ಇಂದು ಮತ್ತೆ ಪೊಕೊ M3 ಸ್ಮಾರ್ಟ್‌ಫೋನ್ ಸೇಲ್‌!

|

ಪೊಕೊ ಸಂಸ್ಥೆಯ ಹೊಸ ಪೊಕೊ M3 ಸ್ಮಾರ್ಟ್‌ಫೋನ್ ಇದೇ ಫೆ.9 ರಂದು ಫಸ್ಟ್‌ ಸೇಲ್ ಕಂಡಿದ್ದು, ಒಂದೇ ದಿನದಲ್ಲಿ ದಾಖಲೆಯ ಮಾರಾಟ ಕಂಡಿದೆ. ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಇಂದು (ಫೆ.16) ಮತ್ತೆ ಪೊಕೊ M3 ಸ್ಮಾರ್ಟ್‌ಫೋನ್‌ ಸೇಲ್ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 10,999ರೂ.ಗಳು ಆಗಿದೆ.

ಡ್ಯುಯಲ್

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಪೊಕೊ M3 ಸ್ಮಾರ್ಟ್‌ಫೋನ್ ಇಂದು ಮತ್ತೆ ಮಾರಾಟ ಕಾಣಲಿದೆ. ಈ ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ, ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 6,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 64GB ವೇರಿಯಂಟ್ ಮಾದರಿ ಆಯ್ಕೆಯನ್ನು ಪಡೆದಿದೆ. ಇನ್ನುಳಿದಂತೆ ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಪೊಕೊ M3 ಸ್ಮಾರ್ಟ್‌ಫೋನ್ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ಪೊಕೊ M3 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌

ಕ್ಯಾಮೆರಾ ಸೆಟ್‌ಅಪ್‌

ಪೊಕೊ M3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಪೊಕೊ M3 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಪೊಕೊ M3 ಬೆಲೆ 6GB RAM+ 64GB ಶೇಖರಣಾ ರೂಪಾಂತರಕ್ಕೆ 10,999 ರೂ. ಹಾಗೂ 6GB RAM + 128GB ಶೇಖರಣಾ ಮಾದರಿಯ ಬೆಲೆ 11,999 ರೂ. ಆಗಿದೆ. ಇನ್ನು ಈ ಫೋನ್ ಕೂಲ್ ಬ್ಲೂ, ಪೊಕೊ ಯೆಲ್ಲೊ ಮತ್ತು ಪವರ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ.

Most Read Articles
Best Mobiles in India

English summary
Poco launched Poco M3 in India recently at a starting price of Rs 10,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X