ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!

|

ಭಾರತ ಸರ್ಕಾರ 5G ತರಂಗಾಂತರ ಹರಾಜನ್ನು ಯಶಸ್ವಿಯಾಗಿ ಮುಗಿಸಿದೆ. ಹರಾಜು ಪ್ರಕ್ರಿಯೆ ಮುಗಿದ ನಂತರ ಭಾರತದಲ್ಲಿ 5G ನೆಟ್‌ವರ್ಕ್‌ ಅಧಿಕೃತವಾಗಿ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಇದರ ನಡುವೆ ಈಗಾಗಲೇ ಏರ್‌ಟೆಲ್‌ ಟೆಲಿಕಾಂ ಇದೇ ಆಗಸ್ಟ್‌ ತಿಂಗಳ ಅಂತ್ಯದಲ್ಲಿ 5G ನೆಟ್‌ವರ್ಕ್‌ ಸೇವೆ ನೀಡುವುದಾಗಿ ಘೋಷಿಸಿದೆ. ಇನ್ನು ಟೆಲಿಕಾಂ ದೈತ್ಯ ಜಿಯೋ ಟೆಲಿಕಾಂ ಕೂಡ ಆಗಸ್ಟ್‌ 15ರಂದು 5G ನೆಟ್‌ವರ್ಕ್‌ ಪ್ರಾರಂಭದ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಆದರೆ ಅಧಿಕೃತವಾಗಿ 5G ನೆಟ್‌ವರ್ಕ್‌ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ.

ನೆಟ್‌ವರ್ಕ್‌

ಹೌದು, ಭಾರತದಲ್ಲಿ 5G ನೆಟ್‌ವರ್ಕ್‌ ಸೇವೆಯನ್ನು ಅಧಿಕೃತವಾಗಿ ಅನಾವರಣಗೊಳಿಸುವುದು ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ. ಇದರ ನಡುವೆ ಹೊಸ ಸುದ್ದಿಯೊಂದು ವರದಿಯಾಗಿದ್ದು, ಅದರಂತೆ ಸೆಪ್ಟೆಂಬರ್ 29 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 5G ನೆಟ್‌ವರ್ಕ್‌ ಅನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. ಈ ಕುರಿತು ದಿ ಬಿಸಿನೆಸ್‌ ಲೈನ್‌ನೊಂದಿಗೆ ಸರ್ಕರದ ಅಧಿಕೃತ ಮೂಲಗಳು ಮಾಹಿತಿ ಹಂಚಿಕೊಂಡಿವೆ ಎನ್ನಲಾಗಿದೆ.

ಭಾರತದಲ್ಲಿ

ಇನ್ನು ಭಾರತದಲ್ಲಿ 5G ನೆಟ್‌ವರ್ಕ್‌ ಅನ್ನು ಆಗಸ್ಟ್ 15 ರಂದು ಭಾರತದ 75 ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಘೋಷಣೆ ಮಾಡಲಿದ್ದಾರೆ ಎನ್ನಿವ ವರದಿ ಕೂಡ ಇದೆ. ಇದಲ್ಲದೆ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಕೂಡ ಅಕ್ಟೋಬರ್ ಟೈಮ್‌ಲೈನ್‌ ಅನ್ನು ಉಲ್ಲೇಖಿಸಿದ್ದಾರೆ. ಕೇಂದ್ರ ಸಚಿವರು ನೀಡಿರುವ ಮಾಹಿತಿ ಪ್ರಕಾರ ಅಕ್ಟೋಬರ್‌ನಲ್ಲಿ ಮೊದಲ ಹಂತದಲ್ಲಿ 5G ನೆಟ್‌ವರ್ಕ್‌ ಅನ್ನು ಪ್ರಾರಂಭಿಸಲಾಗುವುದು ಎನ್ನಲಾಗಿದೆ. ಹಾಗಾದರೆ ಭಾರತದಲ್ಲಿ 5G ನೆಟ್‌ವರ್ಕ್‌ ಅಧಿಕೃತವಾಗಿ ಲಾಂಚ್‌ ಆಗುವುದು ಯಾವಾಗ? ಇದರ ಬಗ್ಗೆ ಲಭ್ಯವಿರುವ ಮಾಹಿತಿ ಏನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ 5G ನೆಟ್‌ವರ್ಕ್ ಬಿಡುಗಡೆ

ಭಾರತದಲ್ಲಿ 5G ನೆಟ್‌ವರ್ಕ್ ಬಿಡುಗಡೆ

ದಿ ಹಿಂದೂ ಬ್ಯುಸಿನೆಸ್‌ಲೈನ್‌ ವರದಿಯ ಪ್ರಕಾರ, ಭಾರತದಲ್ಲಿ 5G ನೆಟ್‌ವರ್ಕ್‌ ಅಧಿಕೃತವಾಗಿ ಬಿಡುಗಡೆಯಾಗುವುದು ಸೆಪ್ಟೆಂಬರ್ ತಿಂಗಳಿನಲ್ಲಿ. ಸೆಪ್ಟೆಂಬರ್‌ 29 ರಂದು ಭಾರತದಲ್ಲಿ ನಡೆಯಲಿರುವ ಇಂಡಿಯನ್‌ ಮೊಬೈಲ್ ಕಾಂಗ್ರೆಸ್ (IMC) 2022 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ 5G ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಲಾಂಚ್‌ ಮಾಡಲಿದ್ದಾರೆ. ಈ ಮೂಲಕ ಭಾರತದಲ್ಲಿ 5G ನೆಟ್‌ವರ್ಕ್‌ ಅಧಿಕೃತವಾಗಿ ಪ್ರಾರಂಭವಾಗಲಿದೆ. ಆದರೆ ಮೊದಲ ಹಂತದಲ್ಲಿ ಇಡೀ ದೇಶದಾದ್ಯಂತ 5G ನೆಟ್‌ವರ್ಕ್‌ ಎಲ್ಲರಿಗೂ ಲಭ್ಯವಾಗುವ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ.

ಮಿನಿಸ್ಟರ್‌

ಆದರೆ ಕೇಂದ್ರದ ಟೆಲಿಕಾಂ ಮಿನಿಸ್ಟರ್‌ ಅಶ್ವಿನಿ ವೈಷ್ಣವ್ ಅವರು ಹೇಳಿರುವಂತೆ ಭಾರತದಲ್ಲಿ ಮೊದಲ ಹಂತದ 5G ಸೇವೆಗಳನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುತ್ತದೆ. ಒಂದು ಅಥವಾ ಎರಡು ವರ್ಷದ ಅವಧಿಯಲ್ಲಿ ಇಡೀ ದೇಶಾದ್ಯಂತ 5G ನೆಟ್‌ವರ್ಕ್‌ ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದ್ದಾರೆ. ಇನ್ನು ಈ ಭಾರಿ ನಡೆದ 5G ತರಂಗಾಂತರದ ಹರಾಜಿನಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದೆ. ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವಿ ಜೊತೆಗೆ, ಹೊಸದಾಗಿ ಟೆಲಿಕಾಂ ವಲಯವನ್ನು ಪ್ರವೇಶಿಸಲು ಮುಂದಾಗಿರುವ ಅದಾನಿ ಡೇಟಾ ನೆಟ್‌ವರ್ಕ್ ಕೂಡ ಈ ಬಾರಿ ಹರಾಜಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಏರ್‌ಟೆಲ್‌

ಇದರ ನಡುವೆ ಏರ್‌ಟೆಲ್‌ ಟೆಲಿಕಾಂ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಭಾರತದಲ್ಲಿ 5G ನೆಟ್‌ವರ್ಕ್‌ ಸೇವೆ ನೀಡುವುದಕ್ಕಾಗಿ ಏರ್‌ಟೆಲ್‌ ಸ್ಯಾಮ್‌ಸಂಗ್‌, ನೋಕಿಯಾ ಮತ್ತು ಎರಿಕ್ಸನ್‌ ಕಂಪೆನಿಗಳೊಂದಿಗೆ ಪಾಲುದಾರಿಕೆಯನ್ನು ಕೂಡ ಮಾಡಿಕೊಂಡಿದೆ. ಇನ್ನು ಜಿಯೋ ಟೆಲಿಕಾಂ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭಿಸುವುದು ಯಾವಾಗ ಎನ್ನುವ ವಿಚಾರವನ್ನು ಆಗಸ್ಟ್‌ 15ರಂದು ಘೋಷಿಸುವುದಾಗಿ ಹೇಲಿದೆ. ಭಾರತ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ನಿರ್ಧಾರ ಘೋಷಿಸುವುದು ನಮಗೆ ಹೆಮ್ಮೆಯ ಸಂಗತಿ ಎಂದು ರಿಲಯನ್ಸ್‌ ಜಿಯೋ ಪ್ರಕಟಿಸಿದೆ.

5G

ಇನ್ನು ಭಾರತದಲ್ಲಿನ 5G ಸೇವೆಗಳು ಇತರೆ ದೇಶಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕವಾಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆಗಳು ಶುರುವಾದ ನಂತರ 5G ಪ್ಯಾಕ್‌ಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಯನ್ನು ನಿರೀಕ್ಷಿಸಬಹುದು. ಇದಲ್ಲದೆ ಭಾರತದಲ್ಲಿ ಮೊದಲ ಹಂತದ 5G ಸೇವೆಗಳು ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಇತರ ನಗರಗಳಲ್ಲಿ ಲಭ್ಯವಾಗಲಿವೆ ಎಂದು ಅಂದಾಜಿಸಲಾಗಿದೆ.

5G ಸೇವೆಯಿಂದ ಏನೆಲ್ಲಾ ಲಾಭವಾಗಲಿದೆ?

5G ಸೇವೆಯಿಂದ ಏನೆಲ್ಲಾ ಲಾಭವಾಗಲಿದೆ?

ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಒಂದು ಹಂತದ ವರದಿಯ ಪ್ರಕಾರ 5G ಸೇವೆ ಲಭ್ಯವಾದರೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ.

ಸ್ಮಾರ್ಟ್

5G ಸೇವೆ ಗ್ರಾಹಕರಿಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA) ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿ ಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ.

Best Mobiles in India

Read more about:
English summary
PM Modi might launch 5G technology in India on this auspicious day

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X