ಭಾರತದಲ್ಲಿ ರಿಯಲ್‌ಮಿ 4K ಸ್ಮಾರ್ಟ್ ಗೂಗಲ್ ಟಿವಿ ಸ್ಟಿಕ್ ಬಿಡುಗಡೆ!..ಬೆಲೆ ಎಷ್ಟು?

|

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ರಿಯಲ್‌ಮಿ ಕಂಪನಿಯು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹೊರತಾಗಿ ಸ್ಮಾರ್ಟ್‌ ಡಿವೈಸ್‌ಗಳತ್ತ ಗಮನ ನೀಡಿದೆ. ಈ ನಿಟ್ಟಿನಲ್ಲಿ ರಿಯಲ್‌ಮಿ ಕಂಪನಿಯು ನೂತನವಾಗಿ 'ರಿಯಲ್‌ಮಿ 4K ಸ್ಮಾರ್ಟ್ ಗೂಗಲ್ ಟಿವಿ ಸ್ಟಿಕ್', 'ರಿಯಲ್‌ಮಿ ಬ್ರಿಕ್ ಬ್ಲೂಟೂತ್ ಸ್ಪೀಕರ್', ಸೇರಿದಂತೆ ಕೆಲವು ಸ್ಮಾರ್ಟ್‌ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರ ಗಮನ ಸೆಳೆದಿದೆ.

ಸ್ಮಾರ್ಟ್‌ಫೋನ್‌

ಹೌದಿ, ಜನಪ್ರಿಯ ರಿಯಲ್‌ಮಿ ಸಂಸ್ಥೆಯು ಇಂದು (ಅ.13) ದೇಶಿಯ ಮಾರುಕಟ್ಟೆಗೆ ಹೊಸದಾಗಿ ರಿಯಲ್‌ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಫೋನ್‌ ನೊಂದಿಗೆ ಕೆಲವು ಸ್ಮಾರ್ಟ್‌ ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ 'ರಿಯಲ್‌ಮಿ 4K ಸ್ಮಾರ್ಟ್ ಗೂಗಲ್ ಟಿವಿ ಸ್ಟಿಕ್', 'ರಿಯಲ್‌ಮಿ ಬ್ರಿಕ್ ಬ್ಲೂಟೂತ್ ಸ್ಪೀಕರ್' 'ರಿಯಲ್‌ಮಿ ಕೂಲಿಂಗ್ ಬ್ಯಾಕ್ ಕ್ಲಿಪ್ ನಿಯೋ, 'ರಿಯಲ್‌ಮಿ ಟೈಪ್-ಸಿ ಸೂಪರ್‌ ಡಾರ್ಟ್ ಗೇಮ್ ಕೇಬಲ್' ಮತ್ತು ರಿಯಲ್‌ಮಿ ಮೊಬೈಲ್ ಗೇಮ್ ಟ್ರಿಗರ್ ಡಿವೈಸ್‌ಗಳಾಗಿವೆ. ಹಾಗಾದರೇ ರಿಯಲ್‌ಮಿ ಸಂಸ್ಥೆಯ ಹೊಸ ಉತ್ಪನ್ನಗಳ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 4K ಸ್ಮಾರ್ಟ್ ಗೂಗಲ್ ಟಿವಿ ಸ್ಟಿಕ್ ಫೀಚರ್ಸ್‌

ರಿಯಲ್‌ಮಿ 4K ಸ್ಮಾರ್ಟ್ ಗೂಗಲ್ ಟಿವಿ ಸ್ಟಿಕ್ ಫೀಚರ್ಸ್‌

ರಿಯಲ್‌ಮಿ ಸಂಸ್ಥೆಯ 4K ಟಿವಿ ಸ್ಟಿಕ್ ಡಿವೈಸ್ ಗೂಗಲ್‌ನ ಹೊಸ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಸಪೋರ್ಟ್‌ ಮಾಡುತ್ತದೆ. ಇದನ್ನು ಗೂಗಲ್ ಟಿವಿ ಎಂದು ಹೇಳಲಾಗುತ್ತದೆ. ಈ ಡಿವೈಸ್ ಗೂಗಲ್‌ ಅಸಿಸ್ಟಂಟ್‌ ಮತ್ತು ಕ್ರೋಮ್‌ಕಾಸ್ಟ್‌ ಏಕೀಕರಣದೊಂದಿಗೆ ಕಾಣಿಸಿಕೊಳ್ಳುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ v5 ಮತ್ತು HDMI 2.1 ಪೋರ್ಟ್ ಆಯ್ಕೆಗಳು ಇವೆ. ಈ ಡಿವೈಸ್ ಕ್ವಾಡ್-ಕೋರ್ ARM ಕಾರ್ಟೆಕ್ಸ್- A35 CPU ಅನ್ನು ಹೊಂದಿದ್ದು, 2GB RAM ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನು ಈ ಡಿವೈಸ್ ಬೆಲೆಯು 3,999ರೂ. ಆಗಿದೆ. ಆದರೆ ಇದೇ ಅ.16ರಂದು ಶುರುವಾಗುವ ರಿಯಲ್‌ಮಿ ಫೆಸ್ಟಿವಲ್ ಡೇಸ್ ಸೇಲ್‌ನಲ್ಲಿ 2,999ರೂ.ಗೆ ಸಿಗಲಿದೆ.

ರಿಯಲ್‌ಮಿ ಬ್ರಿಕ್ ಬ್ಲೂಟೂತ್ ಸ್ಪೀಕರ್ ಫೀಚರ್ಸ್‌

ರಿಯಲ್‌ಮಿ ಬ್ರಿಕ್ ಬ್ಲೂಟೂತ್ ಸ್ಪೀಕರ್ ಫೀಚರ್ಸ್‌

ರಿಯಲ್‌ಮಿ ಸಂಸ್ಥೆಯ ಹೊಸ ಬ್ಲೂಟೂತ್ ಸ್ಪೀಕರ್ 20W ಡೈನಾಮಿಕ್ ಬಾಸ್ ಬೂಸ್ಟ್ ಆಡಿಯೋ ಡ್ರೈವರ್‌ಗಳ ಆಯ್ಕೆ ಹೊಂದಿದೆ. ಈ ಸ್ಪೀಕರ್ 14 ಗಂಟೆಗಳ ಪ್ಲೇಬ್ಯಾಕ್ ಸಮಯ ಹೊಂದಿದ್ದು, ನೀರಿನ ಪ್ರತಿರೋಧಕ್ಕೆ IPX5 ರೇಟಿಂಗ್ ಮತ್ತು ಎರಡು ಹೆಚ್ಚುವರಿ ಬಾಸ್ ರೇಡಿಯೇಟರ್ ಆಯ್ಕೆ ಸಹ ಪಡೆದಿದೆ. ಇನ್ನು ಈ ಡಿವೈಸ್ ಬೆಲೆಯು 2,999ರೂ. ಆಗಿದೆ. ಆದರೆ ಅ.16ರಂದು ಶುರುವಾಗುವ ರಿಯಲ್‌ಮಿ ಫೆಸ್ಟಿವಲ್ ಡೇಸ್ ಸೇಲ್‌ನಲ್ಲಿ 2,499 ರೂ.ಗೆ ಸಿಗಲಿದೆ.

ರಿಯಲ್‌ಮಿ ಬಡ್ಸ್ ಏರ್ 2

ರಿಯಲ್‌ಮಿ ಬಡ್ಸ್ ಏರ್ 2

ರಿಯಲ್‌ಮಿ ಕಂಪನಿಯು ರಿಯಲ್‌ಮಿ ಬಡ್ಸ್ ಏರ್ 2 ಡಿವೈಸ್‌ ಅನ್ನು ಸಹ ಪರಿಚಯಿಸಿದೆ. ಈ ಡಿವೈಸ್ 10 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳ ಆಯ್ಕೆ ಪಡೆದಿದೆ. ಆಕ್ಟೀವ್ ನಾಯಿಸ್ ಕ್ಯಾನ್ಸ್‌ಲೇಷನ್ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಡಿವೈಸ್ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ ಆಗಲಿದೆ. ಹಾಗೆಯೇ ಇದೇ ಅ.18ರಿಂದ ಆಫ್‌ಲೈನ್‌ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದರ ಬೆಲೆಯು 3,299ರೂ. ಆಗಿದೆ. ಆದರೆ ರಿಯಲ್‌ಮಿ ಫೆಸ್ಟಿವಲ್‌ ಸೇಲ್‌ ವೇಳೆ 2,599ರೂ.ಗಳಿಗೆ ದೊರೆಯಲಿದೆ.

ರಿಯಲ್‌ಮಿ ಮೊಬೈಲ್ ಗೇಮ್ ಟ್ರಿಗರ್ ಡಿವೈಸ್‌

ರಿಯಲ್‌ಮಿ ಮೊಬೈಲ್ ಗೇಮ್ ಟ್ರಿಗರ್ ಡಿವೈಸ್‌

ರಿಯಲ್‌ಮಿ ಕಂಪನಿಯು ಗೇಮಿಂಗ್ ಪ್ರಿಯರನ್ನು ಸೆಳೆಯಲು ಈ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಹಾಗೆಯೇ ರಿಯಲ್‌ಮಿ ಕೂಲಿಂಗ್ ಬ್ಯಾಕ್ ಕ್ಲಿಪ್ ನಿಯೋ ಮತ್ತು ರಿಯಲ್‌ಮಿ ಟೈಪ್-ಸಿ ಸೂಪರ್‌ ಡಾರ್ಟ್ ಗೇಮ್ ಕೇಬಲ್ ಡಿವೈಸ್‌ ಅನ್ನು ಪರಿಚಯಿಸಿದೆ. ಇನ್ನು ರಿಯಲ್‌ಮಿಯ ಟೈಪ್-ಸಿ ಸೂಪರ್ ಡಾರ್ಟ್ ಗೇಮ್ ಕೇಬಲ್ 7.6 ಎಂಎಂ ಆಗಿದ್ದು, 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ ರಿಯಲ್‌ಮಿ ಕೂಲಿಂಗ್ ಬ್ಯಾಕ್ ಕ್ಲಿಪ್ ನಿಯೋ, ತ್ವರಿತ ಕೂಲಿಂಗ್ ಅನ್ನು ಹೊಂದಿದೆ. ರಿಯಲ್‌ಮಿ ಮೊಬೈಲ್ ಗೇಮ್ ಟ್ರಿಗರ್ ಡಿವೈಸ್‌ ರೀಟೆಲ್ ಬೆಲೆಯು 699ರೂ. ಆಗಿದೆ. ಕೂಲಿಂಗ್ ಬ್ಯಾಕ್ ಕ್ಲಿಪ್ ನಿಯೋ ದರದವು 999ರೂ. ಆಗಿದೆ.

Most Read Articles
Best Mobiles in India

English summary
Realme 4K Smart Google TV stick, Realme Brick Bluetooth speaker, Realme Cooling Back Clip Neo, and Realme Mobile Game Trigger. These products were launched alongside the Indian model of Realme GT Neo 2.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X