Home
ಸುದ್ದಿಜಾಲ

ಬರಲಿದೆ ಹೊಸ ಚಿಪ್‌ಸೆಟ್! ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಶಕ್ತಿ.. ಅತ್ಯದ್ಭುತ ಕಾರ್ಯಕ್ಷಮತೆ!

ಚಿಪ್‌ಸೆಟ್‌ಗಳು (Chipset) ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಪ್ರೊಸೆಸರ್ (processor) ಅಂತಲೂ ಕರೆಯುತ್ತಾರೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜರುಗುವ ಎಲ್ಲವನ್ನೂ ಕಂಟ್ರೋಲ್‌ ಮಾಡುವ ಘಟಕವಾಗಿದ್ದು, ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಉತ್ತಮ ಪ್ರೊಸೆಸರ್‌ ಆಯ್ಕೆ ಪಡೆಯುವ ಮೂಲಕ ಗ್ರಾಹಕರಿಗೆ ಭಿನ್ನ ಅನುಭವ ನೀಡಿಕೊಂಡು ಬರುತ್ತಿವೆ. ಈ ಬೆಳವಣಿಗೆ ನಡುವೆ ಹೊಸ ಪ್ರೊಸೆಸರ್ ಲಾಂಚ್‌ ಆಗಲಿದೆ.

ಹೌದು, ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳನ್ನು ಇನ್ನಷ್ಟು ಶಕ್ತಿಶಾಲಿ ಡಿವೈಸ್‌ಗಳನ್ನಾಗಿ ಮಾಡುವ ಚಿಪ್‌ಸೆಟ್ ಶೀಘ್ರದಲ್ಲೇ ಲಾಂಚ್‌ ಆಗಲಿದೆ. ಅಂದರೆ ಕ್ವಾಲ್ಕಾಮ್ (Qualcomm) ತನ್ನ ಮುಂದಿನ ಪೀಳಿಗೆಯ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ (Snapdragon 8 Gen 3 chipset) ಅನ್ನು ಪರಿಚಯಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಚಿಪ್‌ಸೆಟ್ ಈ ವರ್ಷದಿಂದ ಹಲವಾರು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ (premium smartphones) ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ. ಹಾಗಿದ್ರೆ, ಇದರ ಬಲ ಎಂತಹುದು?, ಯಾವೆಲ್ಲಾ ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬರಲಿದೆ ಹೊಸ ಚಿಪ್‌ಸೆಟ್! ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಶಕ್ತಿ..

ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌: ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ ಅನ್ನು ಕ್ವಾಲ್ಕಾಮ್ ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಮಾಹಿತಿ ನೀಡಿದೆ. ಅಂದರೆ ಅತಿದೊಡ್ಡ ಚಿಪ್‌ಸೆಟ್ ತಯಾರಿಕಾ ಕಂಪನಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತನ್ನ ಸ್ನಾಪ್‌ಡ್ರಾಗನ್ ಈವೆಂಟ್ 2023 ಈವೆಂಟ್‌ನ ದಿನಾಂಕಗಳನ್ನು ಉಲ್ಲೇಖಿಸಿದೆ. ಈ ಈವೆಂಟ್ ಹವಾಯಿಯ ಮಾಯಿಯಲ್ಲಿ ನಡೆಯಲಿದೆ.

ಕ್ವಾಲ್ಕಾಮ್ ನ 8ನೇ ವಾರ್ಷಿಕ ಸ್ನಾಪ್‌ಡ್ರಾಗನ್ ಈವೆಂಟ್ 25 ಅಕ್ಟೋಬರ್ 2023 ರಂದು ನಡೆಯಲಿದ್ದು, ಅಕ್ಟೋಬರ್ 26 ರವರೆಗೆ 3 ದಿನಗಳ ಕಾಲ ನಡೆಯಲಿದೆ. ಈ ಸಮಾರಂಭದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 SoC ಅನ್ನು ಲಾಂಚ್‌ ಮಾಡಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಲಾಂಚ್ ಆಗುವ ಅದೆಷ್ಟೋ ಫೋನ್‌ಗಳು ಈ ಪ್ರೊಸೆಸರ್‌ ಬಲ ಪಡೆದುಕೊಳ್ಳಲಿವೆ.

ವಿಶೇಷ ಶಕ್ತಿ.. : ಈ ಪ್ರೊಸೆಸರ್‌ ಮುಂದಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಗೆ ಶಕ್ತಿ ತುಂಬುವ ಚಿಪ್‌ಸೆಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಇದು ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದ್ದು, ಇದನ್ನು ಟಿಎಸ್‌ಎಮ್‌ಸಿ ನಿಂದ ತಯಾರಿಸಲ್ಪಟ್ಟ 4nm ಮತ್ತು 3nm ಪ್ರಕ್ರಿಯೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಈ ಚಿಪ್‌ಸೆಟ್ ವೇಗವಾದ LPDDR5T RAM ಅನ್ನು ಸಹ ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ.

ಈ ಹೊಸ ಸ್ನಾಪ್‌ಡ್ರಾಗನ್ 8 ಜನ್‌ 3 ಅನ್ನು ಅಡ್ರಿನೋ 750 GPU ನೊಂದಿಗೆ (Adreno 750 GPU) ಜೋಡಿಸಲಾಗಿದೆ ಮತ್ತು 2+3+3+1 ಕೋರ್ ಕಾನ್ಫಿಗರೇಶನ್ ಅನ್ನು ಹೊಂದಿದ್ದು, ಈ ಕೋರ್‌ಗಳು ಆಪ್ಟಿಮೈಸ್ಡ್ ಎಆರ್‌ಎಮ್‌ ಕೋರ್‌ಗಳಾಗಿವೆ. ಇವು ಸ್ಮಾರ್ಟ್‌ಫೋನ್‌ಗಳಿಗೆ ಸುಧಾರಿತ ಶಕ್ತಿಯ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವೇಳೆ ಈ ಹೊಸ ಚಿಪ್‌ಸೆಟ್ ಅನ್ನು ಬೆಂಬಲಿಸುವ ಕೆಲವು ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಸಹ ಈಗಾಗಲೇ ಸೋರಿಕೆಯಾಗಿದೆ.

ಕೆಲವು ಪ್ರಮುಖ ಮಾಹಿತಿ ಪ್ರಕಾರ ಶಿಯೋಮಿ 14 ಸರಣಿಯ (Xiaomi 14 series) ಸ್ಮಾರ್ಟ್‌ಫೋನ್ ಅನ್ನು ಇದೇ ತಿಂಗಳು ಅಂದರೆ ಅಕ್ಟೋಬರ್ 27 ರಂದು ಲಾಂಚ್‌ ಮಾಡಲಾಗುತ್ತಿದ್ದು, ಈ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನ್‌ 3 ಅನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ. ಈ ಮೂಲಕ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಪಡೆದ ಮೊದಲ ಫೋನ್‌ ಆಗಿ ಹಾಗೂ ಬ್ರ್ಯಾಂಡ್‌ ಆಗಿ ಇದು ಗುರುತಿಸಿಕೊಳ್ಳಲಿದೆ.

ಬರಲಿದೆ ಹೊಸ ಚಿಪ್‌ಸೆಟ್! ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಶಕ್ತಿ..

ಶಿಯೋಮಿ ಹೊರತುಪಡಿಸಿದರೆ, ಒನ್‌ಪ್ಲಸ್ 12, ಐಕ್ಯೂ 12 ಸರಣಿಗಳು, ರಿಯಲ್‌ಮಿ GT 5 ಪ್ರೊ, ಮೀಜು 21 ಸರಣಿ, ನುಬಿಯಾ ರೆಡ್ ಮ್ಯಾಜಿಕ್ 9 ಸರಣಿ, ಹಾನರ್ ಮ್ಯಾಜಿಕ್ 6 ಹಾಗೂ ಒಪ್ಪೋದ ಮುಂದಿನ ಸರಣಿಯ ಫೋನ್‌ಗಳಲ್ಲಿ ಈ ಪ್ರೊಸೆಸರ್‌ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈಗ ಪಡೆಯುವುದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Qualcomm is all set to introduce its next generation Snapdragon 8 Gen 3 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+