ಬಿಎಸ್ಎನ್ಎಲ್ ಅಬ್ಬರದ ಮುಂದೆ ಮಂಕಾದ ಖಾಸಗಿ ಟೆಲಿಕಾಂಗಳು!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ತಮ್ಮ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿದವು. ಆದರೆ ಅದರ ನೇರ ಲಾಭವು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್‌ಗೆ ಆಗಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂಗಳು ದರ ಹೆಚ್ಚಳವು ಗ್ರಾಹಕರಿಗೆ ಭಾರಿ ಹೊರೆಯಾಗಿದ್ದು, ಈ ನಿಟ್ಟಿನಲ್ಲಿ ಬಹುತೇಕ ಬಳಕೆದಾರರು ಬಿಎಸ್ಎನ್ಎಲ್‌ನತ್ತ ಮುಖ ಮಾಡಿದರು.

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್

ಹೌದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು 40% ನಷ್ಟು ಹೆಚ್ಚಳ ಘೋಷಿಸಿದವು. ಕಡಿಮೆ ಬೆಲೆಗೆ ಡೇಟಾ, ಅನಿಯಮಿತ ಕರೆ ಪ್ರಯೋಜನ ಪಡೆಯುತ್ತಿದ್ದ ಗ್ರಾಹಕರಿಗೆ ಖಾಸಗಿ ಟೆಲಿಕಾಂಗಳ ದರ ಏರಿಕೆ ಅರಗಿಸಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ ಅನೇಕ ಬಳಕೆದಾರರು ಫೋರ್ಟ್‌ ಸೌಲಭ್ಯದ ಮೊರೆ ಹೋದರು, ಇನ್ನು ಹಲವರು ಬಿಎಸ್ಎನ್ಎಲ್ ಟೆಲಿಕಾಂ ಕದ ತಟ್ಟಿದರು. ಇದರ ಪರಿಣಾಮ ಡಿಸೆಂಬರ್-2019ರಲ್ಲಿ ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ಜಿಯೋ ಹಿಂದಿಕ್ಕಿದ ಬಿಎಸ್ಎನ್ಎಲ್

ಜಿಯೋ ಹಿಂದಿಕ್ಕಿದ ಬಿಎಸ್ಎನ್ಎಲ್

ಜಿಯೋ ಟೆಲಿಕಾಂ ಪ್ಲ್ಯಾನ್‌ಗಳ ದರ ಏರಿಕೆ ಮತ್ತು ಜಿಯೋದಿಂದ ಇತರೆ ನೆಟವರ್ಕ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ನಿಗದಿ ಮಾಡಿದ್ದು, ಜಿಯೋಗೆ ಸಂಕಷ್ಟ ತಂದಿತು. ಈ ಕಾರಣದಿಂದ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಕಳೆದ ಡಿಸೆಂಬರ್‌ನಲ್ಲಿ-2019 ಒಟ್ಟು 82,308 ಹೊಸ ಚಂದಾದಾರು ಜಿಯೋ ಸೇರಿದ್ದಾರೆ. ಆದರೆ ಬಿಎಸ್‌ಎನ್ಎಲ್‌ಗೆ ಸೇರಿದ ಹೊಸ ಚಂದಾದಾರರ ಸಂಖ್ಯೆ 427,089 ಆಗಿದೆ. ಇದೇ ಮೊದಲ ಬಾರಿ ಚಂದಾದಾರರ ಸಂಖ್ಯೆಯಲ್ಲಿ ಜಿಯೋವನ್ನು ಬಿಎಸ್ಎನ್ಎಲ್ ಅಹಿಂದಿಕ್ಕಿದೆ.

ಕುಸಿತ ಕಂಡ ವೊಡಾಫೋನ್

ಕುಸಿತ ಕಂಡ ವೊಡಾಫೋನ್

ಖಾಸಗಿ ಟೆಲಿಕಾಂನಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ವೊಡಾಫೋನ್ ಐಡಿಯಾ ಇದೀಗ ಆರ್ಥಿಕ ಸಂಕಷ್ಟದಿಂದ ಭಾರಿ ಕುಸಿತ ಕಂಡಿದೆ. ವೊಡಾಫೋನ್ ಸಹ ಡಿಸೆಂಬರ್2019ರಲ್ಲಿ ಬೆಲೆ ಏರಿಕೆ ಮಾಡಿದ್ದು, ಆದರೆ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಡಿಸೆಂಬರ್‌ನಲ್ಲಿ ವೊಡಾಫೋನ್ ಟೆಲಿಕಾಂ ಒಟ್ಟು 3.6 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ.

ಏಳಿಗೆ ಕಾಣದ ಏರ್‌ಟೆಲ್

ಏಳಿಗೆ ಕಾಣದ ಏರ್‌ಟೆಲ್

ಖಾಸಗಿ ಟೆಲಿಕಾಂ ವಲಯದಲ್ಲಿ ಜಿಯೋ ನೇರ ಫೈಟ್ ನೀಡುವ ಏರ್‌ಟೆಲ್ ಸಹ ಕಳೆದ ಡಿಸೆಂಬರ್‌ನಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಏಳಿಗೆ ಕಂಡಿಲ್ಲ. ಒಟ್ಟು 11,000 ಚಂದಾದಾರರನ್ನು ಏರ್‌ಟೆಲ್ ಕಳೆದುಕೊಂಡಿದೆ. ಡಿಸೆಂಬರ್ 2019ರಲ್ಲಿ ಭಾರ್ತಿ ಏರ್‌ಟೆಲ್ ಸಹ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿತ್ತು. ಚಂದಾದಾರರನ್ನು ಕಳೆದುಕೊಳ್ಳಲು ಇದು ಒಂದು ಮುಖ್ಯ ಕಾರಣವಾಗಿದೆ.

Most Read Articles
Best Mobiles in India

English summary
BSNL has managed to grab 427,089 users in December 2019, beating Jio for the first time and securing a market share of 10.26%.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X