Just In
- 25 min ago
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- 2 hrs ago
ರಿಯಲ್ಮಿ ಕಂಪೆನಿಯಿಂದ ಮೊದಲ ಪ್ರೀಮಿಯಂ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ!
- 3 hrs ago
ಭಾರತದ ಅತಿದೊಡ್ಡ ಡ್ರೋನ್ ಫೆಸ್ಟಿವಲ್ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
- 4 hrs ago
ಏರ್ಟೆಲ್ ಗ್ರಾಹಕರೇ ಈ ಅಗ್ಗದ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸಿಗುತ್ತೆ!
Don't Miss
- News
ಬಳ್ಳಾರಿ: 300 ಕ್ಕೂ ಹೆಚ್ಚು ಮಾವು ತಳಿಗಳ ಪ್ರದರ್ಶನ, ಮಾರಾಟ ಮೇಳ
- Movies
ಸಾಕಷ್ಟು ನಟ-ನಟಿಯರಿಗೆ ಬಟ್ಟೆ ಡಿಸೈನ್ ಮಾಡುವುದು ಇವರೇ ನೋಡಿ
- Automobiles
ಥರ್ಡ್ ಪಾರ್ಟಿ ಇನ್ಸುರೆನ್ಸ್: ಜೂನ್ 1ರಿಂದ ವಾಹನ ಮಾಲೀಕತ್ವ ಮತ್ತಷ್ಟು ದುಬಾರಿ!
- Finance
ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ
- Sports
ಬಾಂಗ್ಲಾದೇಶ vs ಶ್ರೀಲಂಕಾ 2nd ಟೆಸ್ಟ್: ಗೆಲುವಿನ ಸನಿಹದಲ್ಲಿ ಲಂಕಾ: ಸೋಲಿನಿಂತ ತಪ್ಪಿಸಿಕೊಳ್ಳುತ್ತಾ ಬಾಂಗ್ಲಾ?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಡ್ಮಿ ನೋಟ್ 11 ಸರಣಿ ಲಾಂಚ್; ದೈತ್ಯ ಕ್ಯಾಮೆರಾ ಸೆನ್ಸಾರ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಹೊಸದಾಗಿ ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಬಾರೀ ಕುತೂಹಲ ಮೂಡಿಸಿದ್ದ ಈ ಸರಣಿಯಲ್ಲಿ ರೆಡ್ಮಿ ನೋಟ್ 11, ರೆಡ್ಮಿ ನೋಟ್ 11S ಮತ್ತು ರೆಡ್ಮಿ ನೋಟ್ 11 ಪ್ರೊ 4G ಹಾಗೂ 5G ವೇರಿಯಂಟ್ ಮಾಡೆಲ್ಗಳನ್ನು ಒಳಗೊಂಡಿದೆ. ಇನ್ನು ಈ ಸರಣಿಯ ರೆಡ್ಮಿ ನೋಟ್ 11 ಪ್ರೊ 4G ಹಾಗೂ 5G ಸ್ಮಾರ್ಟ್ಫೋನ್ 108 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.

ಹೌದು, ಶಿಯೋಮಿ ತನ್ನ ಬಹು ನಿರೀಕ್ಷಿತ ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಸರಣಿಯನ್ನು ವಿಶ್ವ ಮಾರುಕಟ್ಟೆಗೆ ಲಾಂಚ್ ಮಾಡಿದೆ. ರೆಡ್ಮಿ ನೋಟ್ 11, ರೆಡ್ಮಿ ನೋಟ್ 11S ಮತ್ತು ರೆಡ್ಮಿ ನೋಟ್ 11 ಪ್ರೊ 4G ಹಾಗೂ 5G ಫೋನ್ಗಳು 5,000 mAh ಬ್ಯಾಟರಿ ಬ್ಯಾಕ್ಅಪ್ ಆಯ್ಕೆ ಪಡೆದಿವೆ. ಈ ಫೋನ್ಗಳು ಭಿನ್ನ ಪ್ರೊಸೆಸರ್ ಬಲವನ್ನು ಒಳಗೊಂಡಿವೆ. ಈ ಫೋನ್ಗಳು ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹಾಗಾದರೆ ಶಿಯೋಮಿ ರೆಡ್ಮಿ ನೋಟ್ 11, ರೆಡ್ಮಿ ನೋಟ್ 11S ಮತ್ತು ರೆಡ್ಮಿ ನೋಟ್ 11 ಪ್ರೊ ಫೀಚರ್ಸ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ನೋಟ್ 11 ಪ್ರೊ 5G ಮತ್ತು ರೆಡ್ಮಿ ನೋಟ್ 11 ಪ್ರೊ 4G ಫೀಚರ್ಸ್
ಈ ಫೋನ್ ಹೈ ಎಂಡ್ ಮಾಡೆಲ್ ಆಗಿದೆ. ರೆಡ್ಮಿ ನೋಟ್ 11 ಪ್ರೊ 5G 6.67 ಇಂಚಿನ 1080p ಪ್ಯಾನೆಲ್ ಅನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಕ್ಯಾಮೆರಾ ಮುಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟ್ಅಪ್ 108 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದಿಂದ ಹೆಡ್ಲೈನ್ ಆಗಿದೆ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದಿಂದ ಸಹಾಯ ಮಾಡುತ್ತದೆ. ಈ ಫೋನ್ 5G ವೇಋಇಯಂಟ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 695 SoC ಪ್ರೊಸೆಸರ್ ಪಡೆದಿದ್ದು, ಇನ್ನು 4G ವೇರಿಯಂಟ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಅನ್ನು ಹೊಂದಿದೆ. ಎರಡೂ ಮಾದರಿಗಳು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿವೆ.
ರೆಡ್ಮಿ ನೋಟ್ 11S ಫೀಚರ್ಸ್
ರೆಡ್ಮಿ ನೋಟ್ 11S ಫೋನ್ 6.43 ಇಂಚಿನ ಪೂರ್ಣ ಹೆಚ್ಡಿ + ಡಿಸ್ಪ್ಲೇ ಹೊಂದಿದ್ದು, 90Hz AMOLED ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ 5,000 mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕಗಳು ಮತ್ತು ಹೆಡ್ಫೋನ್ ಜ್ಯಾಕ್ಗಳನ್ನು ಹೊಂದಿವೆ.

ರೆಡ್ಮಿ ನೋಟ್ 11 ಫೀಚರ್ಸ್
ರೆಡ್ಮಿ ನೋಟ್ 11 ಫೋನ್ 6.43 ಇಂಚಿನ ಪೂರ್ಣ ಹೆಚ್ಡಿ + ಡಿಸ್ಪ್ಲೇ ಹೊಂದಿದ್ದು, 90 Hz 1080p LCD ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ ಸ್ನಾಪ್ಡ್ರಾಗನ್ 680 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ಗಳು ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.
ಬೆಲೆ ಎಷ್ಟು?
ರೆಡ್ಮಿ ನೋಟ್ 11 ಪ್ರೊ ಆರಂಭಿಕ ಬೆಲೆಯು $330 ಆಗಿದೆ. ರೆಡ್ಮಿ ನೋಟ್ 11 ಫೋನಿನ ಆರಂಭಿಕ ವೇರಿಯಂಟ್ ದರವು $199 ಆಗಿದ್ದು, ರೆಡ್ಮಿ ನೋಟ್ 11S ಫೋನ್ ಬೇಸ್ ವೇರಿಯಂಟ್ ಬೆಲೆಯು $249 ಆಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999