'ರಿಯಲ್‌ಮಿ GT ನಿಯೋ 2' ಫೋನ್‌ ಬೆಲೆ ಬಹಿರಂಗ; ಅಚ್ಚರಿ ಎನಿಸುವ ಬೆಲೆ!

|

ಜನಪ್ರಿಯ ರಿಯಲ್‌ ಮಿ ಸಂಸ್ಥೆಯು ಇತ್ತೀಚಿಗಷ್ಟೆ ನೂತನವಾಗಿ ರಿಯಲ್‌ಮಿ GT ನಿಯೋ ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಇದೀಗ ಅದೇ ಸರಣಿಯಲ್ಲಿ ಮತ್ತೆ ಹೊಸದಾಗಿ ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಆದರೆ ಇದೀಗ ಈ ಸ್ಮಾರ್ಟ್‌ಫೋನಿನ ಬೆಲೆ ಬಹಿರಂಗವಾಗಿದ್ದು, ಮೊಬೈಲ್‌ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಹಾಗೆಯೇ ಈ ಫೋನಿನ ಲೀಕ್ ಫೀಚರ್ಸ್‌ಗಳು ಆಕರ್ಷಕ ಎನಿಸಿವೆ.

ಸ್ಮಾರ್ಟ್‌ಫೋನ್

ಹೌದು, ರಿಯಲ್‌ ಮಿ ಕಂಪನಿಯು ಇದೇ ಸೆ 22 ರಂದು (ಚೀನಾದಲ್ಲಿ) ಹೊಸದಾಗಿ ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಈ ಫೋನ್‌ ಹೈ ಎಂಡ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡುವ ಲಕ್ಷಣಗಳನ್ನು ಈಗಾಗಲೇ ಹೊರಹಾಕಿದೆ. ಈ ಫೋನ್ 12GB RAM ಮತ್ತು 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಅನ್ನು ಒಳಗೊಂಡಿರಲಿದೆ. ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಹೊಂದಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಮತ್ತು ಈ ಫೋನಿನ ಲೀಕ್ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಮತ್ತು ವಿನ್ಯಾಸ

ಡಿಸ್‌ಪ್ಲೇ ಡಿಸೈನ್ ಮತ್ತು ವಿನ್ಯಾಸ

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ ಫೋನ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ 6.62 ಇಂಚಿನ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿರಲಿದ್ದು, 600Hz ಟಚ್ ಸಾಂಪ್ಲಿಂಗ್ ರೇಟ್ ಪಡೆದಿರಲಿದೆ. ಹಾಗೆಯೇ ಇದು 1300 nits ಬ್ರೈಟ್ನೆಸ್‌ ಪಡೆದಿರಲಿದೆ.

ಪ್ರೊಸೆಸರ್‌ ಬಲ ಯಾವುದು

ಪ್ರೊಸೆಸರ್‌ ಬಲ ಯಾವುದು

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ ಮೀಡಿಯಾ ಮೀಡಿಯಾ ಟೆಕ್ Dimensity 1200 SoC ಪ್ರೊಸೆಸರ್‌ ಅನ್ನು ಹೊಂದಿರಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6 GB RAM ಮತ್ತು 128 GB, 8 GB + 128 GB ಮತ್ತು 12 GB + 128 GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಹೊಂದಿರಲಿದೆ ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾದ ಅವಕಾಶ ಇರಲಿದೆ.

ತ್ರಿವಳಿ ಕ್ಯಾಮೆರಾ ವಿಶೇಷ

ತ್ರಿವಳಿ ಕ್ಯಾಮೆರಾ ವಿಶೇಷ

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ ಹಿಂಬದಿಯಲ್ಲಿ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಒದಗಿಸುವ ಸಾಧ್ಯತೆ ಇದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ V5.0, GPS ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ ಫೋನ್ 12GB RAM ಮತ್ತು 256GB ಸ್ಟೋರೇಜ್‌ನ ಹೈ ಎಂಡ್‌ ವೇರಿಯಂಟ್ ಆಯ್ಕೆ ಹೊಂದಿರಲಿದೆ. ಜೊತೆಗೆ ಮತ್ತೆರಡು ಆಯ್ಕೆ ಪಡೆದಿರಲಿದೆ. ಅವು ಕ್ರಮವಾಗಿ 6GB RAM ಮತ್ತು 128GB ಸ್ಟೋರೇಜ್ ಇದರ ಬೆಲೆ ಚೀನಾದಲ್ಲಿ CNY 2,499 (ಭಾರತದಲ್ಲಿ ಅಂದಾಜು 28,500ರೂ. ಎನ್ನಲಾಗಿದೆ). ಅದೇ ರೀತಿ 8GB + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 2,699 (ಭಾರತದಲ್ಲಿ ಅಂದಾಜು 30,700ರೂ.) ಆಗಿರಲಿದೆ.

Most Read Articles
Best Mobiles in India

English summary
Realme GT Neo 2 Price Leaked Online, Ahead Of Launch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X