ಬರಲಿದೆ ಹೊಸ 'ರೆಡ್ಮಿ ನೋಟ್ 11'!..ಕುತೂಹಲ ಮೂಡಿಸಿದ ಲೀಕ್ ಫೀಚರ್ಸ್‌!

|

ಜನಪ್ರಿಯ ಮೊಬೈಲ್‌ ಕಂಪನಿಗಳ ಪೈಕಿ ಒಂದಾದ ಶಿಯೋಮಿ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರೆಡ್ಮಿ ಸರಣಿಯಲ್ಲಿನ ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿವೆ. ಇತ್ತೀಚಿಗೆ ಶಿಯೋಮಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿ ಪರಿಚಯಿಸಿದ್ದು, ಈ ಸರಣಿಯು ಗ್ರಾಹಕರನ್ನು ಸೆಳೆದಿದೆ. ಇದೀಗ ಅದರ ಮುಂದಿನ ಆವೃತ್ತಿಯಾಗಿ ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡುವ ಸೂಚನೆ ನೀಡಿದೆ.

ಟಿಪ್‌ಸ್ಟರ್

ಹೌದು, ಶಿಯೋಮಿ ಕಂಪನಿಯು ರೆಡ್ಮಿ ನೋಟ್ 10 ಆವೃತ್ತಿಯ ಮುಂದುವರಿದ ಭಾಗವಾಗಿ ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಈ ಫೋನ್‌ ರೆಡ್ಮಿ ನೋಟ್ 10 ಸರಣಿಯ ಫೋನ್‌ ಫೀಚರ್ಸ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂದು ಟಿಪ್‌ಸ್ಟರ್ ಡಿಜಿಟಲ್ ಮಾಹಿತಿ ತಿಳಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮುಂದಿನ ವರ್ಷ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಲೀಕ್ ವರದಿಗಳಿಂದ ತಿಳಿದು ಬಂದಿದೆ.

ಚಾರ್ಜಿಂಗ್

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ನೂತನ ರೆಡ್ಮಿ ನೋಟ್ 11 ಸರಣಿಯು ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, 120W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ ಎನ್ನಲಾಗಿದೆ. ಆದಾಗ್ಯೂ, ರೆಡ್ಮಿ ನೋಟ್ 11 ಫೋನ್‌ ಸರಣಿಯಲ್ಲಿ 120W ವೇಗದ ಚಾರ್ಜಿಂಗ್ ಬೆಂಬಲವನ್ನು ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ ಮ್ಯಾಕ್ಸ್‌ ವೆರಿಯಂಟ್‌ಗಳು ಮಾತ್ರ ಒಳಗೊಂಡಿರಲಿವೆ.

ಶಿಯೋಮಿ

ಇದು ವರೆಗೂ ಶಿಯೋಮಿ ಕಂಪನಿಯು 120W ವೇಗದ ಚಾರ್ಜಿಂಗ್ ಬೆಂಬಲವನ್ನು ಶಿಯೋಮಿ 11T ಪ್ರೊ ಮತ್ತು ಶಿಯೋಮಿ ಮಿಕ್ಸ್‌ 4 ಸ್ಮಾರ್ಟ್‌ಫೋನ್‌ ಮಾಡೆಲ್‌ಗಳಲ್ಲಿ ನೀಡಿದೆ. ಹಾಗೆಯೇ ಮತ್ತೊಂದೆಡೆ, ಶಿಯೋಮಿ ಕಂಪನಿಯ ಮಿ 11 ಅಲ್ಟ್ರಾ ಫೋನ್ 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಶಿಯೋಮಿ ರೆಡ್ಮಿ ನೋಟ್ 10 ಸರಣಿಯು ಇತರ ಶಿಯೋಮಿ ಸ್ಮಾರ್ಟ್ ಫೋನ್ ಗಳಂತೆ 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಸೋರಿಕೆಯಾಗಿದ್ದು

ಹೊಸ ಬರಲಿರುವ ರೆಡ್ಮಿ ನೋಟ್ 11 ಫೋನ್‌ಗಳ ಸರಣಿಯ ಕೆಲವು ಫೋಟೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಮುಂಭಾಗದ ಕ್ಯಾಮೆರಾಕ್ಕಾಗಿ ಹೋಲ್ ಪಂಚ್ ಕಟೌಟ್‌ ಇರುವುದನ್ನು ತೋರಿಸಲಾಗಿದೆ. ಹಾಗೆಯೇ ಫುಲ್‌ ಸ್ಕ್ರೀನ್ ಡಿಸ್‌ಪ್ಲೇ ರಚನೆಯನ್ನು ಈ ಲೈನ್ ಅಪ್ ಹೊಂದಿರಲಿದೆ ಎಂದು ಸೂಚಿಸಲಾಗಿದೆ. ಇನ್ನು ಫೋನ್ ಹಿಂಭಾಗದಲ್ಲಿ ಕೆಲವು ಬದಲಾವಣೆಗಳಿರಲಿದ್ದು, ಮುಖ್ಯವಾಗಿ ಹೆಚ್ಚು ಸ್ಕ್ವೇರ್ ಆಫ್ ಕ್ಯಾಮೆರಾ ಮಾಡ್ಯೂಲ್ ಇರಲಿದೆ ಎನ್ನಲಾಗಿದೆ. ಹಾಗೆಯೇ ಪವರ್ ಮತ್ತು ವಾಲ್ಯೂಮ್ ಕೀಗಳು ಫೋನಿನ ಬಲಭಾಗದಲ್ಲಿವೆ. ಆದರೆ ಸಿಮ್-ಟ್ರೇ ಆಯ್ಕೆಯನ್ನು ಎಡಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಬಲದೊಂದಿಗೆ

ಇನ್ನು ಈ ಹಿಂದಿನ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM + 64GB, 6GB + 128GB ಮತ್ತು 8GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. 5,020mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಪ್ರೊಸೆಸರ್‌

ಹಾಗೆಯೇ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 6GB RAM + 64GB ಮತ್ತು 6GB + 128GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. 5,020mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Most Read Articles
Best Mobiles in India

English summary
Redmi Note 11 Pro Tipped To Come With 120W Charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X