ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ GT ನಿಯೋ 2 ಫೋನಿಗೆ ಆಕರ್ಷಕ ರಿಯಾಯಿತಿ!

|

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ಆಯೋಜಿಸಿದೆ. ಈ ಸೇಲ್‌ನಲ್ಲಿ ಆಯ್ದ ಕೆಲವು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ರಿಯಾಯಿತಿ ಘೋಷಿಸಿದೆ. ಆ ಪೈಕಿ ರಿಯಲ್‌ಮಿ ಸಂಸ್ಥೆಯು ಕಳೆದ ವರ್ಷ ಬಿಡುಗಡೆಯಾದ ಪ್ರೀಮಿಯಂ ಫೋನ್ ರಿಯಲ್‌ಮಿ GT ನಿಯೋ 2 (Realme GT Neo 2) ಸ್ಮಾರ್ಟ್‌ಫೋನ್ ಹೆಚ್ಚಿನ ಡಿಸ್ಕೌಂಟ್‌ ನಲ್ಲಿ ಕಾಣಿಸಿಕೊಂಡಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ GT ನಿಯೋ 2 ಫೋನಿಗೆ ಆಕರ್ಷಕ ರಿಯಾಯಿತಿ!

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ರಿಯಲ್‌ಮಿ GT ನಿಯೋ 2 ಫೋನ್‌ಗೆ 3,000ರೂ. ಗಳ ರಿಯಾಯಿತಿಯನ್ನು ಲಭ್ಯವಾಗಲಿದೆ. ಈ ಫೋನ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಇನ್ನು 8 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್‌ನ ವೇರಿಯಂಟ್‌ ಬಿಡುಗಡೆಯ ಬೆಲೆ 31,999 ರೂ. ಆಗಿದ್ದು, 28,999ರೂ. ಗಳಿಗೆ ಸಿಗಲಿದೆ. ಅದೇ ರೀತಿ, 12 GB RAM ಮತ್ತು 256 GB ಸಂಗ್ರಹಣೆಯ ರೂಪಾಂತರದ ಬೆಲೆ 35,999 ರೂ. ಆಗಿದ್ದು, 32,999 ರೂ. ಗೆ ಲಭ್ಯ ಆಗಲಿದೆ. ಇನ್ನುಳಿದಂತೆ ರಿಯಲ್‌ಮಿ GT ನಿಯೋ 2 ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ GT ನಿಯೋ 2 ಫೋನಿಗೆ ಆಕರ್ಷಕ ರಿಯಾಯಿತಿ!

ಡಿಸ್‌ಪ್ಲೇ ರಚನೆ
ರಿಯಲ್‌ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್‌ 1080 × 2400 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿರುವ 6.62-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು ಡಿಸಿ ಡಿಮ್ಮಿಂಗ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇ 600Hz ಟಚ್‌ ಸ್ಯಾಂಪಲ್‌ ರೇಟ್‌ ಮತ್ತು HDR10+ ಬೆಂಬಲವನ್ನು ಹೊಂದಿದೆ. ಜೊತೆಗೆ ಸ್ಕ್ರೀನ್‌ ಟು ಬಾಡಿ 92.60% ಅನುಪಾತವನ್ನು ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ GT ನಿಯೋ 2 ಫೋನಿಗೆ ಆಕರ್ಷಕ ರಿಯಾಯಿತಿ!

ಪ್ರೊಸೆಸರ್‌ ಪವರ್ ಯಾವುದು
ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ 7GB ವರ್ಚುವಲ್ ಮೆಮೊರಿಯನ್ನು ಕೂಡ ಬೆಂಬಲಿಸಲಿದೆ.

ಟ್ರಿಪಲ್ ಕ್ಯಾಮೆರಾ ವಿಶೇಷ
ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್ ಬೊಕೆ, ಎಚ್‌ಡಿಆರ್, ಫೇಸ್‌ ಡಿಟೆಕ್ಷನ್‌, ಫಿಲ್ಟರ್, ಸೂಪರ್ ನೈಟ್ ಸ್ಕೇಪ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 36 ನಿಮಿಷಗಳಲ್ಲಿ ಫೋನ್ ಅನ್ನು 0 ದಿಂದ 100% ಫುಲ್‌ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ, ಬ್ಲೂಟೂತ್‌, GPS/ A-GPS, NFC ಮತ್ತು USB ಟೈಪ್‌-ಸಿ ಪೋರ್ಟ್ ಬೆಂಬಲಸಲಿದೆ.

Most Read Articles
Best Mobiles in India

English summary
Realme GT Neo 2 at Rs 3,000 off in Flipkart Sale: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X