Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಬಿಗ್ ಶಾಕ್ ಕೊಟ್ಟ ಆರ್ಬಿಐ!
ಜನಪ್ರಿಯ ಪಾವತಿ ಅಪ್ಲಿಕೇಶನ್ ಪೇಟಿಎಂಗೆ ಆರ್ಬಿಐ ಬಿಗ್ ಶಾಕ್ ನೀಡಿದೆ. ಬ್ಯಾಂಕ್ನಲ್ಲಿ ಕಂಡುಬರುವ "ವಸ್ತುಗಳ ಮೇಲ್ವಿಚಾರಣಾ ಕಾಳಜಿ" ನಡುವೆ ಹೊಸ ಖಾತೆಗಳನ್ನು ತೆರೆಯುವುದನ್ನು ನಿಲ್ಲಿಸುವಂತೆ ಆರ್ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ತಿಳಿಸಿದೆ. ಅಲ್ಲದೆ ತಕ್ಷಣದಿಂದಲೇ ಈ ನಿಯಮವನ್ನು ಪಾಲಿಸುವಂತೆ ಆದೇಶ ಮಾಡಿದೆ. ಇದರಿಂದ ಹೊಸ ಗ್ರಾಹಕರನ್ನು ಆನ್ಬೋರ್ಡೀಂಗ್ ಮಾಡುವುದನ್ನು ಪೇಟಿಎಂ ಈಗಿನಿಂದಲೇ ನಿಲ್ಲಿಸಬೇಕಾಗಿದೆ.

ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಜನಪ್ರಿಯ ಪಾವತಿ ಅಪ್ಲಿಕೇಶನ್ ಪೇಟಿಎಂಗೆ ಶಾಕಿಂಗ್ ನ್ಯೂಸ್ ನೀಡಿದೆ. ಆರ್ಬಿಐ ಪೇಟಿಎಂ ಮೇಲೆ ಹೊಸ ನಿಯಮವನ್ನು ಜಾರಿ ಮಾಡಿದ್ದು, ಹೊಸ ಗ್ರಾಹಕರು ಆನ್ಬೋರ್ಡೀಂಗ್ ಮಾಡೋದು ಸ್ಟಾಪ್ ಆಗಲಿದೆ. ಅಲ್ಲದೆ ತನ್ನ ಐಟಿ ವ್ಯವಸ್ಥೆಯ ಸಮಗ್ರ ಸಿಸ್ಟಂ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ ಪೇಟಿಎಂಗೆ ನಿರ್ದೇಶನ ಮಾಡಿದೆ. ಹಾಗಾದ್ರೆ ಆರ್ಬಿಐನ ಹೊಸ ನಿಯಮದಿಂದ ಪೇಟಿಎಂಗೆ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆರ್ಬಿಐ ತನ್ನ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್, 1949 ರ ಸೆಕ್ಷನ್ 35A ಅಡಿಯಲ್ಲಿ ಪೇಟಿಎಂ ಮೇಲೆ ಅಧಿಕಾರವನ್ನು ಚಲಾಯಿಸಿದೆ. ಅದರಂತೆ ಪೇಟಿಎಂ ಹೊಸ ಗ್ರಾಹಕರನ್ನು ಆನ್ಬೋರ್ಡಿಂಗ್ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಆರ್ಬಿಐ ನಿರ್ದೇಶಿಸಿದೆ. ಅಲ್ಲದೆ ತನ್ನ ಐಟಿ ವ್ಯವಸ್ಥೆಯ ಸಮಗ್ರ ಸಿಸ್ಟಮ್ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ ಪೇಟಿಎಂ ಬ್ಯಾಂಕ್ಗೆ ನಿರ್ದೇಶನ ನೀಡಲಾಗಿದೆ. ಆಡಿಟರ್ಗಳು ಆಡಿಟ್ ಮಾಡಿದ ನಂತರವೇ ಆರ್ಬಿಐ ಹೊಸ ಅನುಮತಿ ನೀಡುವ ಸಾಧ್ಯತೆ ಇದೆ.

ಅಂದರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಿಂದ ಹೊಸ ಗ್ರಾಹಕರನ್ನು ಆನ್ಬೋರ್ಡಿಂಗ್ ಮಾಡಬೇಕಾದರೆ IT ಆಡಿಟರ್ಗಳ ವರದಿಯನ್ನು ಪರಿಶೀಲಿಸಿದ ನಂತರ RBI ನೀಡುವ ನಿರ್ದಿಷ್ಟ ಅನುಮತಿಗೆ ಒಳಪಟ್ಟಿರುತ್ತದೆ. ಈ ಕ್ರಮವು ಬ್ಯಾಂಕಿನಲ್ಲಿ ಗಮನಿಸಿದ ಕೆಲವು ವಸ್ತು ಮೇಲ್ವಿಚಾರಣಾ ಕಾಳಜಿಗಳನ್ನು ಆಧರಿಸಿದೆ ಎಂದು ಅದು ಹೇಳಿದೆ. ಇನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆಗಸ್ಟ್ 2016 ರಲ್ಲಿ ಸಂಯೋಜಿಸಲಾಯಿತು. ಇದನ್ನು ಔಪಚಾರಿಕವಾಗಿ ಮೇ 2017 ರಲ್ಲಿ ನೋಯ್ಡಾದ ಶಾಖೆಯಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದರೆ ಇದೀಗ ಆರ್ಬಿಐನ ಹೊಸ ನಿಯಮದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ.

ಹಾಗೇ ನೋಡಿದ್ರೆ ಈಗಾಗಲೇ ಆರ್ಬಿಐ ಹೆಚ್ಡಿಎಫ್ಸಿ ಬ್ಯಾಂಕ್ ಮೇಲೂ ಇದೇ ಮಾದರಿಯ ನಿಯಮವನ್ನು ಹೇರಿದೆ. ಕಳೆದ ಡಿಸೆಂಬರ್ 2020 ರಲ್ಲಿ, ಆರ್ಬಿಐ HDFC ಬ್ಯಾಂಕ್ ಯಾವುದೇ ಹೊಸ ಡಿಜಿಟಲ್ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಾರಂಭಿಸದಂತೆ ಆದೇಶ ನೀಡಿದೆ. ಸಾಲದಾತನು ಮರುಕಳಿಸುವ ಟೆಕ್ ಸಮಸ್ಯೆಗಳನ್ನು ಪರಿಹರಿಸುವವರೆಗೆ ಹೊಸ ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದನ್ನು ನಿರ್ಬಂಧಿಸಿದೆ. ಇದೀಗ ಪೇಟಿಎಂ ಬ್ಯಾಂಕ್ ಕೂಡ ಇದೇ ಮಾದರಿಯ ನಿರ್ಬಂಧವನ್ನು ಎದುರಿಸುತ್ತಿದೆ.

ಇನ್ನು ಇತ್ತೀಚಿಗೆ ಪೇಟಿಎಮ್ ಮತ್ತು ಐಆರ್ಸಿಟಿಸಿ (Paytm-IRCTC) ಹೊಸ ಪಾಲುದಾರಿಕೆಯು ಪ್ರಯಾಣಿಕರಿಗೆ ಕಾಯ್ದಿರಿಸದ ರೈಲು ಪ್ರಯಾಣದ ಟಿಕೆಟ್ಗಳು, ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಖರೀದಿಸಲು, ಟಿಕೆಟ್ಗಳನ್ನು ನವೀಕರಿಸಲು ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಲ್ಲಿ (ATVMs) ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಪ್ರಯಾಣಿಕರು ಪೇಟಿಎಮ್ ವಿವಿಧ ಪಾವತಿ ಆಯ್ಕೆಗಳನ್ನು ಪಡೆಯುತ್ತಾರೆ. ಪ್ರಯಾಣಿಕರು ಪೇಟಿಎಮ್ UPI, ಪೇಟಿಎಮ್ ವಾಲೇಟ್, ಪೇಟಿಎಮ್ ಪೋಸ್ಟ್ಪೇಯ್ಡ್ (ಈಗ ಖರೀದಿಸಿ, ನಂತರ ಪಾವತಿಸಿ), ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಅನ್ನು ಬಳಸಲು ಸಾಧ್ಯವಾಗುತ್ತದೆ. ATVM ಗಳಲ್ಲಿ UPI ಮೂಲಕ ಟಿಕೆಟಿಂಗ್ ಸೇವೆಗಳಿಗೆ ಡಿಜಿಟಲ್ ಪಾವತಿ ಮಾಡುವ ಆಯ್ಕೆಯನ್ನು ಭಾರತೀಯ ರೈಲ್ವೇ ಮೊದಲ ಬಾರಿಗೆ ಒದಗಿಸುತ್ತಿದೆ ಎಂದು ಪೇಟಿಎಮ್ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086