ರಿಯಲ್‌ ಮಿ Q2 ಸ್ಮಾರ್ಟ್‌ಫೋನ್ ಸರಣಿಯ ಲಾಂಚ್!..ಫೀಚರ್ಸ್‌ ಏನು?

|

ರಿಯಲ್‌ ಮಿ ಮೊಬೈಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ರಿಯಲ್ ಮಿ Q2 ಸ್ಮಾರ್ಟ್‌ಫೋನ್ ಸರಣಿಯನ್ನು ಅನಾವರಣ ಮಾಡಿದೆ. ಈ ಸರಣಿಯು ರಿಯಲ್‌ಮಿ Q2, ರಿಯಲ್‌ಮಿ Q2 ಪ್ರೊ ಮತ್ತು ರಿಯಲ್‌ ಮಿ Q2i ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಹೈ ಕ್ಯಾಮೆರಾ ಸೆಟ್‌ಅಪ್‌ ಜೊತೆಗೆ ಭಿನ್ನ ಫೀಚರ್ಸ್‌ಗಳು ಹಾಗೂ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ.

ರಿಯಲ್ ಮಿ Q2

ಹೌದು, ರಿಯಲ್ ಮಿ ಕಂಪನಿಯು ರಿಯಲ್ ಮಿ Q2 ಸ್ಮಾರ್ಟ್‌ಫೋನ್ ಸರಣಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳು ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿವೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದರೇ ರಿಯಲ್ ಮಿ Q2 ಸ್ಮಾರ್ಟ್‌ಫೋನ್ ಸರಣಿಯ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್ ಮಿ Q2 - ಫೀಚರ್ಸ್‌

ರಿಯಲ್ ಮಿ Q2 - ಫೀಚರ್ಸ್‌

ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 90.7ಆಗಿದೆ. ಇನ್ನು ಈ ಫೋನ್ ಮೀಡಿಯಾಟೆಕ್‌ Dimensity 800U ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ ತ್ರಿವಳಿ ಕ್ಯಾಮೆರಾ ಹಾಗೂ 5,000mAh ಬ್ಯಾಟರಿ ಪಡೆದಿದೆ. ಬೇಸ್‌ ವೇರಿಯಂಟ್‌ ಬೆಲೆಯು CNY 1,299 (ಭಾರತದಲ್ಲಿ ಅಂದಾಜು 14,200ರೂ)

ರಿಯಲ್ ಮಿ Q2 ಪ್ರೊ - ಫೀಚರ್ಸ್‌

ರಿಯಲ್ ಮಿ Q2 ಪ್ರೊ - ಫೀಚರ್ಸ್‌

ರಿಯಲ್ ಮಿ Q2 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.5-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 120Hz ರೀಪ್ರೇಶ್ ರೇಟ್‌ ಅನ್ನು ಹೊಂದಿದೆ. ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 90.7ಆಗಿದೆ. ಇನ್ನು ಈ ಫೋನ್ ಮೀಡಿಯಾಟೆಕ್‌ Dimensity 800U ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ ತ್ರಿವಳಿ ಕ್ಯಾಮೆರಾ ಹಾಗೂ 4,300mAh ಬ್ಯಾಟರಿ ಪಡೆದಿದೆ. ಬೇಸ್‌ ವೇರಿಯಂಟ್‌ ದರದವು CNY 1,799 (ಭಾರತದಲ್ಲಿ ಅಂದಾಜು 19,600ರೂ)

ರಿಯಲ್ ಮಿ Q2i - ಫೀಚರ್ಸ್‌

ರಿಯಲ್ ಮಿ Q2i - ಫೀಚರ್ಸ್‌

ರಿಯಲ್ ಮಿ Q2i ಸ್ಮಾರ್ಟ್‌ಫೋನ್ 6.5-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 120Hz ರೀಪ್ರೇಶ್ ರೇಟ್‌ ಅನ್ನು ಹೊಂದಿದೆ. ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 88.7 ಆಗಿದೆ. ಇನ್ನು ಈ ಫೋನ್ ಮೀಡಿಯಾಟೆಕ್‌ Dimensity 720 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ ತ್ರಿವಳಿ ಕ್ಯಾಮೆರಾ ಹಾಗೂ 5,000mAh ಬ್ಯಾಟರಿ ಪಡೆದಿದೆ. ಬೇಸ್‌ ವೇರಿಯಂಟ್‌ ಬೆಲೆಯು CNY 1,199 (ಭಾರತದಲ್ಲಿ ಅಂದಾಜು. 13,000ರೂ)

Most Read Articles
Best Mobiles in India

English summary
Realme Q2 and the Realme Q2 Pro are powered by the MediaTek Dimensity 800U processor, while the Realme Q2i comes with the Dimensity 720 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X