ಭಾರತದಲ್ಲಿ ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ಲಾಂಚ್‌ ಡೇಟ್‌ ಫಿಕ್ಸ್‌!

|

ಟೆಕ್‌ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನ ಭಿನ್ನ ಮಾದರಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇಯರ್‌ಬಡ್ಸ್‌ ವಲಯದಲ್ಲಿಯೂ ಕೂಡ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಇಯರ್‌ಬಡ್ಸ್‌ ಇದೇ ಆಗಸ್ಟ್‌ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಯಲ್‌ಮಿ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ಹೊಸ ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ಬಿಡುಗಡೆಗೆ ವೇದಿಕೆ ಸಿದ್ದಪಡಿಸಿದೆ. ಈ ಬಡ್ಸ್‌ 10 ಎಂಎಂ ಆಡಿಯೋ ಡೈನಾಮಿಕ್ ಡ್ರೈವರ್‌ ಹೊಂದಿದೆ ಎನ್ನಲಾಗಿದೆ. ಇದಲ್ಲದೆ ಈ ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 28 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ ಎಂದು ಹೇಳಲಾಗ್ತಿದೆ. ಇದು ಎರಡು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದರೆ ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇಯರ್‌ಬಡ್ಸ್‌

ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ಇಯರ್‌ಬಡ್ಸ್‌ 10mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ. ಈ ಬಡ್ಸ್‌ ದಕ್ಷತಾಶಾಸ್ತ್ರದ ವಿನ್ಯಾಸದೊಂದಿಗೆ ಬರಲಿದ್ದು, ಎರಡು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ, ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ನ ಬ್ಯಾಟರಿಯು ಕೇಸ್ ಜೊತೆಗೆ ಸಿಂಗಲ್‌ ಚಾರ್ಜ್‌ನಲ್ಲಿ 28 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನು ಅಧಿಕೃತವಾಗಿಲ್ಲ.

ರಿಯಲ್‌ಮಿ

ಇನ್ನು ರಿಯಲ್‌ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ ಮತ್ತು ರಿಯಲ್‌ಮಿ ಬಡ್ಸ್‌ ವೈರ್‌ಲೆಸ್ 2S ಇಯರ್‌ ಫೋನ್‌ ಅನ್ನು ಪರಿಚಯಿಸಿದೆ. ಇದರಲ್ಲಿ ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ ಇಯರ್‌ಬಡ್ಸ್ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸಲಿದೆ. ಇದನ್ನು ನೀವು ಆಪಲ್‌ ಮ್ಯೂಸಿಕ್‌ನಂತಹ ಅಪ್ಲಿಕೇಶನ್‌ಗಳೊಂದಿಗೆ ಬಳಸಬಹುದು. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಅನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ.

ವಾಯರ್‌ಲೆಸ್‌

ಇನ್ನು ರಿಯಲ್‌ಮಿ ಬಡ್ಸ್‌ ವಾಯರ್‌ಲೆಸ್‌ 2S ನೆಕ್‌ಬ್ಯಾಂಡ್‌ ಇಯರ್‌ ಫೋನ್‌ ಆಗಿದೆ. ಇದು ಬಡ್ಸ್ ವೈರ್‌ಲೆಸ್ 2 ನ ಟೋನ್-ಡೌನ್ ಆವೃತ್ತಿಯಾಗಿದೆ. ಈ ನೆಕ್‌ಬ್ಯಾಂಡ್ ENC ನೊಂದಿಗೆ ಬರುತ್ತದೆ. ಇನ್ನು ಈ ನೆಕ್‌ಬ್ಯಾಂಡ್ ತ್ವರಿತ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಸಿಂಗಲ್‌ ಚಾರ್ಜ್‌ನಲ್ಲಿ 24 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ ಎಂದು ಹೇಳಲಾಗಿದೆ. ಈ ನೆಕ್‌ಬ್ಯಾಂಡ್‌ ಭಾರತದಲ್ಲಿ 1,499ರೂ.ಬೆಲೆಯನ್ನು ಹೊಂದಿದೆ. ಆದರೆ ಪರಿಚಯಾತ್ಮಕ ಕೊಡುಗೆಯಾಗಿ 1,299ರತೂ.ಬೆಲೆಗೆ ದೊರೆಯಲಿದೆ.

ರಿಯಲ್‌ಮಿ

ಇದರೊಂದಿಗೆ ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ ವಾಚ್‌ 3 ಅನ್ನು ಕೂಡ ಪರಿಚಯಿಸಿತ್ತು. ಇದು ನಿಮ್ಮ ಮಣಿಕಟ್ಟಿನಲ್ಲಿರುವಾಗ ಸ್ಮಾರ್ಟ್‌ಫೋನ್‌ಗಾಗಿ ಹ್ಯಾಂಡ್ಸ್-ಫ್ರೀ ಸ್ಪೀಕರ್ ಡಿವೈಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.8 ಇಂಚಿನ TFT-LCD ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಅನ್ನು ರೇಟ್ ಮಾಡಿದೆ. ಅಲ್ಲದೆ ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್‌ ಟ್ರ್ಯಾಕಿಂಗ್‌ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ವರ್ಕೌಟ್‌ ಟ್ರ್ಯಾಕಿಂಗ್‌ಗಾಗಿ 110 ಕ್ಕೂ ಹೆಚ್ಚು ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದೆ. ಇದು 340mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಏಳು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ರಿಯಲ್‌ಮಿ ವಾಚ್‌ 3 ಭಾರತದಲ್ಲಿ 3,499ರೂ, ಬೆಲೆಯನ್ನು ಹೊಂದಿದೆ. ಆದರೆ ಇದರ ಲಾಂಚ್‌ ಆಫರ್‌ ಪ್ರಯುಕ್ತ ಇದನ್ನು ನೀವು ಕೇವಲ 2,999 ರೂ.ಗಳಿಗೆ ಖರೀದಿಸಬಹುದು.

Best Mobiles in India

Read more about:
English summary
Realme TechLife Buds T100 set to launch in India on August 18

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X