Just In
Don't Miss
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Movies
ಕೋಸ್ಟಲ್ವುಡ್ ನಲ್ಲಿ ಪ್ರಖ್ಯಾತಿ ಗಳಿಸಿದ ನಟಿ ರಾಧಿಕಾ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಭಾರತದ ಅತಿದೊಡ್ಡ ಡ್ರೋನ್ ಫೆಸ್ಟಿವಲ್ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ರೈತ ಡ್ರೋನ್ ಪೈಲಟ್ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್ ಹಾರಾಟವನ್ನೂ ಅವರು ವೀಕ್ಷಿಸಲಿದ್ದಾರೆ.

ಭಾರತ್ ಡ್ರೋನ್ ಮಹೋತ್ಸವ 2022 ಎರಡು ದಿನದ ಕಾರ್ಯಕ್ರಮವಾಗಿದ್ದು, ಮೇ 27 ಮತ್ತು 28 ರಂದು ನಡೆಯಲಿದೆ. ಮೇ 27 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ರೈತ ಡ್ರೋನ್ ಪೈಲಟ್ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ, ಡ್ರೋನ್ ಹಾರಾಟದ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ ಮತ್ತು ಡ್ರೋನ್ ಪ್ರದರ್ಶನ ಕೇಂದ್ರದಲ್ಲಿ ಸ್ಟಾರ್ಟಪ್ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.
ಸರ್ಕಾರಿ ಅಧಿಕಾರಿಗಳು, ವಿದೇಶಿ ಪರಿಣಿತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟಪ್ಗಳು ಸೇರಿದಂತೆ 1600 ನಿಯೋಗಗಳು ಈ ಹಬ್ಬದಲ್ಲಿ ಭಾಗವಹಿಸಲಿವೆ.

70 ಕ್ಕೂ ಹೆಚ್ಚು ಪ್ರದರ್ಶನಕಾರರು ಪ್ರದರ್ಶನದಲ್ಲಿ ವಿವಿಧ ಬಳಕೆಯ ವಿಧಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಡ್ರೋನ್ ಪೈಲಟ್ ಪ್ರಮಾಣಪತ್ರಗಳು, ಉತ್ಪನ್ನ ಬಿಡುಗಡೆಗಳು, ಪ್ಯಾನೆಲ್ ಚರ್ಚೆಗಳು, ಹಾರಾಟ ಪ್ರದರ್ಶನಗಳು, ಭಾರತದಲ್ಲೇ ತಯಾರಿಸಿದ ಡ್ರೋನ್ ಟ್ಯಾಕ್ಸಿ ಪ್ರೊಟೊಟೈಪ್ ಪ್ರದರ್ಶನ ಈ ಮಹೋತ್ಸವದಲ್ಲಿ ಇರಲಿದೆ.
ಮಹೋತ್ಸವವು ಡ್ರೋನ್ ಪೈಲಟ್ ಪ್ರಮಾಣಪತ್ರಗಳು, ಉತ್ಪನ್ನ ಬಿಡುಗಡೆಗಳು, ಪ್ಯಾನೆಲ್ ಚರ್ಚೆಗಳು, ಫ್ಲೈಯಿಂಗ್ ಪ್ರದರ್ಶನಗಳು, ಮೇಡ್ ಇನ್ ಇಂಡಿಯಾ ಡ್ರೋನ್ ಟ್ಯಾಕ್ಸಿ ಮಾದರಿಯ ಪ್ರದರ್ಶನ, ಇತ್ಯಾದಿಗಳ ವರ್ಚುವಲ್ ಪ್ರಶಸ್ತಿಗೆ ಸಾಕ್ಷಿಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999