ಶಿಯೋಮಿಗೆ ರಿಯಲ್‌ಮಿಯಿಂದ ಮತ್ತೊಂದು ಹೊಡೆತ..! ಫೋನ್‌ನಿಂದ ಟಿವಿಗೂ ಸ್ಪರ್ಧೆ ಕಂಟಿನ್ಯೂ..!

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ನೆಲೆ ಕಂಡುಕೊಂಡಿರುವ ರಿಯಲ್‌ಮಿ ಭಾರತದ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೂ ಕಾಲಿಡಲು ಪ್ರಯತ್ನಿಸುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವ ನಿಟ್ಟನಿನಲ್ಲಿ ರಿಯಲ್‌ಮಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ದೊರೆತಿದೆ.

ಶಿಯೋಮಿಗೆ ರಿಯಲ್‌ಮಿಯಿಂದ ಮತ್ತೊಂದು ಹೊಡೆತ! ಫೋನ್‌ನಿಂದ ಟಿವಿಗೂ ಸ್ಪರ್ಧೆ

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಜೊತೆ ಸ್ಪರ್ಧೆ ನಡೆಸುತ್ತಿರುವ ರಿಯಲ್‌ಮಿ ಸ್ಪರ್ಧೆಯನ್ನು ಸ್ಮಾರ್ಟ್‌ ಟಿವಿ ಕ್ಷೇತ್ರಕ್ಕೂ ತೆಗೆದುಕೊಂಡು ಹೋಗುತ್ತಿದೆ. ಶಿಯೋಮಿಯ Mi ಟಿವಿಗಳು ಸಾಕಷ್ಟು ಪೋರ್ಟ್‌ಫೊಲಿಯೋವನ್ನು ಹೊಂದಿದ್ದು, 32 ಇಂಚಿನ ಬಜೆಟ್‌ ಸ್ಮಾರ್ಟ್‌ ಟಿವಿಗಳ ಮಾದರಿಯಿಂದ ಪ್ರಾರಂಭವಾಗಿ 65 ಇಂಚಿನ ಗಾತ್ರದ ದೊಡ್ಡದಾದ ಪ್ರೀಮಿಯಂ ಸ್ಮಾರ್ಟ್ ಟಿವಿಗಳನ್ನು ಮಾರುಕಟ್ಟೆಗೆ ಶಿಯೋಮಿ ಬಿಟ್ಟಿದೆ. ರಿಯಲ್‌ಮಿ ಸ್ಮಾರ್ಟ್‌ ಟಿವಿಯ ಪರದೆಯ ಗಾತ್ರ ಎಷ್ಟೆಂದು ಬಹಿರಂಗವಾಗದಿದ್ದರೂ ಸ್ಮಾರ್ಟ್‌ಫೋನ್‌ಗಳಂತೆಯೇ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ ಟಿವಿಗಳು ಗ್ರಾಹಕರಿಗೆ ಸಿಗಲಿವೆ ಎಂಬ ನಿರೀಕ್ಷೆಯಿದೆ.

ಯಶಸ್ವಿ ಬ್ರಾಂಡ್‌

ರಿಯಲ್‌ಮಿ ತನ್ನ ಸ್ಮಾರ್ಟ್‌ಫೋನ್ ಮತ್ತು ಪರಿಕರಗಳ ವಿಭಾಗದಲ್ಲಿ ಯಶಸ್ವಿ ಬ್ರಾಂಡ್‌ ಎನಿಸಿಕೊಂಡಿದ್ದು, ಸ್ಮಾರ್ಟ್ ಟಿವಿಗಳ ಮೂಲಕವೂ ಬ್ರಾಂಡ್‌ ಯಶೋಗಾಥೆಯನ್ನು ಮುಂದುವರಿಸುವದನ್ನು ಎದುರು ನೋಡುತ್ತಿದೆ. ಈ ಸಮಯದಲ್ಲಿ ಸ್ಮಾರ್ಟ್‌ ಟಿವಿಯ ಫೀಚರ್ಸ್‌ ಹಾಗೂ ವಿಶೇಷಣಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ, ಹೊಸ ಸ್ಮಾರ್ಟ್‌ ಟಿವಿಯ ಬಗ್ಗೆ ಕಂಪನಿಯು ಈ ವರ್ಷಾಂತ್ಯದೊಳಗೆ ಪ್ರಕಟಿಸುವ ಸಾಧ್ಯತೆಯಿದ್ದು, ವರ್ಷಾಂತ್ಯಕ್ಕೆ ಭಾರತೀಯ ಮನೆಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

XT 730G ಜೊತೆ ಸ್ಮಾರ್ಟ್‌ ಟಿವಿ

ಒಂದು ಅಂದಾಜಿನ ಪ್ರಕಾರ ಹೊಸ ಸ್ಮಾರ್ಟ್‌ ಟಿವಿಯನ್ನು ರಿಯಲ್‌ಮಿ XT 730G ಜೊತೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ರಿಯಲ್‌ಮಿ XT 730G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ರಿಯಲ್‌ಮಿ XT 730G ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ರಿಯಲ್‌ಮಿ XT ಗಿಂತ ಉತ್ತಮವಾದ ಆವೃತ್ತಿಯಾಗಿದ್ದು, 64 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಮತ್ತು ಸ್ನಾಪ್‌ಡ್ರಾಗನ್ 712 ಮೊಬೈಲ್ ಪ್ಲಾಟ್‌ಫಾರ್ಮ್ ಹೊಂದಿರಲಿದೆ.

XT 730G ಫೀಚರ್ಸ್‌

ಹೊಸದ ರಿಯಲ್‌ಮಿ XT 730G ಕ್ಯಾಮೆರಾ ಸೆಟಪ್‌ XT ಆವೃತ್ತಿಯಂತೆಯೇ ಇರಲಿದೆ. ಆದರೆ, ಸ್ನಾಪ್‌ಡ್ರಾಗನ್ 730ಜಿ ಗೇಮಿಂಗ್ ಚಿಪ್‌ಸೆಟ್ ಹೊಂದುವ ಮೂಲಕ ಉತ್ಕೃಷ್ಟ ಕಾರ್ಯನಿರ್ವಹಣೆಯ ಅನುಭವವನ್ನು ನೀಡಲಿದೆ. ಹೈಪರ್‌ಬೋಲಾ 3ಡಿ ಗ್ಲಾಸ್ ವಿನ್ಯಾಸ, ಸುರಕ್ಷತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಸೂಪರ್ AMOLED ಡಿಸ್‌ಪ್ಲೇ ಇದೆ. ಹಾಗೂ 30W ವಿಒಸಿ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 4,000 ಎಮ್ಎಹೆಚ್ ಬ್ಯಾಟರಿಯನ್ನು ರಿಯಲ್‌ಮಿ XT 730G ಹೊಂದಿರುತ್ತದೆ.

ಬೆಲೆ ಎಷ್ಟು..?

ರಿಯಲ್‌ಮಿ XT 730Gಯ ಆರಂಭಿಕ ಆವೃತ್ತಿಯ ಬೆಲೆ ಸುಮಾರು 20,000 ರಿಂದ 25,000 ರೂ. ಆಗಿರುವ ಸಾಧ್ಯತೆಯಿದೆ. ಸಾಮಾನ್ಯ ರಿಯಲ್‌ಮಿ XT ಸ್ಮಾರ್ಟ್‌ಫೋನ್‌ನ 4 ಜಿಬಿ RAM ಆವೃತ್ತಿಗೆ 15,999 ರೂ. ಬೆಲೆಯಿದೆ. ಇವೆಲ್ಲದರ ಮಧ್ಯೆಯೇ ರಿಯಲ್‌ಮಿ ಅಕ್ಟೋಬರ್ 15 ರಂದು ಚೀನಾದಲ್ಲಿ ಸ್ನಾಪ್‌ಡ್ರಾಗನ್ 855 ಪ್ಲಸ್ SoC ಮತ್ತು 90Hz ರಿಫ್ರೆಶ್ ರೇಟ್‌ ಹೊಂದಿರುವ ಪ್ರಮುಖ ಸ್ಮಾರ್ಟ್‌ಫೋನ್‌ ರಿಯಲ್‌ಮಿ X2 Pro ಬಿಡುಗಡೆ ಮಾಡಲು ಸಜ್ಜಾಗಿದೆ.

Kannada Gizbot - Page Not Found
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more

English summary
Realme To Launch Its Own TV Lineup In India By December 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more