ಭಾರತದಲ್ಲಿ ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್‌ ಲಾಂಚ್‌; ಬೆಲೆ ಜಸ್ಟ್‌ 799ರೂ!

|

ಸದ್ಯ ದಿನಬಳಕೆಯ ಅಗತ್ಯ ಡಿವೈಸ್‌ಗಳು ಸ್ಮಾರ್ಟ್‌ ಟಚ್‌ ಪಡೆದಿಯುತ್ತಿದ್ದು, ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಡುತ್ತಿವೆ. ಅವುಗಳ ಸ್ಮಾರ್ಟ್‌ ಪ್ಲಗ್‌ ಸಹ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ಸ್ಮಾರ್ಟ್‌ ಪ್ಲಗ್‌ಗಳು ಗ್ರಾಹಕರಿಗೆ ಪರಿಚಿತವಾಗಿವೆ. ರಿಯಲ್‌ ಮಿ ಸಂಸ್ಥೆಯು ಹೊಸದಾಗಿ ಸ್ಮಾರ್ಟ್‌ ಪ್ಲಗ್ ಅನ್ನು ಭಾರತೀಯ ಮಾರುಕಟ್ಟೆಗೆ ಈಗ ಪರಿಚಯಿಸಿದೆ.

ಭಾರತದಲ್ಲಿ ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್‌ ಲಾಂಚ್‌; ಬೆಲೆ ಜಸ್ಟ್‌ 799ರೂ!

ಹೌದು, ರಿಯಲ್‌ ಮಿ ಸಂಸ್ಥೆಯು ಸ್ಮಾರ್ಟ್‌ ಪ್ಲಗ್ ಡಿವೈಸ್‌ ಬಿಡುಗಡೆ ಮಾಡಿದ್ದು, ಈ ಡಿವೈಸ್‌ ವೈ-ಫೈ ನಿಯಂತ್ರಣ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್ ಪ್ಲಗ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ವಾಯಿಸ್‌ ಬೆಂಬಲದ ಸೌಲಭ್ಯವನ್ನು ಹೊಂದಿದೆ. ಬಳಕೆದಾರರು ಧ್ವನಿ ಆದೇಶಗಳ ಮೂಲಕ ಈ ಉಪಕರಣಗಳನ್ನು ನಿಯಂತ್ರಿಸಬಹುದಾಗಿದೆ. ಇನ್ನು ಈ ಪ್ಲಗ್ ಇದೇ ಅಕ್ಟೋಬರ್ 16ರಂದು ಮೊದಲ ಸೇಲ್ ಶುರು ಮಾಡಲಿದೆ.

ಭಾರತದಲ್ಲಿ ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್‌ ಲಾಂಚ್‌; ಬೆಲೆ ಜಸ್ಟ್‌ 799ರೂ!

ರಿಯಲ್‌ ಮಿ ಸ್ಮಾರ್ಟ್ ಪ್ಲಗ್ ಐದು ಪದರಗಳ ಸುರಕ್ಷತಾ ರಕ್ಷಣೆಯನ್ನು ಹೊಂದಿದೆ. ಇದು 100-250 ವಿ ವೈಡ್-ರೇಂಜ್ ಇನ್ಪುಟ್, ಮಕ್ಕಳಿಗೆ ಸುರಕ್ಷತಾ ಶಟರ್, 750c VO ಫ್ಲೇಮ್-ರಿಟಾರ್ಡೆಂಟ್, ಓವರ್‌ಹೀಟ್ ಪ್ರೊಟೆಕ್ಷನ್, ಮತ್ತು 2000V ಉಲ್ಬಣ ರಕ್ಷಣೆ ಹೊಂದಿದೆ. ಹಾಗೆಯೇ ರಿಯಲ್‌ ಮಿ ಸ್ಮಾರ್ಟ್ ಪ್ಲಗ್ ಅನ್ನು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ನಿಯಂತ್ರಿಸಬಹುದು. ಜೊತೆಗೆ ವೈ-ಫೈ ಮೂಲಕ ನಿಮ್ಮ ಸಾಂಪ್ರದಾಯಿಕ ಉಪಕರಣಗಳನ್ನು ನಿಯಂತ್ರಿಸಲು ರಿಯಲ್‌ ಮಿ ಲಿಂಕ್ ಅಪ್ಲಿಕೇಶನ್ ಅನ್ನು ಬಳಸಬಹುದು. (ಉದಾಹರಣೆಗೆ, ನಿಮ್ಮ ಮಲಗುವ ಕೋಣೆಯಲ್ಲಿದ್ದಾಗಲೂ ಇದನ್ನು ಬಳಸಿಕೊಂಡು ನೀವು ಕೋಣೆಯಲ್ಲಿನ ದೀಪಗಳನ್ನು ಆನ್ ಮಾಡಬಹುದು.)

ಭಾರತದಲ್ಲಿ ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್‌ ಲಾಂಚ್‌; ಬೆಲೆ ಜಸ್ಟ್‌ 799ರೂ!

ರಿಯಲ್‌ ಮಿ ಸ್ಮಾರ್ಟ್ ಪ್ಲಗ್ 6A ಗರಿಷ್ಠ ಪ್ರಸ್ತುತ ಉತ್ಪಾದನೆಯನ್ನು ಹೊಂದಿದೆ. ಇದು 2.4GHz ವೈ-ಫೈ 802.11 b / g / n ಅನ್ನು ಬಳಸುತ್ತದೆ. ಇದು 3-ಪಿನ್ ವಿನ್ಯಾಸವನ್ನು ಹೊಂದಿದೆ ಮತ್ತು 44.5 x 54.5 x 32 ಮಿಮೀ ಅಳತೆ ಹೊಂದಿದೆ ಮತ್ತು 74.6 ಗ್ರಾಂ ತೂಗುತ್ತದೆ. ಇನ್ನು ರಿಯಲ್‌ ಮಿ ಸ್ಮಾರ್ಟ್ ಪ್ಲಗ್ ಇದೇ ಅಕ್ಟೋಬರ್ 16 ರಂದು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಭಾರತದಲ್ಲಿ ಮಾರಾಟ ಆರಂಭಿಸಲಿದೆ. ಇದರ ಬೆಲೆ 799ರೂ, ಆಗಿದ್ದು ಬಿಳಿ ಬಣ್ಣದಲ್ಲಿ ಲಭ್ಯವಾಗಲಿದೆ.

ರಿಯಲ್‌ ಮಿ ಸ್ಮಾರ್ಟ್ ಪ್ಲಗ್ ಅನ್ನು ವಿದ್ಯುತ್ ಸಂಪರ್ಕದ ಮೂಲಕ ಕನೆಕ್ಟ್ ಮಾಡಬೇಕು. ಬೆಳಕು ಕೆಂಪು ಬ್ಲಿಂಕ್‌ ಆಗುವವರೆಗೂ ಸ್ವಿಚ್‌ ಬಟನ್‌ ಅನ್ನು ಕೆಲ ಸೆಕೆಂಡ್‌ ಒತ್ತಿ ಹಹಿಡಿದುಕೊಳ್ಳಿ. ನಿಮ್ಮ ಫೋನ್‌ನೊಂದಿಗೆ ಸ್ಮಾರ್ಟ್ ಪ್ಲಗ್ ಅನ್ನು ಸಂಪರ್ಕಿಸಲು ರಿಯಲ್‌ ಮಿ ಲಿಂಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಡಿವೈಸ್‌ ಅನ್ನು ಸೇರಿಸಿ. ರಿಯಲ್‌ಮಿ ಪ್ರಕಾರ ಈ ಪ್ರಕ್ರಿಯೆ ಸುಮಾರು 60 ಸೆಕೆಂಡುಗಳು ತೆಗೆದುಕೊಳ್ಳುತ್ತದೆ.

Most Read Articles
Best Mobiles in India

English summary
Realme Smart Plug will be available for purchase from October 16.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X