Just In
Don't Miss
- News
ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್ಬಿಐ
- Sports
"ಇಂಥಾ ಆಟಗಾರರು, ಇಂಥಾ ಅಭಿಮಾನಿಗಳಿಂದಾಗಿ ಹೆಮ್ಮೆಯಾಗುತ್ತಿದೆ": ಸೋತ ಬಳಿಕ ಆರ್ಸಿಬಿ ನಾಯಕನ ಭಾವುಕ ಮಾತು!
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Movies
'ಪಾರು' ಸೀರಿಯಲ್ ನಟಿ ಸುಶ್ಮಿತಾ ರಾಮಕಲಾ ಸಿಕ್ಕಾಪಟ್ಟೆ ಸ್ಟೈಲಿಶ್!
- Lifestyle
ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಆರ್ಬಿಐನ ಈ ಹೊಸ ನಿಯಮವನ್ನು ಗಮನಿಸಿ?
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಆನ್ಲೈನ್ ಶಾಪಿಂಗ್ ಮಾಡುವವರು ಈ ಸ್ಟೋರಿಯನ್ನು ಓದಲೇಬೇಕು. ಆನ್ಲೈನ್ ಶಾಪಿಂಗ್ ಪ್ರಿಯರಿಗಾಗಿ ಖಡಕ್ ರೂಲ್ಸ್ ತರೋದಕ್ಕೆ ಭಾರತದ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಮುಂದಾಗಿದೆ. ಇಷ್ಟು ದಿನ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಪ್ಲಾಟ್ಪಾರ್ಮ್ಗಳು ಗ್ರಾಹಕರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿಯನ್ನು ಸೇವ್ ಮಾಡಲು ಅವಕಾಶ ಹೊಂದಿದ್ದವು. ಆದರೆ ಮುಂದಿನ ವರ್ಷದಿಂದ ಆನ್ಲೈನ್ ಪ್ಲಾಟ್ಫಾರ್ಮ್ಗಳು ಗ್ರಾಹಕರ ಯಾವುದೇ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಿದೆ.

ಹೌದು, ಆರ್ಬಿಐ ಆನ್ಲೈನ್ ಶಾಪಿಂಗ್ ಮಾಡುವವರಿಗಾಗಿ ಹೊಸ ರೂಲ್ಸ್ ತರಲು ಮುಂದಾಗಿದೆ. ಈ ರೂಲ್ಸ್ ಮುಂದಿನ ವರ್ಷದ ಜುಲೈ 1, 2022 ರಿಂದ ಜಾರಿಗೆ ಬರಲಿದೆ. ಹೊಸ ನಿಯಮ ಜಾರಿಗೆ ಬಮದ ನಂತರ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಕಂಪನಿಗಳು ಅಥವಾ Zomato ನಂತಹ ಆನ್ಲೈನ್ ಡೆಲಿವರಿ ಅಗ್ರಿಗೇಟರ್ಗಳು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸೇವ್ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಹೊಸ ಮಾರ್ಗಸೂಚಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆರ್ಬಿಐ ಜಾರಿಗೊಳಿಸಿರುವ ಹೊಸ ನಿಯಮಗಳ ಪ್ರಕಾರ, ಮುಂದಿನ ವರ್ಷದಿಂದ ಯಾವುದೇ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಆನ್ಲೈನ್ ವಹಿವಾಟು ನಡೆಸುವ ಗ್ರಾಹಕರು ಪ್ರತಿ ಬಾರಿ ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಕಾಗುತ್ತದೆ. ಒಂದು ವೇಳೆ ಇದು ನಿಮಗೆ ತೊಂದರೆ ಎನಿಸಿದರೆ ನಿಮ್ಮ ಕಾರ್ಡ್ಗಳನ್ನು ಟೋಕನೈಸ್ ಮಾಡಲು ಪ್ಲಾಟ್ಫಾರ್ಮ್ಗಳಿಗೆ ಒಪ್ಪಿಗೆಯನ್ನು ನೀಡಲು ಆಯ್ಕೆ ಮಾಡಬಹುದಾಗಿದೆ.

ಗ್ರಾಹಕರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸುರಕ್ಷತೆ ಮತ್ತು ಭದ್ರತೆಯನ್ನು ಸುಧಾರಿಸುವ ಸಲುವಾಗಿ ನಿಯಂತ್ರಕ ಸಂಸ್ಥೆಯು ಕಾರ್ಡ್ ಟೋಕನೈಸೇಶನ್ ಸೇವೆಗಳಲ್ಲಿ ತನ್ನ ಮಾರ್ಗಸೂಚಿಗಳನ್ನು ಹೆಚ್ಚಿಸಿದೆ. "ಕಾರ್ಡ್ ಡೇಟಾದ ಟೋಕನೈಸೇಶನ್ ಹೆಚ್ಚುವರಿ ದೃಢೀಕರಣದ ಅಗತ್ಯವಿರುವ ಸ್ಪಷ್ಟ ಗ್ರಾಹಕರ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ" ಎಂದು ಆರ್ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಆನ್ಲೈನ್ ಗ್ರಾಹಕರ ಕಾರ್ಡ್ ಡೇಟಾವನ್ನು ಸಂಗ್ರಹಿಸಲು ವ್ಯಾಪಾರಿಗಳಿಗೆ ಜೂನ್ 30, 2021 ಎಂದು ನಿಗದಿಪಡಿಸಲಾಗಿತ್ತು, ನಂತರ ಡಿಸೆಂಬರ್ 31, 2021 ರವರೆಗೆ ವಿಸ್ತರಿಸಲಾಗಿತ್ತು ಮತ್ತು ಇದೀಗ ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ.

ನೀವು ಪ್ರತಿಭಾರಿಯೂ ಹೊಸದಾಗಿ ಕಾರ್ಡ್ ವಿವರ ನಮೂದಿಸುವ ಬದಲು ನೇರವಾಗಿ ವ್ಯಾಪಾರ ಮಾಡಲು ಟೋಕನೈಸೇಶನ್ ಕಾರ್ಡ್ ವಿವರಗಳನ್ನು ಬಳಸಬಹುದು. ಇದು ಅನನ್ಯ ಅಲ್ಗಾರಿದಮ್-ರಚಿತ ಕೋಡ್ ಅಥವಾ ಟೋಕನ್ನೊಂದಿಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಆನ್ಲೈನ್ ಶಾಪಿಂಗ್ನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಬಹಿರಂಗಪಡಿಸದೆ ಆನ್ಲೈನ್ ಖರೀದಿಗಳನ್ನು ಮಾಡಲು ಅನುಮತಿಯನ್ನು ನೀಡಲಿದೆ.

ಆರ್ಬಿಐನ ಹೊಸ ನಿಯಮದ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳೇನು?
* ಜುಲೈ 1, 2022 ರಿಂದ, ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಯಾವುದೇ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಸೇವ್ ಮಾಡಲು ಸಾದ್ಯವಾಗುವುದಿಲ್ಲ.
* ನೀವು ಆನ್ಲೈನ್ ವಹಿವಾಟು ನಡೆಸುವ ಪ್ರತಿ ಭಾರಿಯೂ ಕೂಡ ಕಾರ್ಡ್ ವಿವರಗಳನ್ನು ರಿ-ಎಂಟ್ರಿ ಮಾಡಬೇಕಾಗುತ್ತದೆ.
* ನಿಮಗೆ ಮತ್ತೆ ಮತ್ತೆ ರೀ ಎಂಟ್ರಿ ಮಾಡುವುದು ಕಷ್ಟ ಎನಿಸಿದರೆ, ಗ್ರಾಹಕರು ತಮ್ಮ ಕಾರ್ಡ್ಗಳನ್ನು "ಟೋಕನೈಸ್" ಮಾಡಲು ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಬಹುದು.
* ಗ್ರಾಹಕರ ಒಪ್ಪಿಗೆ ಪಡೆದ ನಂತರ, ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಅಗತ್ಯವಿರುವಂತೆ ಹೆಚ್ಚುವರಿ ಅಂಶ ದೃಢೀಕರಣದೊಂದಿಗೆ ವಿವರಗಳನ್ನು ಎನ್ಕ್ರಿಪ್ಟ್ ಮಾಡಲು ಕಾರ್ಡ್ ನೆಟ್ವರ್ಕ್ ಅನ್ನು ಕೇಳುತ್ತವೆ. ಒಮ್ಮೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಎನ್ಕ್ರಿಪ್ಟ್ ಮಾಡಿದ ವಿವರಗಳನ್ನು ಪಡೆದರೆ, ಗ್ರಾಹಕರು ಭವಿಷ್ಯದ ವಹಿವಾಟುಗಳಿಗಾಗಿ ಆ ಕಾರ್ಡ್ ಅನ್ನು ಸೇವ್ ಮಾಡಬಹುದಾಗಿದೆ.

* ಪ್ರಸ್ತುತ ಹೆಚ್ಚಿನ ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ಮಾಸ್ಟರ್ಕಾರ್ಡ್ ಮತ್ತು ವೀಸಾ ಒದಗಿಸಿದ ಕಾರ್ಡ್ಗಳನ್ನು ಮಾತ್ರ ಟೋಕನೈಸ್ ಮಾಡಬಹುದು. ಇತರ ಹಣಕಾಸು ಸೇವೆಗಳ ಕಾರ್ಡ್ಗಳನ್ನು ಶೀಘ್ರದಲ್ಲೇ ಟೋಕನೈಸ್ ಮಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
* ಹೊಸ RBI ಮಾರ್ಗಸೂಚಿಗಳನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳಿಗೆ ಬದ್ಧವಾಗಿರಬೇಕು.
* ಆರ್ಬಿಐನ ಈ ಹೊಸ ಮಾರ್ಗಸೂಚಿಗಳು ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅನ್ವಯಿಸುವುದಿಲ್ಲ. ದೇಶೀಯ ಕಾರ್ಡ್ಗಳು ಮತ್ತು ವಹಿವಾಟುಗಳು ಮಾತ್ರ ಹೊಸ RBI ಮಾರ್ಗಸೂಚಿಗಳ ವ್ಯಾಪ್ತಿಯ ಅಡಿಯಲ್ಲಿ ಬರುತ್ತವೆ.

* ಇನ್ನು ಗ್ರಾಹಕರ ಕಾರ್ಡ್ಗಳ ಟೋಕನೈಸೇಶನ್ಗಾಗಿ ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
* ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಗ್ರಾಹಕರಿಗೆ ಸುಲಭವಾಗಿ ಗುರುತಿಸಲು ಟೋಕನೈಸ್ ಮಾಡಿದ ಕಾರ್ಡ್ಗಳ ಕೊನೆಯ ನಾಲ್ಕು ಅಂಕೆಗಳನ್ನು ತೋರಿಸಬೇಕಾಗುತ್ತದೆ.
* ಹಾಗಂತ ನೀವು ನಿಮ್ಮ ಕಾರ್ಡ್ನ ಟೋಕನೈಸೇಶನ್ ಮಾಡಿಸಬೇಕಿರುವುದು ಕಡ್ಡಾಯವಲ್ಲ. ತ್ವರಿತವಾಗಿ ವಹಿವಾಟು ನಡೆಸಬೇಕಿದ್ದರೆ ಮಾತ್ರ ಗ್ರಾಹಕರು ತಮ್ಮ ಕಾರ್ಡ್ಗಳನ್ನು ಟೋಕನೈಸ್ ಮಾಡಲು ಆಯ್ಕೆ ಮಾಡಬಹುದು ಅಥವಾ ಇಲ್ಲದಿದ್ದರೆ ಕಾರ್ಡ್ ವಿವರಗಳನ್ನು ಪ್ರತಿ ಭಾರಿ ನಮೂದಿಸಬಹುದು.

ಇದಲ್ಲದೆ ಆರ್ಬಿಐ ಭಾರತದಲ್ಲಿ ತನ್ನದೇ ಆದ ಹೊಸ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಕ್ರಿಪ್ಟೋಕರೆನ್ಸಿಗಳ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಆರ್ಬಿಐ ಪರಿಚಯಿಸುವ ಕ್ರಿಪ್ಟೋಕರೆನ್ಸಿ ಹೇಗಿರಲಿದೆ? ಇದರ ಮೌಲ್ಯ ಹೇಗಿರಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆರ್ಬಿಐ ನಡುವೆ ಮಹತ್ವದ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಕ್ರಿಪ್ಟೋ ಕರೆನ್ಸಿ ಎಂದರೇನು?
ಅತೀ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999