Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ 08-12-2019
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಇಂದು ಮತ್ತೆ 'ರೆಡ್ಮಿ ನೋಟ್ 8 ಪ್ರೊ' ಸೇಲ್!.ಆರಂಭಿಕ ಬೆಲೆ 14,999ರೂ!
ಶಿಯೋಮಿ ಕಂಪನಿಯ ಜನಪ್ರಿಯ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದು, ಅಧಿಕ ಗ್ರಾಹಕರನ್ನು ಸೆಳೆದಿದೆ. ಬಹುಬೇಡಿಕೆಯ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ ಮತ್ತೊಂದು ಸೇಲ್ ಇಂದು(ನ.13ರಂದು) ಮಧ್ಯಾಹ್ನ 12ರಿಂದ ಅಮೆಜಾನ್ ಮತ್ತು Mi.comನಲ್ಲಿ ಆರಂಭವಾಗಲಿದೆ. 64ಎಂಪಿ ಕ್ಯಾಮೆರಾ, ಬಿಗ್ ಬ್ಯಾಟರಿ ಲೈಫ್ ಮತ್ತು ಮೀಡಿಯಾ ಟೆಕ್ ಹಿಲಿಯೊ G90T ಪ್ರೊಸೆಸರ್ ಪ್ರಮುಖ ಹೈಲೈಟ್ಸ್ಗಳಾಗಿವೆ.

ಹೌದು, ಶಿಯೋಮಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ ಈಗಾಗಲೇ ಇ-ಕಾಮರ್ಸ್ ತಾಣಗಳಲ್ಲಿ ಸೇಲ್ ಕಂಡಿದ್ದು, ಇಂದು ಮತ್ತೆ ಖರೀದಿಗೆ ಲಭ್ಯವಾಗಲಿದೆ. ಆರಂಭಿಕ 6GB RAM + 64GB ವೇರಿಯಂಟ್ ಬೆಲೆಯು 14,999ರೂ.ಗಳಾಗಿದ್ದು, 6GB RAM + 128GB ವೇರಿಯಂಟ್ ಬೆಲೆಯು 15,999ರೂ.ಗಳಾಗಿದೆ. ಹಾಗೆಯೇ ಟಾಪ್ ಎಂಡ್ 8GB RAM + 128GB ವೇರಿಯಂಟ್ 17,999ರೂ.ಗಳಿಗೆ ಸಿಗಲಿದೆ. ಹಾಗಾದರೇ ರೆಡ್ಮಿ ನೋಟ್ 8 ಪ್ರೊ ಫೋನಿನ ಇತರೆ ಫೀಚರ್ಸ್ಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ಪ್ರಖರತೆ
ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್ಫೋನ್ 6.53 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದ್ದು, ಇದರ ಡಿಸ್ಪ್ಲೇಯು 1080×2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್ಪ್ಲೇಯ ಪ್ರಖರತೆ ಅತ್ಯುತ್ತಮವಾಗಿದ್ದು, ಬಿಸಿಲಿನಲ್ಲಿಯೂ ಡಿಸ್ಪ್ಲೇ ಉತ್ತಮವಾಗಿ ಕಾಣಿಸುತ್ತದೆ. ಹಾಗೆಯೇ ಡಿಸ್ಪ್ಲೇಯು HDR ಬೆಂಬಲವನ್ನು ಒಳಗೊಂಡಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಕ್ಯಾಮೆರಾ
ಶಿಯೋಮಿಯ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನಿನ ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್ನಲ್ಲಿದ್ದು, ಸ್ಯಾಮ್ಸಂಗ್ GW1 ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಸೆನ್ಸಾರ್ನಲ್ಲಿದ್ದು, ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ನಲ್ಲಿದ್ದು, ಡೆಪ್ತ್ ಮೋಡ್ ಪಡೆದಿವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್ನಲ್ಲಿದೆ. ಕ್ಯಾಮೆರಾಗಳು 30fps ಸಾಮರ್ಥ್ಯದಲ್ಲಿ 1080p ವಿಡಿಯೊ ಸೆರೆಹಿಡಿಯಲು ಬೆಂಬಲ ನೀಡುತ್ತವೆ.

ಪ್ರೊಸೆಸರ್ ಕಾರ್ಯ
'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ 'ಮೀಡಿಯಾ ಟೆಕ್ ಹಿಲಿಯೊ G90T' ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ MIUI 10 ಆಧಾರಿತ ಆಂಡ್ರಾಯ್ಡ್ 9 ಪೈ ಓಎಸ್ ಪಡೆದುಕೊಂಡಿದೆ. ಹೆಚ್ಚು ಡೇಟಾ ಬೇಡುವ ಗೇಮ್ಸ್ಗಳಿಗೆ ಅತ್ಯುತ್ತಮ ಪ್ಲಾಟ್ಫಾರ್ಮ್ ಒದಗಿಸಲಿದ್ದು, ಮಲ್ಟಿಟಾಸ್ಕ್ ಕೆಲಸಗಳು ಸಹ ಕ್ವಿಕ್ ಆಗಿ ನಡೆಯುತ್ತವೆ. ಹಾಗೆಯೇ ಈ ಸ್ಮಾರ್ಟ್ಫೋನ್ 6GB / 8GB RAM ಮತ್ತು 64GB / 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬ್ಯಾಟರಿ ಪವರ್
'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ತುಂಬಿಕೊಂಡಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಸುಮಾರು 30 ನಿಮಿಷಗಳಲ್ಲಿ ಶೇ.40% ಪರ್ಸೆಂಟ್ನಷ್ಟು ಚಾರ್ಜ್ ಒದಗಿಸುವ ಸಾಮರ್ಥ್ಯ ಪಡೆದಿದ್ದು, ಸುಮಾರು 90 ನಿಮಿಷಗಳು ಚಾರ್ಜ್ ಮಾಡಿದರೇ ಸ್ಮಾರ್ಟ್ಫೋನ್ ಬ್ಯಾಟರಿ ಪೂರ್ಣಗೊಳ್ಳುತ್ತದೆ.

ಬೆಲೆ ಮತ್ತು ಲಭ್ಯತೆ
'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್ಫೋನ್ ಬಜೆಟ್ ದರದಲ್ಲಿ ಗುರುತಿಸಿಕೊಂಡಿದ್ದು, ಈ ಸ್ಮಾರ್ಟ್ಫೋನಿನ ಆರಂಭಿಕ ಬೆಲೆಯು 14,999ರೂ.ಗಳು ಆಗಿದೆ. ಇನ್ನು 8GB RAM ಮತ್ತು 128GB ಸ್ಟೋರೇಜ್ನ ಟಾಪ್ಎಂಡ್ ವೇರಿಯಂಟ್ 17,999ರೂ.ಗಳಿಗೆ ಸಿಗಲಿದೆ. ಗ್ರೀನ್, ಹಾಲೊ ವೈಟ್ ಮತ್ತು ಶಾಡೋ ಬ್ಲ್ಯಾಕ್ ಕಲರ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090