ಭಾರತದಲ್ಲಿ ಹೊಸ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪರಿಚಯಿಸಿದ ಫೋನ್‌ಪೇ!

|

ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಪೋನ್‌ಪೇ ಅಪ್ಲಿಕೇಶನ್‌ ಕೂಡ ಸೇರಿದೆ. ಇನ್ನು ಫೋನ್‌ಪೇ ಅಪ್ಲಿಕೇಶನ್‌ ಹಣ ಪಾವತಿ ಮಾಡುವುದಕ್ಕೆ ಮಾತ್ರವಲ್ಲ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಸೇವೆಗಳನ್ನು ಕೂಡ ನೀಡುತ್ತಿದೆ. ಈ ಪೈಕಿ ಆರೋಗ್ಯ ವಿಮಾ ಪ್ಲಾನ್‌ ಕೂಡ ಸೇರಿದೆ. ಸದ್ಯ ಫೋನ್‌ಪೇ ಅಪ್ಲಿಕೇಶನ್‌ ಇದೇ ಮೊದಲ ಬಾರಿಗೆ ಆರೋಗ್ಯ ವಿಮಾ ಖರೀದಿದಾರರಿಗೆ ಹೊಸ ಆರೋಗ್ಯ ವಿಮಾ ಯೋಜನೆಗಳನ್ನು ಪ್ರಾರಂಭಿಸಿದೆ.

ಫೋನ್‌ಪೇ

ಹೌದು, ಫೋನ್‌ಪೇ ಅಪ್ಲಿಕೇಶನ್‌ ಹೆಲ್ತ್‌ ಇನ್ಶುರೆನ್ಸ್‌ ಖರೀದಿ ಮಾಡುವವರಿಗೆ ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಪ್ರಸ್ತುತ ಕೋವಿಡ್‌ ವೈರಸ್‌ನ ಆತಂಕ ಇನ್ನು ಕಡಿಮೆ ಆಗಿಲ್ಲ. ಇಂತಹ ಸನ್ನಿವೇಶದಲ್ಲಿ ಆರೋಗ್ಯ ವಿಮೆ ಸಾಕಷ್ಟು ಉಪಯೋಗಕ್ಕೆ ಬರಲಿದೆ. ಇದೇ ಕಾರಣಕ್ಕೆ PhonePe ಹೊಸ ಮಾದರಿಯ ಆರೋಗ್ಯ ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ಫೋನ್‌ಪೇ ಪರಿಚಯಿಸಿರುವ ಆರೋಗ್ಯ ವಿಮೆಯನ್ನು ಖರೀದಿಸುವವರು ಮೂರು ಸುಲಭ ಹಂತಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಫೋನ್‌ಪೇ ಅಪ್ಲಿಕೇಶನ್‌ ಪರಿಚಯಿಸಿರುವ ಹೊಸ ಆರೋಗ್ಯ ವಿಮಾ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

PhonePe

PhonePe ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆರೋಗ್ಯ ವಿಮಾ ಪಾಲಿಸಿಯನ್ನು ಪರಿಚಯಿಸಿದ ಮೊದಲ ಯುಪಿಐ ಪಾವತಿ ಅಪ್ಲಿಕೇಶನ್ ಎನಿಸಿಕೊಂಡಿದೆ. ಇನ್ನು ಫೋನ್‌ಪೇ ಮೂಲಕ ಹೆಲ್ತ್‌ ಪಾಲಿಸಿ ಪಡೆಯುವವರು ಯಾವುದೇ ಮೆಡಿಕಲ್ ಟೆಸ್ಟ್ಸ್ ನಡೆಸಬೇಕಾದ ಅವಶ್ಯಕತೆಯಿಲ್ಲ. ನೀವು ಆರೋಗ್ಯವಾಗಿದ್ದೀರಿ ಎಂದು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಕೂಡ ಇಲ್ಲ. ಬದಲಿಗೆ ನೀವು ನಿಮ್ಮ ಹೆಸರು, ಲಿಂಗ, ವಯಸ್ಸು ಮತ್ತು ಇಮೇಲ್ ಐಡಿ ಸೇರಿದಂತೆ ಹಲವು ವಿವರಗಳನ್ನು ನಮೂದಿಸುವ ಮೂಲಕ ನೀವು ಪಾಲಿಸಿಯನ್ನು ಸರಳವಾಗಿ ಖರೀದಿಸಬಹುದು.

ಫೋನ್‌ಪೇ

ಇನ್ನು ಫೋನ್‌ಪೇ ನೀಡಿರುವ ಹೆಲ್ತ್‌ಇನ್ಶುರೆನ್ಸ್‌ಪಾಲಿಸಿಯಲ್ಲಿ ಬೇಸ್‌ ಪಾಲಿಸಿಯಾದ ಕೇವಲ 999 ರೂಗಳಿಂದ ಪ್ರಾರಂಭವಾಗಲಿದೆ. ಇದನ್ನು Health@999 ಪ್ಲಾನ್‌ ಎನ್ನಲಾಗಿದ್ದು, ಇದು 1,00,000ರೂ.ಗಳ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯು ಒಳರೋಗಿ ಮತ್ತು ICU ಆಸ್ಪತ್ರೆಗೆ ಸೇರಿಸುವಿಕೆ, ಡೇ ಕೇರ್ ಕಾರ್ಯವಿಧಾನಗಳು, ಆಂಬ್ಯುಲೆನ್ಸ್ ಶುಲ್ಕಗಳು ಮತ್ತು ಆಯುಷ್ ಚಿಕಿತ್ಸೆ ಸೇರಿದಂತೆ ಆಸ್ಪತ್ರೆಯ ವೆಚ್ಚಗಳಿಗೆ ಕವರೇಜ್ ನೀಡುತ್ತದೆ. ಇನ್ನು ಈ ಪ್ಲಾನ್‌ಗಾಗಿ ಕ್ಯಾಶ್‌ಲೆಸ್‌ ಆಸ್ಪತ್ರೆಗಳಲ್ಲಿ ದೇಶದ 7600 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸದ್ಯ Health @999 ಅನ್ನು PhonePe ಮೂಲಕ ತಕ್ಷಣವೇ ಪಡೆಯಬಹುದಾಗಿದ್ದು, ಲೈಪ್‌ಟೈಮ್‌ ಅಪ್ಡೇಟ್‌ ಫೀಚರ್ಸ್‌ ಅನ್ನು ಹೊಂದಿದೆ.

ಫೋನ್‌ಪೇ

ಫೋನ್‌ಪೇ ನೀಡುವ 999ರೂ.ಗಳ ಹೆಲ್ತ್‌ ಪಾಲಿಸಿ 1,00,000ರೂ.ಗಳ ತನಕ ವಿಮೆ ನೀಡಲಿದೆ. ಆದರೆ ನೀವು ಈ ವಿಮಾ ರಕ್ಷಣೆಯ ಮೊತ್ತವನ್ನು ಹೆಚ್ಚಿಸಲು ಬಯಸಿದರೆ 1999ರೂ.ಪ್ಲಾನ್‌ ಆಯ್ಕೆ ಮಾಡಬಹುದಾಗಿದೆ. ಇದು ನಿಮಗೆ 2,00,000ರೂ.ಗಳ ತನಕ ವಿಮೆ ನೀಡಲಿದೆ. ಅಲ್ಲದೆ ನೀವು 3,00,000ರೂ. ತನಕ ವಿಮೆ ಬಯಸಿದರೆ 2,649ರೂ.ವರೆಗೆ ಪಾವತಿಸಬಹುದು. ಇನ್ನು ಈ ಹೊಸ ಆರೋಗ್ಯ ವಿಮಾ ಯೋಜನೆಗಳ ಬಗ್ಗೆ ಫೋನ್‌ಪೇನ ವಿಪಿ ಮತ್ತು ವಿಮಾ ಮುಖ್ಯಸ್ಥ ಗುಂಜನ್ ಘಾಯ್ ಮಾಹಿತಿ ಹಂಚಿಕೊಂಡಿದ್ದು, "ಹೆಲ್ತ್@999 ಅನ್ನು ಮೊದಲ ಬಾರಿಗೆ ವಿಮೆ ಖರೀದಿಸುವವರಿಗೆ ವಿನ್ಯಾಸಗೊಳಿಸಲಾಗಿದೆ, ಇದು ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ವಿಮೆಗೆ ಪ್ರವೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಫೋನ್‌ಪೇ

ಇನ್ನು ಈ ಹೆಲ್ತ್‌ ಪಾಲಿಸಿಯನ್ನು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಸುಲಭವಾಗಿ ಖರೀದಿಸಬಹುದಾಗಿದೆ. ಈ ಕೊಡುಗೆಯಿಂದ 335 ಮಿಲಿಯನ್ PhonePe ಬಳಕೆದಾರರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಪ್ಲಾನ್‌ ಅನ್ನು ಎಲ್ಲಾ ಭಾರತೀಯರು ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ವಿಮೆಯ ಪ್ರವೇಶಕ್ಕೆ ಅರ್ಹರು ಎಂಬ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಫೋನ್‌ಪೇ, ಅತ್ಯುತ್ತಮ ವಿಮಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ತನ್ನ ಆಳವಾದ ಪರಿಣತಿಯನ್ನು ಹೊಂದಿದೆ. ಇದು ಬಳಕೆದಾರರ ಜೀವನದಲ್ಲಿ ಬರುವ ಅನಿರೀಕ್ಷಿತ ಘಟನೆಗಳ ಸಂಧರ್ಭದಲ್ಲಿ ಆರ್ಥಿಕ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

ಫೋನ್‌ಪೇನಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವುದು ಹೇಗೆ?

ಫೋನ್‌ಪೇನಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ PhonePe ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಫೋನ್‌ಪೇ ಹೋಮ್‌ಪೇಜ್‌ನಲ್ಲಿ ಕಾಣುವ ಇನ್ಶುರೆನ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ Health@999 ಯೋಜನೆಯನ್ನು ಟ್ಯಾಪ್ ಮಾಡಿ
ಹಂತ:4 ನಂತರ ನಿಮ್ಮ ವಯಸ್ಸಿನ ಗುಂಪು ಮತ್ತು ನಿಮಗೆ ಅಗತ್ಯವಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆಮಾಡಿ.
ಹಂತ:5 ನೀವು ಕೇಳಿದಾಗ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ಇಮೇಲ್‌ನಂತಹ ನಿಮ್ಮ ಮೂಲ ವಿವರಗಳನ್ನು ಸೇರಿಸಿ
ಹಂತ:6 ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಖರೀದಿ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಪಾಲಿಸಿಯನ್ನು ತಕ್ಷಣವೇ ಪಡೆಯಲು ಪಾವತಿ ಮಾಡಿ.

ಫೋನ್‌ಪೇ

ಇದಲ್ಲದೆ ಫೋನ್‌ಪೇ ಆಪ್‌ ಇತ್ತೀಚಿಗಷ್ಟೇ ಪ್ರೀಪೇಯ್ಡ್‌ ಮೊಬೈಲ್‌ ರೀಚಾರ್ಜ್‌ಗಳ ಮೇಲೆ ಕ್ಯಾಶ್‌ಬ್ಯಾಕ್‌ ಅನ್ನು ಘೋಷಿಸಿದೆ. ಫೋನ್‌ಪೇ ಅಪ್ಲಿಕೇಶನ್ ಮೂಲಕ ಬಳಕೆದಾರರು 51 ರೂ.ಗಿಂತ ಅಧಿಕ ಮೊತ್ತದ ಮೂರು ಪ್ರೀಪೇಯ್ಡ್‌ ಮೊಬೈಲ್‌ ರೀಚಾರ್ಜ್ ಯಶ್ವಸಿಯಾಗಿ ಮಾಡಿದರೇ, ರೀಚಾರ್ಜ್ ನಂತರ ಬಳಕೆದಾರರಿಗೆ ಖಚಿತ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ ಎಂದು ಫೋನ್‌ಪೇ ಕಂಪನಿಯು ಹೇಳಿದೆ. ಹಾಗೆಯೇ 'ಈ ಕೊಡುಗೆ ಪ್ರಸ್ತುತ ಎಲ್ಲಾ ಫೋನ್‌ಪೇ ಬಳಕೆದಾರರಿಗೆ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ, ಎಲ್ಲಾ ಪಾವತಿ ಸಾಧನಗಳಲ್ಲಿ ಅನ್ವಯಿಸುತ್ತದೆ" ಎಂದು ಸಂಸ್ಥೆಯು ತಿಳಿಸಿದೆ. ಇನ್ನು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಈ ಹೊಸ ಆಫರ್‌ ಅನ್ನು ಪಡೆದುಕೊಳ್ಳುವುದಕ್ಕೆ ಮೊದಲಿಗೆ ಬಳಕೆದಾರರು ಫೋನ್‌ಪೇ ಆಪ್ ಅನ್ನು ತೆರೆಯ ಬೇಕು. ಮೊಬೈಲ್ ರೀಚಾರ್ಜ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ / ನಮೂದಿಸಬಹುದು. ಬಳಿಕ ಅಗತ್ಯ ಯೋಜನೆಯನ್ನು ಆಯ್ದು ರೀಚಾರ್ಜ್ ಮಾಡಬೇಕು. ಈ ಮೂಲಕ ನೀವು ಆಯ್ಕೆ ಮಾಡಿದ ಯೋಜನೆಯನ್ನು ರೀಚಾರ್ಜ್‌ ಮಾಡಿಸಿದ ನಂತರ ನಿಮ್ಮ ಖಾತೆಗೆ ಕ್ಯಾಶ್‌ಬ್ಯಾಕ್‌ ಬಂದು ಸೇರಲಿದೆ.

Most Read Articles
Best Mobiles in India

English summary
PhonePe has introduced a new Health@999 plan for first time health insurance buyers. The insurance cover can be bought using three easy steps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X