Just In
Don't Miss
- News
ಹರ್ಯಾಣಾದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
- Movies
'ಮನೆ ಮಾರಾಟಕ್ಕಿಟ್ಟ' ನಿರ್ದೇಶಕನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಸಿನಿಮಾ.!
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಇಂದು ಭಾರತಕ್ಕೆ ಎಂಟ್ರಿ ಕೊಡಲಿದೆ ದೈತ್ಯ 'ರಿಯಲ್ ಮಿ ಎಕ್ಸ್2 ಪ್ರೊ'!
ಚೀನಾ ಮೂಲದ 'ರಿಯಲ್ ಮಿ' ಸಂಸ್ಥೆಯ ಬಹುನಿರೀಕ್ಷಿತ 'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಇಂದು ಭಾರತಕ್ಕೆ ಅಧಕೃತವಾಗಿ ಎಂಟ್ರಿ ಕೊಡಲಿದೆ. ಈಗಾಗಲೇ ಸ್ಮಾರ್ಟ್ಫೋನ್ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಸ್ಮಾರ್ಟ್ಫೋನ್ 64ಎಂಪಿ ಕ್ಯಾಮೆರಾ, ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್, ಫಾಸ್ಟ್ ಚಾರ್ಜರ್ ವಿಶೇಷತೆಗಳಿಂದ ಮಾರುಕಟ್ಟೆಯಲ್ಲಿ ಮಿಂಚುವ ಸೂಚನೆಗಳನ್ನು ಹೊರಹಾಕಿದೆ.

ಹೌದು, 'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ದೇಶಿಯ ಮಾರುಕಟ್ಟೆಗೆ ಇಂದು (ನವೆಂಬರ್ 20) ಬಿಡುಗಡೆ ಆಗಲಿದೆ. ಈ ಸ್ಮಾರ್ಟ್ಫೋನ್ ಇತ್ತೀಚಿಗೆ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿತ್ತು. ಈ ಸ್ಮಾರ್ಟ್ಫೋನ್ VOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಸೂಪರ್ AMOLED ಡಿಸ್ಪ್ಲೇ ಮಾದರಿಯನ್ನು ಹೊಂದಿದೆ. 6GB + 64GB, 8GB + 128GB ಮತ್ತು 12GB + 256GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ ರಿಯಲ್ ಮಿ ಸಂಸ್ಥೆಯ 'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಇತರೆ ಯಾವೆಲ್ಲಾ ಫೀಚರ್ಸ್ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ಡಿಸೈನ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇ ಯನ್ನು ಹೊಂದಿದೆ. 20:9 ಅನುಪಾತದಲ್ಲಿರುವ ಡಿಸ್ಪ್ಲೇಯು ಸೂಪರ್ AMOLED ಮಾದರಿಯನ್ನು ಪಡೆದಿದೆ. ಡಿಸ್ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು 91.7% ಆಗಿದೆ. ಡಿಸ್ಪ್ಲೇ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಸಪೋರ್ಟ್ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್ಫೋನ್ 6GB + 64GB, 8GB + 128GB ಮತ್ತು 12GB + 256GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸ್ಪೆಷಲ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್ನಲ್ಲಿದ್ದು, ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್ನ ಸಾಮರ್ಥ್ಯದಲ್ಲಿದೆ. ಇನ್ನು ನಾಲ್ಕನೇ ಕ್ಯಾಮೆರಾವು 2ಎಂಪಿಯ ಸೆನ್ಸಾರ್ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಆಗಿದ್ದು, ಸೋನಿಯ IMX471 ಕ್ಯಾಮೆರಾ ಸೆನ್ಸಾರ್ ಪಡೆದಿದೆ.

ಬ್ಯಾಟರಿ ಪವರ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 50W ಸೂಪರ್ VOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಕೇವಲ 33 ನಿಮಿಷದಲ್ಲಿ ಫೋನ್ ಪೂರ್ಣ ಚಾರ್ಜ್ ಪಡೆದುಕೊಳ್ಳುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಹಾಗೆಯೇ ಬ್ಲೂಟೂತ್, ವೈಫೈ, ಜಿಎಸ್ಪಿ, ಸೇರಿದಂತೆ ಅಗತ್ಯ ಫೀಚರ್ಸ್ಗಳನ್ನು ಹೊಂದಿದೆ.

ಬೆಲೆ ಎಷ್ಟು
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಒಟ್ಟು ಮೂರು ವೇರಿಯಂಟ್ಗಳನ್ನು ಹೊಂದಿದ್ದು, 6GB RAM + 64GB ವೇರಿಯಂಟ್ ಬೆಲೆಯು 27,200ರೂ.ಗಳಾಗಿರಲಿದೆ ಎಂದು ಊಹಿಸಲಾಗಿದೆ. ಹಾಗೆಯೇ 12GB RAM + 256GB ಸಾಮರ್ಥ್ಯದ ಟಾಪ್ ವೇರಿಯಂಟ್ ಬೆಲೆಯು 33,200ರೂ.ಗಳು ಆಗಿರಲಿದೆ ಎಂದು ಅಂದಾಜಿಸಲಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090