Just In
Don't Miss
- News
ಕೆಂಪೇಗೌಡ ಅಧ್ಯಯನ ಪೀಠ ವಿವಾದಕ್ಕೆ ಹೊಸ ತಿರುವು..
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ರೆಡ್ಮಿ ನೋಟ್ 8T' ಫೋನ್ ಲಾಂಚ್!..ಬೆಲೆ ಎಷ್ಟು?..ವಿಶೇಷತೆ ಏನು?
ಚೀನಾ ಮೂಲದ ಶಿಯೋಮಿ ಕಂಪನಿಯು ಇತ್ತೀಚಿಗೆ ರೆಡ್ಮಿ ನೋಟ್ 8 ಮತ್ತು ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್ಫೋನ್ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಬೆನ್ನಲ್ಲೇ ಇದೀಗ ಮತ್ತೆ ರೆಡ್ಮಿ ನೋಟ್ 8 ಸರಣಿಯಲ್ಲಿಯೇ ಹೊಸದಾಗಿ ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ನೂತನ ಸ್ಮಾರ್ಟ್ಫೋನ್ ಗ್ರಾಹಕರಲ್ಲಿ ಖುಷಿಯೊಂದಿಗೆ ಅಚ್ಚರಿಯನ್ನು ಮೂಡಿಸಿದೆ. ಯಾಕೆ ಅಂತೀರಾ?

ಹೌದು, ಶಿಯೋಮಿ ಹೊಸ ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಅನ್ನು ಯುರೋಪ್ನಲ್ಲಿ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್ಫೋನ್ NFC ಫೀಚರ್ ಸಫೋರ್ಟ್ ಪಡೆದುಕೊಂಡಿದೆ. ಉಳಿದಂತೆ ಕ್ವಾಡ್ ಕ್ಯಾಮೆರಾ, ಸ್ನ್ಯಾಪ್ಡ್ರಾಗನ್ 665, ವಾಟರ್ನಾಚ್ ಡಿಸ್ಪ್ಲೇ ಫೀಚರ್ಸ್ಗಳು ಈ ಸ್ಮಾರ್ಟ್ಫೋನಿನ ಪ್ರಮುಖ ಹೈಲೈಟ್ಸ್ಗಳಾಗಿವೆ. ಹಾಗಾದರೇ ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಇತರೆ ಫೀಚರ್ಸ್ಗಳೆನು? ಭಾರತಕ್ಕೆ ಎಂಟ್ರಿ ಆಗುತ್ತಾ? ಮತ್ತು ಬೆಲೆ ಎಷ್ಟು ಎನ್ನುವ ಮಾಹಿತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್ಪ್ಲೇ ಹೇಗಿದೆ
ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದ್ದು, ವಾಟರ್ನಾಚ್ ಮಾದರಿಯಲ್ಲಿದೆ. ಡಿಸ್ಪ್ಲೇಯ ಅನುಪಾತವು 19.5:9 ಆಗಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 88.3% ಪರ್ಸೆಂಟ್ ಆಗಿದೆ. ಡಿಸ್ಪ್ಲೇಯು ಸನ್ಲೈಟ್ ಮೋಡ್, ನೈಟ್ಮೋಡ್ ಮತ್ತು ರೀಡಿಂಗ್ ಮೋಡ್ ಮಾದರಿಯ ಆಯ್ಕೆಗಳನ್ನು ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 665 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ ಆಡ್ರಿನೊ 610 GPU ಸಹ ಪಡೆದುಕೊಂಡಿದೆ. ಹಾಗೆಯೇ 3GB RAM + 32GB ಹಾಗೂ 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಗ್ರಾಹಕರು ಎಸ್ಡಿ ಕಾರ್ಡ್ ಮೂಲಕ ಸುಮಾರು 256GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ವಾಡ್ ಕ್ಯಾಮೆರಾ
ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್ಅಪ್ ಆಯ್ಕೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು ವೈಲ್ಡ್ ಆಂಗಲ್ ಲೆನ್ಸ್ ಪಡೆದಿದ್ದು, 8ಎಂಪಿ ಸೆನ್ಸಾರ್ನಲ್ಲಿದೆ.ಇನ್ನು ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್ನಲ್ಲಿದ್ದು, AI ಬೆಂಬಲ ಪಡೆದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಮತ್ತು 3.0 ಕ್ವಿಕ್ ಚಾರ್ಜ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಫಿಂಗರ್ಪ್ರಿಂಟ್ ಸೆನ್ಸಾರ್, ಜಿಪಿಎಸ್, ವೈಫೈ, ಬ್ಲೂಟೂತ್, ಆಂಬಿಯಂಟ್ ಲೈಟ್, ಎಸ್ಡಿ ಕಾರ್ಡ್ ಆಯ್ಕೆ ಸೇರಿದಂತೆ ಇತರೆ ಅಗತ್ಯ ಫೀಚರ್ಸ್ಗಳನ್ನು ತುಂಬಿಕೊಂಡಿದೆ.

ಭಾರತಕ್ಕೆ ಈ ಫೋನ್ ಬರುತ್ತಾ?
ಭಾರತದಲ್ಲಿ ಶಿಯೋಮಿಯು ಇತ್ತೀಚಿಗಷ್ಟೆ ರೆಡ್ಮಿ ನೋಟ್ 8 ಸರಣಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಯುರೋಪ್ನಲ್ಲಿ ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಲಾಂಚ್ ಮಾಡಿದೆ. ರೆಡ್ಮಿ ನೋಟ್ 8T ಫೋನ್ ಬಹುತೇಕ ಭಾರತದಲ್ಲಿ ಲಾಂಚ್ ಆಗಿರುವ ರೆಡ್ಮಿ ನೋಟ್ 8 ಫೋನ್ ಅನ್ನೇ ಹೋಲುತ್ತದೆ. ಆದ್ರೆ ರೆಡ್ಮಿ ನೋಟ್ 8T ಫೋನ್ NFC ಆಯ್ಕೆ ಸಪೋರ್ಟ್ ಪಡೆದಿದೆ. ಹೀಗಾಗಿ ಈ ಫೋನ್ ಭಾರತಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಕಡಿಮೆ.

ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್ 8T ಸ್ಮಾರ್ಟ್ಫೋನ್ ಯುರೋಪ್ನಲ್ಲಿ ಲಾಂಚ್ ಆಗಿದ್ದು, ಇದೇ ನಂವೆಂಬರ್ 13ರಿಂದ ಸೇಲ್ ಆರಂಭಿಸಲಿದೆ. 3GB RAM + 32GB ವೇರಿಯಂಟ್ ಬೆಲೆಯು EUR 179 ಆಗಿದೆ. (ಭಾರತದಲ್ಲಿ ಅಂದಾಜು 14,000ರೂ) ಹಾಗೆಯೇ 4GB RAM ಮತ್ತು 128GB ವೇರಿಯಂಟ್ ಬೆಲೆಯು EUR 249 ಆಗಿದೆ(ಭಾರತದಲ್ಲಿ ಅಂದಾಜು 20,000ರೂ.)
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090