ರಿಯಲ್‌ ಮಿ 6 ಮತ್ತು ರಿಯಲ್‌ ಮಿ 6i ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

|

ರಿಯಲ್‌ಮಿ ಕಂಪನಿಯು ಮಾರುಕಟ್ಟೆಯಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ ಮೊಬೈಲ್ ಗಳಿಂದ ಗುರುತಿಸಿಕೊಂಡಿದೆ. ಕಂಪನಿಯ ಇತ್ತೀಚಿನ ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಸರಣಿ ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ರಿಯಲ್‌ ಮಿ 6 ಮತ್ತು ರಿಯಲ್‌ ಮಿ 6i ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದ್ದು, ಈಗ ಮತ್ತ ಗ್ರಾಹಕರನ್ನು ಆಕರ್ಷಿಸಿವೆ.

ರಿಯಲ್‌ ಮಿ 6

ಹೌದು, ರಿಯಲ್‌ಮಿ ಸಂಸ್ಥೆಯ ರಿಯಲ್‌ ಮಿ 6 ಮತ್ತು ರಿಯಲ್‌ ಮಿ 6i ಸ್ಮಾರ್ಟ್‌ಫೋನ್‌ ಇದೀಗ ಬೆಲೆಯಲ್ಲಿ 1000ರೂ. ಭಾರಿ ಕಡಿತವಾಗಿದೆ. ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಫೀಚರ್ಸ್‌ ಸೇರಿದಂತೆ, ಅಧಿಕ ಬ್ಯಾಟರಿ, ವೇಗದ ಪ್ರೊಸೆಸರ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ರಿಯಲ್‌ ಮಿ 6 ಫೋನಿನ 4GB RAM + 64GB ಆರಂಭಿಕ ವೇರಿಯಂಟ್ ಬೆಲೆಯು 13,999 ರೂ. ಆಗಿದೆ. ಹಾಗೆಯೇ ರಿಯಲ್‌ ಮಿ 6i ಫೋನಿನ 8GB + 128GB ವೇರಿಯಂಟ್ ಬೆಲೆಯು 16,999 ರೂ. ಆಗಿದೆ. ಹಾಗಾದರೆ ಈ ಎರಡು ಫೋನ್‌ಗಳ ಇತರೆ ಫೀಚರ್ಸ್‌ಗಳೆನು ಎನ್ನುವುದನ್ನು ಮುಂದೆ ತಿಳಿಯೋಣ.

ರಿಯಲ್‌ ಮಿ 6i -ಡಿಸ್‌ಪ್ಲೇ

ರಿಯಲ್‌ ಮಿ 6i -ಡಿಸ್‌ಪ್ಲೇ

ರಿಯಲ್‌ ಮಿ 6i ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು LCD ಮಾದರಿಯಲ್ಲಿ ಇದ್ದು, ಪಂಚ್‌ಹೋಲ್ ವಿನ್ಯಾಸ ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅನುಪಾತ 90.5% ಆಗಿದ್ದು, 90Hz ಸಾಮರ್ಥ್ಯ ಪಡೆದಿದೆ. ಗೊರಿಲ್ಲಾ ಗ್ಲಾಸ್ ಸಪೋರ್ಟ್ ಇದೆ.

ರಿಯಲ್‌ ಮಿ 6i-ಪ್ರೊಸೆಸರ್

ರಿಯಲ್‌ ಮಿ 6i-ಪ್ರೊಸೆಸರ್

ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G90 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್‌ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ನೀಡಿದೆ.

ರಿಯಲ್‌ ಮಿ 6i-ಕ್ಯಾಮೆರಾ

ರಿಯಲ್‌ ಮಿ 6i-ಕ್ಯಾಮೆರಾ

ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2ಎಂಪಿ ಸೆನ್ಸಾರ್‌ನಲ್ಲಿರಲಿವೆ. ಹಾಗೆಯೇ 16ಎಂಪಿಯ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ರಿಯಲ್‌ ಮಿ 6i-ಬ್ಯಾಟರಿ

ರಿಯಲ್‌ ಮಿ 6i-ಬ್ಯಾಟರಿ

ರಿಯಲ್‌ ಮಿ 6i ಸ್ಮಾರ್ಟ್‌ಫೋನ್ 4300mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 30W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗೆಯೇ ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ.

ರಿಯಲ್‌ಮಿ 6-ಡಿಸ್‌ಪ್ಲೇ

ರಿಯಲ್‌ಮಿ 6-ಡಿಸ್‌ಪ್ಲೇ

ರಿಯಲ್‌ಮಿ 6 ಸ್ಮಾರ್ಟ್‌ಫೋನ್‌ 1080 X 2400 ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಪಂಚ್‌ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ. ಇದರ ಬಾಡಿ ಟು ಸ್ಕ್ರೀನ್‌ ನಡುವಿನ ಅನುಪಾತ 90.5% ರಷ್ಟಿದೆ.

ರಿಯಲ್‌ಮಿ 6-ಪ್ರೊಸೆಸರ್‌

ರಿಯಲ್‌ಮಿ 6-ಪ್ರೊಸೆಸರ್‌

ರಿಯಲ್‌ಮಿ 6 ಸ್ಮಾರ್ಟ್‌ಫೋನ್‌ ಮೀಡಿಯಾ ಹಿಲಿಯೋ G90T ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 128GB, 6GBRAM ಮತ್ತು 128 GB, ಹಾಗೂ 4GBRAM ಮತ್ತು 64GB ಸಾಮರ್ಥ್ಯದ ಆಂತರಿಕ ಮೆಮೊರಿ ಹೊಂದಿರುವ ವೇರಿಯೆಂಟ್‌ ಆಯ್ಕೆಗಳನ್ನ ಹೊಂದಿದೆ.

ರಿಯಲ್‌ಮಿ 6-ಕ್ಯಾಮೆರಾ

ರಿಯಲ್‌ಮಿ 6-ಕ್ಯಾಮೆರಾ

ರಿಯಲ್‌ಮಿ 6 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ವೈಡ್‌ ಆಂಗಲ್‌ ಶೂಟರ್‌ ಲೆನ್ಸ್‌, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ರಿಯಲ್‌ಮಿ 6-ಬ್ಯಾಟರಿ

ರಿಯಲ್‌ಮಿ 6-ಬ್ಯಾಟರಿ

ರಿಯಲ್‌ಮಿ 6 ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 30W ಫ್ಲ್ಯಾಶ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Most Read Articles
Best Mobiles in India

English summary
Realme 6 now starts at Rs. 13,999 for the 4GB RAM + 64GB variant and goes up to Rs. 16,999 for the 8GB + 128GB variant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X