ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಎಂಟ್ರಿಗೆ ದಿನಾಂಕ ಫಿಕ್ಸ್‌; ಬೆಲೆ ಎಷ್ಟು?

|

ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ರಿಯಲ್‌ಮಿ ಸಂಸ್ಥೆಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರಿಯಲ್‌ಮಿ C ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಣೆ ಪಡೆದಿದೆ. ಇದೀಗ ರಿಯಲ್‌ಮಿ ಸಂಸ್ಥೆಯು C ಸರಣಿಯಲ್ಲಿ ಹೊಸದಾಗಿ ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದ್ದು, ದಿನಾಂಕ ನಿಗದಿ ಮಾಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪನಿಯು ನೂತನವಾಗಿ ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ 5ರಂದು ಗ್ಲೋಬಲ್ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್‌, ಹಿಲಿಯೋ G35 SoC ಪ್ರೊಸೆಸರ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದರೇ ರಿಯಲ್‌ಮಿ C21 ಸ್ಮಾರ್ಟ್‌ಫೋನ್‌ ಲೀಕ್ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಮಾರ್ಟ್‌ಫೋನ್

ಬರಲಿರುವ ಹೊಸ ರಿಯಲ್‌ಮಿ C21 ಸ್ಮಾರ್ಟ್‌ಫೋನ್ 6.5- ಇಂಚಿನ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಾಗೆಯೇ ಹಿಲಿಯೋ G35 SoC ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, IMG PowerVR GE8320 GPU ಸಪೋರ್ಟ್‌ ಸಹ ಪಡೆದಿರಲಿದೆ. ಇದರೊಂದಿಗೆ 4GB RAM ವೇರಿಯಂಟ್‌ ಆಯ್ಕೆಯನ್ನು ಹೊಂದಿರಲಿದ್ದು, 64GB ಆಂತರೀಕ ಸಂಗ್ರಹದ ಅವಕಾಶ ಪಡೆದಿರಲಿದೆ.

ಸೆನ್ಸಾರ್‌

ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದೆ. ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. ಎರಡನೇ ಮತ್ತು ಮೂರನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿರಲಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಇರುವ ಸಾಧ್ಯತೆಗಳಿವೆ.

ಆಂಡ್ರಾಯ್ಡ್‌

ಇನ್ನು ರಿಯಲ್‌ಮಿ C21 ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಖಚಿತವಾಗಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್‌ಗೆ ಬೆಂಬಲ ಹೊಂದಿರಲಿದೆ. ಬ್ಯಾಟರಿಯು 47 ದಿನಗಳ ಸ್ಟ್ಯಾಂಡ್‌ಬೈ ಒದಗಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಇರಲಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ ಲಭ್ಯ ಇರಲಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಅಂದಾಜು 7,800ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗಲಿದೆ ಎಂದು ಕಂಪನಿಯು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಿಲ್ಲ,

Most Read Articles
Best Mobiles in India

English summary
Realme C21 will launch on March 5 in international markets. Here's everything you need to know about the upcoming budget smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X