ಪ್ರಮುಖ ಮೂರು ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದ ಪೊಕೊ!

|

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಬಜೆಟ್‌ ದರದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಹೆಸರುವಾಸಿಯಾಗಿರುವ ಪೊಕೊ ಇಂಡಿಯಾ ಮೊಬೈಲ್‌ ಕಂಪನಿಯು ಗ್ರಾಹಕರಿಂದ ಈಗಾಗಲೇ ಸೈ ಅನಿಸಿಕೊಂಡಿದೆ. ಶಿಯೋಮಿಯ ಸಬ್‌ ಬ್ರ್ಯಾಂಡ್‌ ಪೊಕೊ ಸಂಸ್ಥೆಯು ಇದೀಗ ಪ್ರಮುಖ ಮೂರು ಆನ್‌ಲೈನ್‌ ಸ್ಮಾರ್ಟ್‌ಫೋನ್‌ಫೋನ್‌ ಬ್ಯಾಂಡ್‌ಗಳಲ್ಲಿ ಒಂದಾಗಿದೆ ಎಂದು ಕೌಂಟರ್‌ ಪಾಯಿಂಟ್‌ ವರದಿ ಬಹಿರಂಗಪಡಿಸಿದೆ.

ಆನ್‌ಲೈನ್‌

ಹೌದು, ಪೊಕೊ ಕಂಪನಿಯು ಪ್ರಮುಖ ಆನ್‌ಲೈನ್‌ ಸ್ಮಾರ್ಟ್‌ಫೋನ್‌ಫೋನ್‌ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಪ್ರತಿಸ್ಪರ್ಧಿಗಳಾದ ರಿಯಲ್‌ ಮಿ ಮತ್ತು ಒನ್‌ಪ್ಲಸ್‌ಗಳನ್ನು ಬಿಟ್ಟು ಹೋಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಸದ್ಯ ಪೊಕೊ ಬ್ರ್ಯಾಂಡ್‌ ಶಿಯೋಮಿ ಹಾಗೂ ಸ್ಯಾಮಸಂಗ್‌ ಸಂಸ್ಥೆಗಳ ಲಿಸ್ಟ್‌ಗಳ ನಂತರದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೇ ಶಿಯೋಮಿಯಿಂದ ಪೊಕೊ ಮೊಬೈಲ್‌ ಸ್ವತಂತ್ರ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡು ಒಂದು ವರ್ಷ ಕಳೆದಿದೆ.

ನಿರ್ದೇಶಕ

11 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪೊಕೊ ತನ್ನ ಅಭಿಮಾನಿಗಳು ಮತ್ತು ಗ್ರಾಹಕರ ಪ್ರಸ್ತುತ ಖರ್ಚು ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಬೆಲೆ ಪಾಯಿಂಟ್‌ಗಳಲ್ಲಿ ನಾವು ಶಕ್ತಿಯುತ ಮತ್ತು ಉತ್ತಮ ಲೈನ್‌-ಅಪ್‌ವಾದ ಶ್ರೇಣಿಯನ್ನು ಪರಿಚಯಿಸಿದ್ದೇವೆ ಎಂದು ಪೊಕೊ ಇಂಡಿಯಾದ ದೇಶದ ನಿರ್ದೇಶಕ ಅನುಜ್ ಶರ್ಮಾ ಹೇಳಿದ್ದಾರೆ.

ಜೈನ್

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೊಕೊ ವೇಗವನ್ನು ಪಡೆಯುತ್ತಿದೆ. ಈ ಬೆಳವಣಿಗೆಯಲ್ಲಿ ಮುಖ್ಯವಾಗಿ ಕಂಪನಿಯ ಪೊಕೊ C3 ಮತ್ತು ಪೊಕೊ M2 ಸ್ಮಾರ್ಟ್‌ಫೋನ್‌ಗಳು ಗಮನಾರ್ಹ ಪಾತ್ರವಹಿಸಿವೆ. ಎಂದು ಕೌಂಟರ್‌ ಪಾಯಿಂಟ್‌ ಸಂಶೋಧನಾ ವಿಶ್ಲೇಷಕ ಶಿಲ್ಪಿ ಜೈನ್ ಹೇಳಿದ್ದಾರೆ. ಹಾಗೆಯೇ ವರ್ಷದ Q3 -2020 ಮೂರನೇ ತ್ರೈಮಾಸಿಕದಲ್ಲಿ ಆನ್‌ಲೈನ್ ವಿಭಾಗದ ಸಾಗಣೆಗಳಲ್ಲಿ ಪೊಕೊ 4 ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಇದು ನವೆಂಬರ್ 2020 ರಲ್ಲಿ ಅದು 3 ನೇ ಸ್ಥಾನಕ್ಕೆ ಏರಿತು ಎಂದು ಅವರು ಹೇಳಿದರು.

ಪೊಕೊ

ಫೆಬ್ರವರಿ 2020 ರಲ್ಲಿ ಪೊಕೊ ಕಂಪನಿ ಸ್ವತಂತ್ರ ಬ್ರ್ಯಾಂಡ್‌ ಆಗಿ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತು ಅದುವೇ ಪೊಕೊ X2. ಈ ಸ್ಮಾರ್ಟ್‌ಫೋನ್ ಲಾಂಚ್‌ ಆಗಿ ಕೆಲವೇ ತಿಂಗಳುಗಳಲ್ಲಿ 20,000 ರೂ.ಗಿಂತ ಕಡಿಮೆ ಪ್ರೈಸ್‌ಟ್ಯಾಗನಲ್ಲಿ ಖರೀದಿಸಬಹುದಾದ ಉತ್ತಮ ಫೋನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಅದೇ ರೀತಿ ಪೊಕೊ ಈ ವರ್ಷದಲ್ಲಿ 2021ರಲ್ಲಿ ಪೊಕೊ F ಸರಣಿಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ತಯಾರಿಯಲ್ಲಿದೆ ಎನ್ನಲಾಗಿದೆ.

Most Read Articles
Best Mobiles in India

English summary
Becoming an independent entity in January 2020, Poco has achieved the milestone in less than a year of operation.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X