ಸದ್ಯದಲ್ಲೇ ಲಾಂಚ್ ಆಗಲಿವೆ ರಿಯಲ್‌ಮಿ ನಾರ್ಜೊ 20 ಸ್ಮಾರ್ಟ್‌ಫೋನ್ ಸರಣಿ!

|

ಜನಪ್ರಿಯ ರಿಯಲ್‌ಮಿ ಕಂಪನಿಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರಿಯಲ್‌ಮಿ ನಾರ್ಜೊ 10 ಸ್ಮಾರ್ಟ್‌ಫೋನ್ ಸರಣಿ ಹೆಚ್ಚು ಆಕರ್ಷಣೆ ಪಡೆದಿದೆ. ಇದೀಗ ರಿಯಲ್‌ಮಿ ಸಂಸ್ಥೆಯು ನಾರ್ಜೊ 10 ಸರಣಿಯ ಮುಂದುವರೆದ ಭಾಗವಾಗಿ ರಿಯಲ್‌ಮಿ ನಾರ್ಜೊ 20 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ಸಕಲ ತಯಾರಿ ನಡೆಸುತ್ತಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪನಿಯು ನೂತನವಾಗಿ ರಿಯಲ್‌ಮಿ ನಾರ್ಜೊ 20 ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 21ರಂದು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ರಿಯಲ್‌ಮಿ ನಾರ್ಜೊ 20, ನಾರ್ಜೊ 20A ಮತ್ತು ನಾರ್ಜೊ 20 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಇನ್ನು ಈ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸೆನ್ಸಾರ್

ರಿಯಲ್‌ಮಿ ನಾರ್ಜೊ 20 ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ ಇನ್ನೊಂದು ಮಾಡೆಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪವರ್‌ ಬಟನ್‌ನಲ್ಲಿಯೇ ಇರಲಿದೆ. ಇನ್ನು ಈ ನಾರ್ಜೊ 20 ಸರಣಿಯು ಹಿಂಭಾಗದಲ್ಲಿ ಬಹು-ಕ್ಯಾಮೆರಾ ಸೆಟ್‌ಅಪ್‌ಗಳನ್ನು ಹೊಂದಿರುವ ಸಾಧ್ಯತೆಗಳು ಇದ್ದು, ಸ್ಕ್ವಾರಿಶ್ ಮತ್ತು ಸಿಲಿಂಡರಾಕಾರದ ವಿನ್ಯಾಸ ಪಡೆದಿರಲಿವೆ.

ಸ್ಮಾರ್ಟ್‌ಫೋನ್‌ಗಳು

ರಿಯಲ್‌ಮಿ ನಾರ್ಜೊ 20 ಸರಣಿ ಸ್ಮಾರ್ಟ್‌ಫೋನ್‌ಗಳು ನೂತನ ಆಂಡ್ರಾಯ್ಡ್ 11 ಓಎಸ್‌ ಆಧಾರಿತವಾಗಿರಲಿವೆ ಎನ್ನಲಾಗಿದೆ. ಇದಲ್ಲದೆ, ಈ ಎಲ್ಲಾ ಫೋನ್‌ಗಳು ತನ್ನ ವರ್ಗದಲ್ಲಿಯೇ ಅತ್ಯುತ್ತಮ ಗೇಮಿಂಗ್ ಪ್ರೊಸೆಸರ್ ಮತ್ತು ಟ್ರೆಂಡ್-ಸೆಟ್ಟಿಂಗ್ ವಿನ್ಯಾಸ ಹೊಂದಿರಲಿವೆ ಎನ್ನಲಾಗ್ತಿದೆ. ಇನ್ನು ರಿಯಲ್‌ಮಿ ನಾರ್ಜೊ 20 4GB + 64GB ಮತ್ತು 4GB + 128GB ಇರಲಿದೆ ಎಂದು ಹೇಳಲಾಗ್ತಿದೆ.

ವೇರಿಯಂಟ್

ಇನ್ನು ರಿಯಲ್‌ಮಿ ನಾರ್ಜೊ 20A ಫೋನ್ 3GB + 32GB ಹಾಗೂ 4GB + 64GB ಸ್ಟೋರೇಜ್ ವೇರಿಯಂಟ್ ಮಾದರಿಗಳ ಆಯ್ಕೆ ಹೊಂದಿರಲಿದೆ. ಅದೇ ರೀತಿ ರಿಯಲ್‌ಮಿ ನಾರ್ಜೊ 20 ಪ್ರೊ ಫೋನ್ 6GB + 64GB ಮತ್ತು 8GB + 128GB ಸ್ಟೋರೇಜ್ ವೇರಿಯಂಟ್ ಮಾದರಿಗಳನ್ನು ಒಳಗೊಂಡಿರಲಿದೆ. ನಾರ್ಜೊ 20 ಹಾಗು ನಾರ್ಜೊ 20A ಫೋನ್‌ಗಳು ಗ್ಲೋರಿ ಸಿಲ್ವರ್ ಮತ್ತು ವಿಕ್ಟರಿ ಬ್ಲೂ ಬಣ್ಣಗಳ ಆಯ್ಕೆ ಹೊಂದಿರಲಿದೆ. ಇನ್ನು ನಾರ್ಜೊ 20 ಪ್ರೊ ಬ್ಲ್ಯಾಕ್ ನಿಂಜಾ ಮತ್ತು ವೈಟ್ ನೈಟ್ ಬಣ್ಣಗಳಲ್ಲಿ ಬರಲಿದೆ ಎನ್ನಲಾಗ್ತಿದೆ.

Most Read Articles
Best Mobiles in India

English summary
Realme Narzo 20 series will launch in India on September 21.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X