುಡೆನ್ಶಿಯಲ್ ಜೊತೆ ಪಾಲುದಾರರಾಗಲು ಫೋನ್‌ಪೆಯಲ್ಲಿ ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಫೋನ್‌ಪೇ

ಫೋನ್‌ಪೇ ಬಳಕೆದಾರರು ತಮ್ಮ ಅವಧಿಯ ಜೀವ ವಿಮೆಯನ್ನು ಕೆಲವು ಸರಳ ಹಂತಗಳಲ್ಲಿ ಪಡೆಯಬಹುದು. ಅಪ್ಲಿಕೇಶನ್‌ನ 'My Money' ವಿಭಾಗದಲ್ಲಿ (ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ) ಬಳಕೆದಾರರು 'ವಿಮೆ' ವಿಭಾಗಕ್ಕೆ ಭೇಟಿ ನೀಡಿ 'ಟರ್ಮ್ ಲೈಫ್ ಇನ್ಶುರೆನ್ಸ್' ಆಯ್ಕೆ ಮಾಡುವ ಮೂಲಕ ಮುಂದುವರಿಯಬಹುದು. ಅವರು ವಿಮೆ ಮಾಡಲು ಬಯಸುವ ಮೊತ್ತವನ್ನು ಆಯ್ಕೆ ಮಾಡಬಹುದು. ಸಾಮಾನ್ಯ ವಿವರಗಳು ಮತ್ತು ಅವರ ನಾಮಿನಿ ಮಾಹಿತಿಯನ್ನು ಒದಗಿಸಿದ ನಂತರ, ಬಳಕೆದಾರರು ಅಪ್ಲಿಕೇಶನ್‌ ಮೂಲಕ ಆನ್‌ಲೈನ್‌ನಲ್ಲಿ ತಕ್ಷಣ ಪಾವತಿಸುವ ಮೂಲಕ ಖರೀದಿಯನ್ನು ಪೂರ್ಣಗೊಳಿಸಬಹುದು ಎನ್ನಲಾಗಿದೆ.

Most Read Articles
Best Mobiles in India

English summary
PhonePe has announced the launch of Term Life Insurance plans on its platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X