Just In
Don't Miss
- News
Breaking: ಚಿಕಾಗೋದಲ್ಲಿ ಗುಂಡಿನ ದಾಳಿಗೆ 6 ಸಾವು, 24 ಮಂದಿಗೆ ಗಾಯ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮಿಥುನ,ಕನ್ಯಾ, ತುಲಾ ರಾಶಿಯವರಿಗೆ ಹಣದ ಸ್ಥಾನ ಉತ್ತಮವಾಗಿದೆ
- Sports
ಈ ಮೂವರೇ ಮುಂದಿನ ಮೂರು ವರ್ಷ ಭಾರತದ ಟೆಸ್ಟ್ ತಂಡದ ಆಧಾರ ಸ್ತಂಭಗಳು
- Movies
ಚಾರ್ಲಿ ಪಾತ್ರದಲ್ಲಿ ನಟಿ ಅಮೃತಾ ರಾಮಮೂರ್ತಿ ಪುಟ್ಟ ಮಗು!
- Education
COMEDK Result 2022 : ಕಾಮೆಡ್ ಫಲಿತಾಂಶ ವೀಕ್ಷಿಸುವುದು ಹೇಗೆ ?
- Finance
ಜು.4ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ರಿಯಲ್ಮಿಯಿಂದ ಹೊಸ ಸ್ಮಾರ್ಟ್ವಾಚ್ ಬಿಡುಗಡೆ!..ಅಚ್ಚರಿಯ ಬ್ಯಾಟರಿ ಬ್ಯಾಕ್ಅಪ್!
ಟೆಕ್ ವಲಯದಲ್ಲಿ ಫೋನ್ ಸೇರಿದಂತೆ ಸ್ಮಾರ್ಟ್ ಗ್ಯಾಡ್ಜೆಟ್ಸ್ಗಳಿಂದ ಗುರುತಿಸಿಕೊಂಡಿರುವ ರಿಯಲ್ಮಿ (Realme) ಭಾರತದ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿದೆ. ರಿಯಲ್ಮಿ ಸಂಸ್ಥೆಯ ಫೋನ್ಗಳ ಜೊತೆಗೆ ಸ್ಮಾರ್ಟ್ವಾಚ್ಗಳು ಜನಪ್ರಿಯತೆ ಗಳಿಸಿವೆ. ಆ ಲಿಸ್ಟ್ಗೆ ರಿಯಲ್ಮಿ ಇದೀಗ ನೂತನವಾಗಿ ಮತ್ತೆ ಸ್ಮಾರ್ಟ್ವಾಚ್ ಉತ್ಪನ್ನವನ್ನು ಸೇರ್ಪಡೆ ಮಾಡಿದೆ. ಅದುವೇ ರಿಯಲ್ಮಿ ಟೆಕ್ಲೈಫ್ ವಾಚ್ R100 ಆಗಿವೆ.

ಹೌದು, ರಿಯಲ್ಮಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಹೊಸದಾಗಿ 'ರಿಯಲ್ಮಿ ಟೆಕ್ಲೈಫ್ ವಾಚ್ R100' ಹೆಸರಿನ ಸ್ಮಾರ್ಟ್ವಾಚ್ ಡಿವೈಸ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ಕೆಲವು ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 100+ ಅಧಿಕ ವಾಚ್ ಫೇಸ್ ಹಾಗೂ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್ಅಪ್ ಸೌಲಭ್ಯ ಫೀಚರ್ಸ್ಗಳು ಹೆಚ್ಚು ಗಮನ ಸೆಳೆಯುತ್ತವೆ.

ಹಾಗೆಯೇ ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ ಸಾಧನವು 100ಕ್ಕೂ ಅಧಿಕ ಕ್ರೀಡಾ ವಿಧಾನಗಳ ಆಯ್ಕೆ ಹೊಂದಿದೆ. ಇನ್ನು ಈ ರಿಯಲ್ಮಿ ಟೆಕ್ಲೈಫ್ ವಾಚ್ R100 ಪ್ರಮುಖ ಆರೋಗ್ಯ ಮಾನಿಟರ್ಗಳನ್ನು ಹೊಂದಿದೆ. ಈ ಹೊಸ ಸ್ಮಾರ್ಟ್ ವಾಚ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಅವುಗಳು ಕ್ರಮವಾಗಿ ಕಪ್ಪು ಮತ್ತು ಬೂದು ಆಗಿವೆ. ಹಾಗಾದರೇ ಇನ್ನುಳಿದಂತೆ ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ನ ಇತರೆ ಫೀಚರ್ಸ್ಗಳು ಏನು? ಇದರ ಬೆಲೆ ಎಷ್ಟು ಹಾಗೂ ಲಭ್ಯತೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್ಪ್ಲೇ ಮತ್ತು ರಚನೆ
ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ ಸುತ್ತಿನ ಅಲ್ಯೂಮಿನಿಯಂ ಡಯಲ್ ಅನ್ನು ಹೊಂದಿದ್ದು, ಇದು ವೃತ್ತಾಕಾರದ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಸಾಧನವು 360 x 360 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 1.32 ಇಂಚಿನ TFT ಕಲರ್ ಡಿಸ್ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಡಿಸ್ಪ್ಲೇಯು ಗರಿಷ್ಠ ಹೊಳಪನ್ನು 450 ನಿಟ್ಸ್ ಎಂದು ಅಳೆಯಲಾಗುತ್ತದೆ.

ಪ್ರಮುಖ ಫೀಚರ್ಸ್ಗಳು
ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ ಪ್ರಮುಖ ಆರೋಗ್ಯ ಮಾನಿಟರ್ಗಳನ್ನು ಹೊಂದಿದೆ. ಇದು ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕ ಸಂವೇದಕ ಸೌಲಭ್ಯ ಪಡೆದಿದೆ. ಅಪ್ಲಿಕೇಶನ್ ಅಧಿಸೂಚನೆಗಳನ್ನು ಸ್ವೀಕರಿಸಲು ಮತ್ತು ಹೆಚ್ಚಿನ ಫೀಚರ್ಸ್ಗಳನ್ನು ಪಡೆಯಲು ಬಳಕೆದಾರರು (Realme Wear) ರಿಯಲ್ಮಿ ವೇರ್ ಅಪ್ಲಿಕೇಶನ್ ಮೂಲಕ ತಮ್ಮ ಸ್ಮಾರ್ಟ್ಫೋನ್ಗಳಿಗೆ ಸ್ಮಾರ್ಟ್ ವಾಚ್ ಅನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು.

ಹಾಗೆಯೇ ಬಳಕೆದಾರರನ್ನು ಮನರಂಜಿಸಲು, ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ 100ಕ್ಕೂ ಅಧಕ ವಿಭಿನ್ನ ವಾಚ್ ಫೇಸ್ಗಳನ್ನು ಒಳಗೊಂಡಿದೆ. ಜೊತೆಗೆ ನೈಜ ಸಮಯದಲ್ಲಿ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 100+ ಸ್ಪೋರ್ಟ್ಸ್ ಮೋಡ್ಗಳನ್ನು ಹೊಂದಿದೆ. ಸ್ಮಾರ್ಟ್ವಾಚ್ ಬ್ಲೂಟೂತ್ ಕರೆ ಮಾಡುವ ಕಾರ್ಯವನ್ನು ಸಹ ಹೊಂದಿದ್ದು, ಇದು ಕರೆಗಳನ್ನು ಸ್ವೀಕರಿಸಲು ಮತ್ತು ಉತ್ತರಿಸಲು ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಬಳಸಿಕೊಳ್ಳುತ್ತದೆ.

ಬ್ಯಾಟರಿ ಬ್ಯಾಕ್ಅಪ್ ಸಾಮರ್ಥ್ಯ
ರಿಯಲ್ಮಿ ಟೆಕ್ಲೈಫ್ ವಾಚ್ R100 ಸ್ಮಾರ್ಟ್ ವಾಚ್ 380mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದು ಒಂದೇ ಚಾರ್ಜ್ನಲ್ಲಿ 7 ದಿನಗಳವರೆಗೆ ಬ್ಯಾಕ್ಅಪ್ ಒದಗಿಸುತ್ತದೆ ಎಂದು ರಿಯಲ್ಮಿ ಹೇಳುತ್ತದೆ. ಈ ವಾಚ್ ಅನ್ನು ಸುಮಾರು 2 ಗಂಟೆಗಳಲ್ಲಿ 0 ರಿಂದ 100% ವರೆಗೆ ರೀಚಾರ್ಜ್ ಮಾಡಬಹುದು. ವಾಚ್ನ ಪಟ್ಟಿಯು ಸಿಲಿಕೋನ್ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು 46 ಗ್ರಾಂ ತೂಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?
ರಿಯಲ್ಮಿ ಟೆಕ್ಲೈಫ್ ವಾಚ್ R100 (Realme Techlife Watch R100) ಸ್ಮಾರ್ಟ್ವಾಚ್ನ ಬೆಲೆ 3,999 ರೂ. ಆಗಿದೆ. ಇದೇ 28 ಜೂನ್ 2022 ರಿಂದ ರಿಯಲ್ಮಿ ಅಧಿಕೃತ ಆನ್ಲೈನ್ ಮತ್ತು ಆಫ್ಲೈನ್ ರಿಟೇಲ್ ಸ್ಟೋರ್ಗಳಲ್ಲಿ ಹಾಗೂ ಫ್ಲಿಪ್ಕಾರ್ಟ್ ಜೊತೆಗೆ ಇತರೆ ಮುಖ್ಯ ಚಾನಲ್ಗಳ ಮೂಲಕ ಮಧ್ಯಾಹ್ನ 12 ರಿಂದ ಖರೀದಿಗೆ ಲಭ್ಯ ಆಗಲಿದೆ. ಆಸಕ್ತ ಗ್ರಾಹಕರು ಜೂನ್ 28 ರಂದು 3,499 ರೂ. ಗಳ ವಿಶೇಷ ಬೆಲೆಯಲ್ಲಿ ಸ್ಮಾರ್ಟ್ ವಾಚ್ ಅನ್ನು ಪಡೆಯಬಹುದು. ಇನ್ನು ಈ ಸ್ಮಾರ್ಟ್ ವಾಚ್ ಎರಡು ಬಣ್ಣ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕಪ್ಪು ಮತ್ತು ಬೂದು ಆಗಿವೆ. ಇತರೆ ಕೆಲವು ಜನಪ್ರಿಯ ಸ್ಮಾರ್ಟ್ವಾಚ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ವಾಚ್ ಸ್ಮಾರ್ಟ್ವಾಚ್
ಒಪ್ಪೋ ಕಂಪೆನಿಯ ಒಪ್ಪೋ ವಾಚ್ 15,000ರೂ. ಒಳಗಿನ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ವಾಚ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ವಾಚ್ ಆಪಲ್ ವಾಚ್ ಮಾದರಿಯನ್ನು ಹೊಂದಿರುವುದರಿಂದ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಡಿವೈಸ್ ಅಲ್ಯೂಮಿನಿಯಂ ಕೇಸ್ ಮತ್ತು ಕರ್ವ್ಡ್ ಸ್ಕ್ರೀನ್ ರಚನೆ ಇದ್ದು, ಬಳಕೆದಾರರು ಪ್ರೀಮಿಯಂ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್ವಾಚ್ ಕೂಡ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ನಿದ್ರೆ ಟ್ರ್ಯಾಕಿಂಗ್ನಂತಹ ಫೀಚರ್ಸ್ಗಳನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರು ಫಿಟ್ನೆಸ್ ರನ್, ಫ್ಯಾಟ್ ಬರ್ನ್ ರನ್, ಔಟ್ಸೈಡ್ ಸೈಕ್ಲಿಂಗ್ ಅಥವಾ ಈಜು ಮುಂತಾದ ಕ್ರೀಡಾ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಅಮಾಜ್ಫಿಟ್ GTS 2 ಸ್ಮಾರ್ಟ್ವಾಚ್
ಅಮಾಜ್ಫಿಟ್ GTS 2 ಸ್ಮಾರ್ಟ್ವಾಚ್ 1.65 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್ವಾಚ್ ರನ್ನಿಂಗ್, ಸೈಕ್ಲಿಂಗ್ ಮತ್ತು ತೆರೆದ ನೀರಿನ ಈಜು ಮುಂತಾದ ಹೊರಾಂಗಣ ಆಕ್ಟಿವಿಟಿಗಳನ್ನು ಪತ್ತೆಹಚ್ಚಲು ಇಂಟರ್ಬಿಲ್ಟ್ GPS ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ವಾಚ್ ಬಯೋ ಟ್ರ್ಯಾಕರ್ 2 PPG ಆಪ್ಟಿಕಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಇದು ಹಾಟ್ಬೀಟ್ ಅನ್ನು ಕೂಡ ಮೇಲ್ವಿಚಾರಣೆ ಮಾಡಲಿದೆ. ಇದಲ್ಲದೆ, ಒಬ್ಬರು ನಿದ್ರೆಯನ್ನು ಟ್ರ್ಯಾಕ್ ಮಾಡಲು ಸಹ ಸಾಧ್ಯವಾಗುತ್ತದೆ. ಈ ಸ್ಮಾರ್ಟ್ವಾಚ್ 90+ ಸ್ಪೋರ್ಟ್ಸ್ ವಿಧಾನಗಳನ್ನು ವಾಚ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086