ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಐಟಿ ಕ್ಷೇತ್ರಗಳಿವು

By Ashwath
|

ಮೂರು ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವ ಆರ್ಥಿಕ ಹಿಂಜರಿತದಿಂದ ತತ್ತರಿಸಿತ್ತು. ಈ ಸಂದರ್ಭದಲ್ಲಿ ಹೆಚ್ಚು ಪೆಟ್ಟು ಬಿದ್ದದ್ದು ಐಟಿ ವಲಯದ ಕ್ಷೇತ್ರಗಳಿಗೆ. ಅನೇಕ ಟೆಕ್‌ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕಂಪೆನಿಯಂದಲೇ ಗೇಟ್‌ಪಾಸ್ ನೀಡಿದ್ದವು. ಈ ಆರ್ಥಿಕ ಹಿಂಜರಿತದಿಂದಾಗಿ ಅನೇಕ ಸಾಫ್ಟ್‌ವೇರ್‌ ಮಂದಿಗಳು ಉದ್ಯೋಗ ಕಳೆದುಕೊಳ್ಳಬೇಕಾತು. ಆದ್ರೆ ಕೆಲವೊಂದು ಐಟಿ ಕ್ಷೇತ್ರದ ಉದ್ಯೋಗಗಳಿಗೆ ಈ ಆರ್ಥಿಕ ಹಿಂಜರಿತ ಕಾಟ ತಟ್ಟುವುದೇ ಇಲ್ಲ. ಹಾಗಾದ್ರೆ ಐಟಿ ಕ್ಷೇತ್ರದ ಆ ಉದ್ಯೋಗಗಳು ಯಾವುದು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಈಗಂತೂ ಮೊಬೈಲ್‌ ಅಪ್ಲಿಕೇಶನ್‌ ತುಂಬಾ ವೇಗವಾಗಿ ಬೆಳೆಯುತ್ತಿದೆ. ಜಾವ ತಿಳಿದಿರುವ ಸಾಫ್ಟ್‌ವೇರ್‌ ಡೆವಲಪರ್‌ಗಳಿಗೆ ಬೇಡಿಕೆ ಇದ್ದೇ ಇದೆ. ಅಮೆರಿಕದಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ 58 ಸಾವಿರದಿಂದ 95 ಸಾವಿರ ಡಾಲರ್‌ ವಾರ್ಷಿಕವಾಗಿ ಸಂಪಾದನೆ ಮಾಡಬಹುದು.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಕಂಪೆನಿಯ ಎಲ್ಲಾ ಸಾಫ್ಟ್‌ವೇರ್ ಮಾಹಿತಿಗಳನ್ನು ನೋಡಿಕೊಳ್ಳಲು ಮತ್ತು ಯಾವುದೇ ಸಮಸ್ಯೆ ಬಂದರೆ ಪರಿಹಾರ ಮಾಡುವ ಸಾಮರ್ಥ್ಯ ಐಟಿ ವಿಶ್ಲೇಷಕರಿಗೆ ಇರಬೇಕಾಗುತ್ತದೆ. ಕನಿಷ್ಟ ನಾಲ್ಕು ವರ್ಷ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪಳಗಿದವರಿಗೆ ಈ ಹುದ್ದೆ ಸಿಗುತ್ತದೆ.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಐಟಿ ಕಂಪೆನಿಗಳು ಬೇರೆ ಬೇರೆ ಕಂಪೆನಿಗಳಿಗೆ ಸಾಫ್ಟ್‌ವೇರ್‌ ತಯಾರಿಸುತ್ತದೆ. ಹಾಗಾಗಿ ಸಾಫ್ಟ್‌ವೇರ್‌ನ್ನು ತಯಾರಿಸಲು ಒರ್ವ ಮುಖ್ಯಸ್ಥನಿಗೆ ಈ ಜವಾಬ್ದಾರಿ ನೀಡುತ್ತಾರೆ. ಈ ಜವಾಬ್ದಾರಿ ತೆಗೆದುಕೊಳ್ಳಯವ ವ್ಯಕ್ತಿಯೇ ಯೋಜನಾ ವ್ಯವಸ್ಥಾಪಕ. ನಿಗದಿತ ಸಮಯದೊಳಗೆ ತನಗೆ ನೀಡಿದ ಕೆಲಸವನ್ನು ತನ್ನ ಉಳಿದ ಸಹದ್ಯೋಗಿಗಳ ಜೊತೆ ಸೇರಿ ಕಂಪೆನಿ ಸಲ್ಲಿಸುವ ಮಹಾನ್‌ ಜವಾಬ್ದಾರಿ ಯೋಜನಾ ವ್ಯವಸ್ಥಾಪಕರಿಗೆ ಇರುತ್ತದೆ.ಅಮೆರಿಕದಲ್ಲಿ ಯೋಜನಾ ವ್ಯವಸ್ಥಾಪಕನ ಸಂಬಳ ಸಾಧಾರಣ 75 ಸಾವಿರ ಡಾಲರ್‌ನಿಂದ ಹಿಡಿದು ಒಂದು ಲಕ್ಷ ಡಾಲರ್‌ವರೆಗೆ ಇರುತ್ತದೆ.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಇಂದು ಯಾವುದೇ ಕ್ಷೇತ್ರ ತೆಗೆದುಕೊಂಡರು ಕಂಪ್ಯೂಟರ್‌ ಅಗತ್ಯ ಬೇಕೇ ಬೇಕು. ಹೀಗಾಗಿ ಎಲ್ಲಾ ಕಂಪೆನಿಗಳಲ್ಲಿ ಟೆಕ್ನಿಕಲ್‌ ಟೀಂ ಇದ್ದೇ ಇರುತ್ತದೆ. ಕಂಪ್ಯೂಟರ್‌ ಸಮಸ್ಯೆ,ಸರ್ವರ್‌ ಸಮಸ್ಯೆ.ಈ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡುವುದು ಟೆಕ್ನಿಕಲ್‌ ಸಪೋರ್ಟ್‌ ಟೀಂ ನ ಕೆಲಸ.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಕಂಪ್ಯೂಟರ್‌, ನೆಟ್‌ವರ್ಕಿಂಗ್‌ ಜೊತೆಗೆ DOS ವಿಷಯಗಳ ಪರಿಣಿತರಾಗಿರುವ ಇಂಜಿನಿಯರ್‌ಗಳು ಸಿಸ್ಟಂ ನಿರ್ವಾಹಕರಾಗಬಹದು.ಜೊತೆಗೆ ಸಮಸ್ಯೆ ಸೃಷ್ಠಿಯಾದಾಗ ಸುಲಭವಾಗಿ ಅದನ್ನು ನಿರ್ವಹಣೆ ಮಾಡಿ ನಿವಾರಣೆ ಮಾಡುವ ಸಾಮರ್ಥ್ಯವಿರುವ ಇಂಜಿನಿಯರ್‌ಗಳು ಸಿಸ್ಟಂ ನಿರ್ವಾಹಕರಾಗಬಹುದು.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಈಗ ಲ್ಯಾಪ್‌ಟಾಪ್‌,ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ ಹೆಚ್ಚು ಹೆಚ್ಚಾಗಿ ಆನ್‌ಲೈನ್‌ನಲ್ಲೇ ವ್ಯವಹಾರ ನಡೆಯುತ್ತಿರುತ್ತದೆ. ಹೀಗಾಗಿ ಟೆಕ್‌ ಜ್ಞಾನ ಮತ್ತು ವ್ಯವಹಾರ ಜ್ಞಾನವಿರುವ ಕೌಶಲ್ಯವುಳ್ಳ ವ್ಯಕ್ತಿಗಳು ನೆಟ್‌ವರ್ಕ್ ನಿರ್ವಾಹಕರಾಗಬಹುದು.

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಕ್ಷೇತ್ರಗಳಿವು

ದತ್ತಾಂಶಗಳನ್ನು ಶೇಖರಣೆ ಮಾಡುವುದು ಇಂದು ದೊಡ್ಡ ಕಷ್ಟದ ಕೆಲಸ. ಹಾಗಾಗಿ ಇಂದು ಅನೇಕ ಕಂಪೆನಿಗಳು ತಮ್ಮ ದಾಖಲೆಗಳ ರಕ್ಷಣೆಯ ಜವಾಬ್ದಾರಿಯನ್ನು ಬೇರೆ ಸಂಸ್ಥೆಗಳಲ್ಲಿ ವಹಿಸಿಕೊಡುತ್ತಿವೆ.ಈ ರೀತಿಯ ಕ್ಲೌಡ್ ಕಂಪ್ಯೂಟಿಂಗ್‌ ನಿರ್ವಾಹಣೆ ಮಾಡಲು ಡೇಟಾಬೇಸ್ ನಿರ್ವಾಹಕರ ಅಗತ್ಯವಿದೆ.ದತ್ತಾಂಶಗಳು ಶೇಖರಣೆ ಮತ್ತು ದತ್ತಾಂಶಗಳು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗೆ ಮಹಿತಿ ಸಿಗುವಂತೆ ದತ್ತಾಂಶಗಳನ್ನು ಜೋಡಿಸುವ ಸಾಮರ್ಥ್ಯವುಳ್ಳವರು ಡೇಟಾಬೇಸ್‌ ನಿರ್ವಾಹಕರಾಗಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X